Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ಪ್ರಕರಣಗಳ ಆರೋಪಿ ಯಾವುದೇ ಜೈಲಿನಲ್ಲಿರಲಿ, ಆತನನ್ನು ಅಲ್ಲಿಂದಲೇ ವಿಡಿಯೋ ಮೂಲಕ ವಿಚಾರಣೆ ಮಾಡಲಾಗುವುದು. ಫೆ. 10ರಂದು ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾ ವಿಚಾರಣೆಯನ್ನು ಇ- ಕೋರ್ಟ್ ಮೂಲಕ ನಡೆಸಲಾಗುವುದು.ಇಂಥ ವಿಚಾರಣೆಯಿಂದ ನ್ಯಾಯಾಲಯಕ್ಕೆ ಭೂಗತ ಪಾತಕಿಗಳನ್ನು, ಕುಖ್ಯಾತ ಅಪರಾಧಿಗಳನ್ನು ಜೈಲಿನಿಂದ ತರುವಾಗ ಎದುರಿಸಬೇಕಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ, ಸರ್ಕಾರದ ಮೇಲಿನ ಖರ್ಚಿನ ಹೊರೆ ಕಡಿಮೆಯಾಗಲಿದೆ. ಸಮಯವೂ ಉಳಿಯಲಿದೆ ಎಂದರು.