Advertisement

ಮೋದಿ ಅಲೆ ಮೇಲೆ ಮತ್ತೆ ಸುರೇಶ ಜಯದ ಅಂಗಡಿ

12:20 PM May 26, 2019 | Team Udayavani |

ಬೆಳಗಾವಿ: ಕಾಂಗ್ರೆಸ್‌ ಪಕ್ಷದ ಒಳಜಗಳ, ಅಸಮಾಧಾನದ ಲಾಭ ಪಡೆದು ಮತ್ತೂಮ್ಮೆ ಮೋದಿ ಅಲೆಯ ಮೇಲೆ ಸವಾರಿ ಮಾಡುತ್ತ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಾಲ್ಕನೇ ಬಾರಿಗೆ ಜಯದ ದಡ ಸೇರಿದ್ದಾರೆ.

Advertisement

ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ಕಣಕ್ಕಿಳಿಸಿದ ದುರ್ಬಲ ಅಭ್ಯರ್ಥಿ ವಿರುದಟಛಿ ಜಯ ಸುರೇಶ ಅಂಗಡಿಗೆ ಇನ್ನೂ ಸುಲಭವಾಯಿತು. ಸದಾ ಅದೃಷ್ಟವನ್ನು ಕೈಯಲ್ಲೇಹಿಡಿದುಕೊಂಡು ಬಂದಿರುವ ಸುರೇಶ ಅಂಗಡಿ ಸತತ ನಾಲ್ಕನೇ
ಬಾರಿಗೆ ಜ ಯದ ನಗೆ ಬೀರಿ ಮಾಜಿ ಸಂಸದ ಸಿದ್ನಾಳ ಅವರ ದಾಖಲೆ ಸರಿಗಟ್ಟಿದ್ದಾರೆ. ಐದು ವರ್ಷಗಳ ಹಿಂದಿನ ಮತ್ತು ಈಗಿನ ಲೋಕಸಭೆ ಚುನಾವಣೆಯಲ್ಲಿ ಸರ್ಕಾರಗಳ ಸಾಧನೆಗಿಂತ ಆಡಳಿತ ಪಕ್ಷದ ಪರ ಅಲೆಯೇ ಹೆಚ್ಚು ಕೆಲಸ ಮಾಡಿದೆ. ಇದರ ಜೊತೆಗೆ ಜಾತಿ ಹಾಗೂ ಹೊಂದಾಣಿಕೆ ರಾಜಕಾರಣ ಮತ್ತೂಮ್ಮೆ ಈ ಚುನಾವಣೆಯಲ್ಲಿ ತನ್ನ ಪ್ರಭಾವ ತೋರಿಸಿದೆ.

2014 ಹಾಗೂ 2019ರ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೇ ಮತದಾರರ ಮೇಲೆ ಗಾಢ ಪರಿಣಾಮ
ಬೀರಿದ್ದು ವಿಶೇಷ.

2004ರಲ್ಲಿ ವಾಜಪೇಯಿ, 2009ರಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪ್ರಭಾವ ಅಭ್ಯರ್ಥಿಗಳ ನೆರವಿಗೆ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಸುರೇಶ ಅಂಗಡಿ ನಿರೀಕ್ಷೆ ಮಾಡಿದಂತೆ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಆದರೆ ಸುರೇಶ ಅಂಗಡಿ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಆತಂಕಗಳನ್ನು ಎದುರಿಸಬೇಕಾಯಿತು.

ಟಿಕೆಟ್‌ ತಪ್ಪಿಸುವಲ್ಲಿ ಅನೇಕರು ಪ್ರಯತ್ನ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದಟಛಿ ಪ್ರಚಾರ ಸಹ ಮಾಡಿದ್ದರು. ಆದರೆ ಅಂಗಡಿ ಅಡೆತಡೆ ಮೀರಿ ಗೆದ್ದು ಬಂದರು. ಈ ಚುನಾವಣೆಯಲ್ಲಿ ಸುರೇಶ ಅಂಗಡಿ ಗೆಲುವಿಗೆ ಸಹಕಾರಿಯಾಗಿದ್ದ ಇನ್ನೊಂದು ಅಂಶ ಎಂದರೆ ಕಾಂಗ್ರೆಸ್‌ನಿಂದ ದುರ್ಬಲ ಅಭ್ಯರ್ಥಿ ಸಾಧುನವರ ಕಣದಲ್ಲಿದ್ದರು. ಕಡೆಯ
ಸಮಯದವರೆಗೆ ಯಾರಿಗೆ ಟಿಕೆಟ್‌ ಎಂಬ ಕುತೂಹಲದಲ್ಲೇ ಕಾಂಗ್ರೆಸ್‌ ಕಾಲ ಕಳೆಯಿತು. ಕೊನೆಗೆ ಕ್ಷೇತ್ರದಲ್ಲಿ ಅಷ್ಟಾಗಿ ಪರಿಚಯ ಇರದ ಡಾ.ವಿ.ಎಸ್‌.ಸಾಧುನವರ ಅವರಿಗೆ ಟಿಕೆಟ್‌ ನೀಡಿತು. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಲಕ್ಷ್ಮೀ ಹೆಬ್ಟಾಳಕರ ಅವರ ವಿರುದಟಛಿ ಸಾಕಷ್ಟು ಪ್ರಯಾಸಪಟ್ಟು 75 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಸುರೇಶ ಅಂಗಡಿ ಈ ಬಾರಿ ಎರಡು ಲಕ್ಷಗಳ ಮತಗಳ ಅಂತರದಿಂದ ಜಯ ಪಡೆದರು.

Advertisement

ಕಾಂಗ್ರೆಸ್‌ನಲ್ಲಿನ ಅಸಮಾಧಾನ ಹಾಗೂ ಒಗ್ಗಟ್ಟಿನ ಕೊರತೆಯ
ಲಾಭ ಅಂಗಡಿ ಪಾಲಾಯಿತು.

ಮೋದಿ ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎಂದು ಜನ
ನಿರ್ಧರಿಸಿದ್ದಾರೆ. ಅದಕ್ಕೆ ಈಗ ಬಂದಿರುವ ಅಭೂತ ಪೂರ್ವ
ಫಲಿತಾಂಶವೇ ಸಾಕ್ಷಿ. ಚುನಾವಣೆಯಲ್ಲಿ ನನಗೆ ಪûಾತೀತವಾಗಿ ಬೆಂಬಲ ಸಿಕ್ಕಿದ್ದು, ಹೆಚ್ಚಿನ ಮತಗಳ ಅಂತರದ ಗೆಲುವು ನನ್ನದಾಗಿದೆ.
– ಸುರೇಶ ಅಂಗಡಿ, ಬಿಜೆಪಿ ವಿಜೇತ ಅಭ್ಯರ್ಥಿ

ನಾನು ಜಯದ ನಿರೀಕ್ಷೆ ಮಾಡಿದ್ದೆ. ಎಲ್ಲ ಕ್ಷೇತ್ರದಲ್ಲೂ ಒಳ್ಳೆಯ ಬೆಂಬಲ ಸಿಕ್ಕಿತ್ತು. ಮತದಾರರ ತೀರ್ಪಿಗೆ ನಾನು ಬದಟಛಿ. ನಮ್ಮಲ್ಲಿ ಯಾವುದೇ ಭಿನ್ನಮತ ಇರಲಿಲ್ಲ.ಚುನಾವಣೆಯ ಸೋಲಿನ ಬಗ್ಗೆ ಆಲೋಚನೆ ಮಾಡುತ್ತೇನೆ.
– ಡಾ.ವಿ.ಎಸ್‌.ಸಾಧುನವರ,
ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

ಗೆಲುವಿಗೆ 3 ಕಾರಣ
– 8 ವಿಧಾನಸಭಾ ಕ್ಷೇತ್ರದಲ್ಲೂ ಪ್ರಧಾನಿ ನರೇಂದ್ರ ಮೋದಿ
ಅಲೆ ಪ್ರಬಲವಾಗಿದ್ದು
– ಅಭ್ಯರ್ಥಿ ಘೋಷಣೆ ಮೊದಲೇ ಬಿಜೆಪಿ ಕಾರ್ಯಕರ್ತರ ವ್ಯವಸ್ಥಿತ ಹಾಗೂ ಕರಾರುವಾಕ್‌ ಪ್ರಚಾರ
– ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದು

ಸೋಲಿಗೆ 3 ಕಾರಣ
– ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ತಿಕ್ಕಾಟ, ಕಾರ್ಯಕರ್ತರನ್ನು
ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ
– ಪ್ರಚಾರಕ್ಕೆ ಬಾರದ ಕಾಂಗ್ರೆಸ್‌ ನಾಯಕರು. ದೂರ ಉಳಿದ ಜೆಡಿಎಸ್‌ ಮುಖಂಡರು
– ಮತದಾರರಿಗೆ ಮೈತ್ರಿ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಪರಿಚಯವಿಲ್ಲದೇ ಇರುವುದು

Advertisement

Udayavani is now on Telegram. Click here to join our channel and stay updated with the latest news.

Next