Advertisement
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ರಣತಂತ್ರ ಹೆಣೆಯುತ್ತಿದ್ದರೆ, ಈ ಬಿಗ್ ಫೆ„ಟ್ ಹೇಗಾದರೂ ಮಾಡಿ ಬಿಟ್ಟು ಕೊಡದಿರಲು ಬಿಜೆಪಿ-ಕಾಂಗ್ರೆಸ್-ಆಪ್ ಪ್ರತಿ ತಂತ್ರ ಹೆಣೆಯಲು ಶತಾಯಗಾತ ಪ್ರಯತ್ನ ನಡೆಸುತ್ತಿವೆ. ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ಶುರುವಾಗಿದೆ.
Related Articles
Advertisement
ಕಾಂಗ್ರೆಸ್‌ನವರ ಬಳಿ ಬಹುತೇಕ ಅಂತಿಮ ಪಟ್ಟಿ ಸಿದ್ಧಗೊಂಡಿದ್ದರೂ ಇನ್ನೂ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಸೋಮವಾರ ಆ. 23ರಂದು ಬೆಳಗ್ಗೆ 10 ಗಂಟೆಯ ನಂತರ ಎಲರೂ ಒಟ್ಟಾಗಿ ನಾಮಪತ್ರ ಸಲ್ಲಿಸಲು ತೆರಳಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬಹಳ ಪ್ರತಿಷ್ಠೆಯಾಗಿ ಈ ಚುನಾವಣೆಯನ್ನು ತೆಗೆದುಕೊಂಡಿದ್ದು, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ದಾರೆ. ಪಟ್ಟಿ ಸಿದ್ಧಗೊಳಿಸಿ ಬೆಂಗಳೂರಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಈಗಾಗಲೇ ಅನೇಕ ಮಂದಿ ಕಡೆಯಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಮೌಖೀಕವಾಗಿ ಹೇಳಿದೆ. ಅದರಂತೆ ಅನೇಕರು ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಾಮಪತ್ರ ಸಲ್ಲಿಸುತ್ತಿದ್ದಾರೆ. ನಂತರ ಆ. 23ರಂದು ಸಂಜೆ 4 ಗಂಟೆಯ ಬಳಿಕ ಕೆಲವು ವಾರ್ಡ್‌ಗಳ ಹೆಸರುಗಳನ್ನು ಫೆ„ನಲ್ ಮಾಡಲಿದೆ. ಆ. 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದರಿಂದ ಅಲ್ಲಿಯವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.