Advertisement

ಚಿದಂಬರ ನಗರ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಪಾಟೀಲ

11:04 AM Jan 27, 2019 | Team Udayavani |

ಬೆಳಗಾವಿ: ಚಿದಂಬರ ನಗರದಲ್ಲಿನ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಹಂತ ಹಂತವಾಗಿ ಪರಿಹಾರ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

Advertisement

ಮಹಾನಗರ ಪಾಲಿಕೆಯ ನೂತನ ವಾರ್ಡ್‌ 43 ರ ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ರಸ್ತೆ, ವಿದ್ಯುತ್‌, ಕಸ ವಿಲೇವಾರಿ, ಹಿರಿಯರ ಸೇವಾ ಕೇಂದ್ರ, ಓಪನ್‌ ಜಿಮ್‌ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಜನರು ಪ್ರಸ್ತಾಪ ಮಾಡಿದ್ದಾರೆ. ಈ ಎಲ್ಲವೂ ನನ್ನ ಗಮನಕ್ಕೆ ಬಂದಿದ್ದು, ಅವುಗಳನ್ನು ಹಂತ, ಹಂತವಾಗಿ ಆದ್ಯತೆ ಮೇರೆಗೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ನಾನು ಕೇವಲ ಭರವಸೆ ಕೊಟ್ಟು ಹೋಗುವ ವ್ಯಕ್ತಿಯಲ್ಲ. ಇಲ್ಲಿನ ಸಮಸ್ಯೆಗಳ ಕುರಿತು ನಾನೇ ಖುದ್ದಾಗಿ ಹೆಸ್ಕಾಂ, ನಗರ ನೀರು ಸರಬರಾಜು ಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಭೆ ನಡೆಸುವೆ. ಸಮಸ್ಯೆಗಳನ್ನು ಆಲಿಸಲು ಅವರನ್ನೇ ವಾರ್ಡಿಗೆ ಕಳಿಸುವುದಾಗಿ ಹೇಳಿದರು.

ನನ್ನ ಕ್ಷೇತ್ರದಲ್ಲಿ ಯಾರಾದರೂ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಿದರೆ ನಾನೇ ಖುದ್ದು ಪರಿಶೀಲನೆಗೆ ಹೋಗುತ್ತೇನೆ. ನಂತರ ಈ ಕಾಮಗಾರಿ ಗುಣಮಟ್ಟವಾಗುವ ತನಕ ಸಂಬಂಧಿಸಿದ ಗುತ್ತಿಗೆದಾರನಿಗೆ ಹಣ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಲಿಖಿತ ಪತ್ರ ನೀಡುತ್ತೇನೆ ಎಂದರು.

ಬೆಳಗಾವಿ ಜನರ ತೆರಿಗೆ ಮಹಾನಗರ ಪಾಲಿಕೆಗೆ ಸಂದಾಯವಾಗುತ್ತದೆ. ಹೀಗಾಗಿ ಇಲ್ಲಿ ನಗರ ಸೇವಕರ ಪಾತ್ರ ಹೆಚ್ಚಿಗಿದೆ. ಆದರೆ ಬಹುತೇಕ ಕಡೆಗೆ ನಗರ ಸೇವಕರು ತಮ್ಮ ವಾರ್ಡ್‌ ಭೇಟಿ ಕಾರ್ಯಕ್ರಮವನ್ನೇ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ವಾರ್ಡ್‌ ಸಮಸ್ಯೆಗೆ ಸ್ಪಂದಿಸುವ ನಗರ ಸೇವಕರನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

Advertisement

ಹಿರಿಯ ವಕೀಲ ಎಸ್‌.ಎಂ. ಕುಲಕರ್ಣಿ, ಬಿಜೆಪಿ ಮುಖಂಡ ಆರ್‌.ಎಸ್‌. ಮುತಾಲಿಕ ದೇಸಾಯಿ, ವಿ.ಎನ್‌. ಜೋಶಿ, ಅರವಿಂದ ಹುನಗುಂದ, ಸಂಜೀವ ಕುಲಕರ್ಣಿ, ಮಹೇಶ್‌ ಮುಳಗುಂದ, ಪ್ರಶಾಂತ ಕುಲಕರ್ಣಿ, ಅನಂತರಾಮ ಕಲ್ಲೂರಾಯ, ಸ್ನೇಹಾ ಜೋಶಿ, ಅರುಣ ಉಪಸ್ಥಿತರಿದ್ದರು. ಸಂಘಟಕಿ ವಾಣಿ ವಿಲಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next