Advertisement

ಬೆಳಗಾವಿ: ದಾಖಲೆ‌ ಇಲ್ಲದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

11:19 PM Apr 04, 2023 | Team Udayavani |

ಬೆಳಗಾವಿ: ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 40 ಲಕ್ಷ ರೂ ಮೌಲ್ಯದ ಚೆನ್ನಾಭರಣವನ್ನು ಖಾನಾಪುರ ತಾಲೂಕಿನ ನಂದಗಡ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಹಳಿಯಾಳದಿಂದ ಕಕ್ಕೇರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 21.25 ಲಕ್ಷ ರೂ.‌ಮೌಲ್ಯದ 395 ಗ್ರಾಂ‌ ಚಿನ್ಮಾಭರಣ ಹಾಗೂ 19 ಲಕ್ಷ ರೂ.‌ಮೌಲ್ಯದ 28 ಕೆ.ಜಿ. ಬೆಳ್ಳಿಯ ಆಭರಣ, ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೆಳಗಾವಿಯ ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಈ ಪೈಕಿ ಹಳಿಯಾಳದಿಂದ ಕಕ್ಕೇರಿಗೆ ಸಾಗಿಸುತ್ತಿದ್ದ ಈ ಚಿನ್ನಾಭರಣದ ದಾಖಲೆಗಳು ಇರಲಿಲ್ಲ. ಪೊಲೀಸರು ತಪಾಸಣೆ ನಡೆಸಿ ಚಿನ್ನಾಭರಣ ಹಾಗೂ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next