Advertisement

ಬೆಳಗಾವಿ: ಸಿಡಿಲು ಬಡಿದು ಮಗ ಸಾವು, ತಾಯಿ ಗಂಭೀರ

08:20 PM Apr 14, 2022 | Team Udayavani |

ಬೆಳಗಾವಿ: ನಗರ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಸುರಿದ ಗುಡುಗು-ಸಿಡಿಲು ಮಿಶ್ರಿತ ಧಾರಾಕಾರ ಮಳೆ ಸುರಿದಿದ್ದು, ತಾಲ್ಲೂಕಿನ ತುಮ್ಮರಗುದ್ದಿಯಲ್ಲಿ ಸಿಡಿಲು ಬಡಿದು ಮಗ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ತುಮ್ಮರಗುದ್ದಿ ಗ್ರಾಮದ ಭೀಮಪ್ಪ ಅಡಿವೆಪ್ಪ ಬಸರಿಮರದ(25) ಎಂಬ ಯುವಕ ಮೃತಪಟ್ಟಿದ್ದಾನೆ. ತಾಯಿ ಹೊಳಡವ್ವ ಅಡಿವೆಪ್ಪ ಬಸರಿಮರದ(47) ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತುಮ್ಮರಗುದ್ದಿ ಗ್ರಾಮದ ಹೊರವಲಯದ ಹೊಲದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ತಾಯಿ-ಮಗ ಸೇರಿಂದತೆ ನಾಲ್ಕೈದು ಜನ ಇರುತ್ತಿದ್ದರು. ತಾಯಿ-ಮಗನಿಗೆ ಸಿಡಿಲು ಬಡಿದಿದೆ. ಗಂಭೀರ ಗಾಯಗೊಂಡಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟಿದ್ದಾನೆ.

ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆ‌ ಸುರಿದಿದೆ. ಗುಡುಗು-ಸಿಡಿಲು ಮಿಶ್ರಿತ ಗಾಳಿ-ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಕಡೆಗೆ ಗಿಡದ ಟೊಂಗೆಗಳು ಮುರಿದು ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next