ಬೆಳಗಾವಿ: ಜಿಲ್ಲೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ದಾಳಿ ನಡೆಸಿ ಸುಮಾರು 2.15 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 1.20 ಲಕ್ಷ ರೂ. ಮೌಲ್ಯದ 120 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸುಟ್ಟಟ್ಟಿ ಗ್ರಾಮದ ಲಕ್ಕಪ್ಪ ಸತ್ಯಪ್ಪ ಖೋತ ಹಾಗೂ ಲಕ್ಮಣ ಲಕ್ಕಪ್ಪ ಖೋತ ಎಂಬಾತರನ್ನು ಬಂಧಿಸಲಾಗಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರದ ಜತ್ತ ತಾಲೂಕಿನ ಜೀರಗಿಹಾಳ ಗ್ರಾಮದ ಸಾಗರ ಭರಮಣ್ಣ ಕಟ್ಟೇಕಾರ ಹಾಗೂ ಗುರುಲಿಂಗ ಹೊಳೆಪ್ಪ ಡೊಳ್ಳಿ ಎಂಬಾತರನ್ನು ಬಂಧಿಸಲಾಗಿದೆ. 39 ಸಾವಿರ ರೂ. ಮೌಲ್ಯದ ಸುಮಾರು 2 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
17 ಕೆ.ಜಿ. ಗಾಂಜಾ ವಶ: ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಲಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ 17 ಕೆ.ಜಿ. ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮುಗಳಖೋಡ ಗ್ರಾಮದ ಶಿವಪ್ಪ ಸತ್ಯಪ್ಪ ಶಿರಗಾಂವಿಯನ್ನು ಬಂಧಿಸಲಾಗಿದೆ. ಸುಮಾರು 36 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿ ಪಿಎಸ್‌ಐ ಆರ್.ಎಚ್. ಬಗಲಿ, ಸಿಬ್ಬಂದಿಗಳಾದ ಬಿ.ಬಿ.ಮಾರ್ಗನಕೊಪ್ಪ, ಬಿ.ಎಚ್. ಮಾಳಿ, ಎಸ್.ಎಂ.ಚೌಗಲಾ, ಕೆ.ವಿ. ಚೆಲ್ಲಿಕೇರಿ, ಆರ್.ಆರ್. ಕರಿಗಾರ, ಬಿ.ಎ. ಲಕ್ಕನ್ನವರ, ಆರ್.ಎಲ್. ಶೀಳನ್ನವರ, ಎ.ಎಂ. ಮೆಂಡಿಗೇರಿ ದಾಳಿ ನಡೆಸಿದ್ದರು. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಟಕುರ್ಕಿ ಗ್ರಾಮದ ಮಹಾಂತೇಶ ರಾಮಣ್ಣ ಕಲುತಿ ಎಂಬಾತನನ್ನು ಬಂಧಿಸಲಾಗಿದೆ. 17 ಸಾವಿರ ರೂ. ಮೌಲ್ಯದ 872 ಗ್ರಾಂ. ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.