ಬೆಳಗಾವಿ: ಸೀರೆಯುಟ್ಟ ಯುವತಿಯರು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವಯೋಮಾನದ ಸುಮಾರು 500ಕ್ಕೂ ಹೆಚ್ಚು ಜನ ಸುಮಾರು 3 ಕಿ.ಮೀ. ಸಾರಿ ವಾಕ್‌ಥಾನ್‌ನಲ್ಲಿ ಪಾಲ್ಗೊಂಡು ಗಮನಸೆಳೆದರು. ರೋಟರಿ ಕ್ಲಬ್ ಆಫ್ ಬೆಳಗಾವಿ ಎಲೈಟ್, ಮಾರವಾಡಿ ಯುವ ಮಂಚ್ ಮಹಿಳಾ ವಿಭಾಗ ಪಂಖ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಸಾರಿ ವಾಕಥಾನ್ ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಿಂದ 3 ಕಿ.ಮೀ. ನಡೆಯಿತು.
Advertisement
ಸೀರೆಯುಟ್ಟ ನಾರಿಯರು ವಾಕ್‌ಥಾನ್‌ನಲ್ಲಿ ಪಾಲ್ಗೊಂಡಿದ್ದರು. ಸೀರೆಯುಟ್ಟು ಬೂಟ್ ಹಾಕಿದ ಮಹಿಳೆಯರು, ಮಡಿಲಲ್ಲಿ ಮಗುವನ್ನು ಕಟ್ಟಿಕೊಂಡಿದ್ದ ಮಹಿಳೆ, ದೇಶದ ವಿವಿಧ ಭಾಗಗಳ ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟಿದ್ದ ನಾರಿಯರು ಗಮನಸೆಳೆದರು. ಟೋಪಿ ಧರಿಸಿ ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
Related Articles
Advertisement
ಪೊಲೀಸ್ ಕಮಿಷನರೆಟ್‌ದಿಂದ ಮ್ಯಾರಥಾನ್ಬೆಳಗಾವಿ ಮಹಾನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಮಾದಕ ವ್ಯಸನ ವಿರುದ್ಧ ಜಾಗೃತಿಯ ಮ್ಯಾರಥಾನ್ ನಡೆಯಿತು. ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಆರಂಭವಾದ ಮ್ಯಾರಥಾನ್ ನಲ್ಲಿ ಪೊಲೀಸ್ ಅ ಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಸೇರಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.