Advertisement

ಮೆಗಾ ಲಸಿಕಾ ಮೇಳದಲ್ಲಿ ದೇಶಕ್ಕೆ‌ ಬೆಳಗಾವಿ ದ್ವಿತೀಯ ಸ್ಥಾನ

11:41 AM Sep 18, 2021 | Team Udayavani |

ಬೆಳಗಾವಿ: ದೇಶದಲ್ಲಿ ಸೆ. 17ರಂದು ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆ ಎರಡನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

Advertisement

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸೆ.17 ರಂದು‌‌ ಒಂದೇ ದಿನದಲ್ಲಿ 2,57,604 ಲಸಿಕೆ ನೀಡುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ.

ಬೆಳಗಾವಿ ಜಿಲ್ಲೆಯು ಮೂರು‌ ಲಕ್ಷ ಲಸಿಕೆಯ ಗುರಿಯನ್ನು ಹೊಂದಿತ್ತು. ನಿರೀಕ್ಷಿತ ಗುರಿಸಾಧನೆಯಾಗದಿದ್ದರೂ ಒಟ್ಟಾರೆ ಲಸಿಕೆ ಪ್ರಮಾಣದಲ್ಲಿ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಲಸಿಕೆ ನೀಡುವುದರಲ್ಲಿ ದ್ವಿತೀಯ ಸ್ಥಾನ‌ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.

ಇದನ್ನೂ ಓದಿ:ತಿಗರಪಾಳ್ಯ ಘಟನೆ: 5 ದಿನ ಶವಗಳ ಮುಂದೆ ಕಣ್ಣೀರಿಟ್ಟು ಬದುಕಿದ ಎರಡೂವರೆ ವರ್ಷದ ಪ್ರೇಕ್ಷಾ!

Advertisement

ಈ ಸಾಧನೆಗೆ ಶ್ರಮಿಸಿದ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೆಗಾ ಲಸಿಕಾಮೇಳ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next