Advertisement
ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗೃಹದಲ್ಲಿ ರವಿವಾರ ಡಾ. ಡಿ. ಎಸ್. ಕರ್ಕಿ ಪ್ರತಿ‚ಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಡಿ. ಎಸ್. ಕರ್ಕಿಯವರ 115ನೇ ಜನ್ಮ ದಿನೋತ್ಸವ ಹಾಗೂ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕರ್ಕಿ, ಇಂಚಲ, ತುರಮರಿ ಅವರು ತಮ್ಮ ಇಡೀ ಬದುಕನ್ನು ಕನ್ನಡಕ್ಕಾಗಿ ತೇಯ್ದ ನಿಜ ಕನ್ನಡಿಗರು. ಇವರನ್ನು ನಾವು ಸ್ಮರಿಸಬೇಕು ಎಂದರು.
ಹೇಳಿದರು. ಡಾ| ಲಲಿತಾ ಕೆ. ಹೊಸಪ್ಯಾಟಿ ಅವರ “ಅವಳ ಪಾದದ ಗುರುತು” ಕೃತಿಗೆ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ. ಕೆ. ರಾಮೇಗೌಡ ಅವರು, ಗದುಗಿನ ಲಿಂ. ಸಿದ್ಧಲಿಂಗ ಸ್ವಾಮೀಜಿ ಕನ್ನಡ ಸ್ವಾಮೀಜಿ ಆಗಿದ್ದರು. ಗೋಕಾಕ ವರದಿಗೆ ಮೊದಲು ಕರೆ ಕೊಟ್ಟಿದ್ದು ಕೂಡ ಇವರೇ ಎಂದು ಸ್ಮರಿಸಿಕೊಂಡರು. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ದೊಡ್ಡ ಶಕ್ತಿಯಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದು ನಾಗನೂರು ರುದ್ರಾಕ್ಷಿ ಮಠ. ಹೀಗಾಗಿ ನಾಗನೂರು ರುದ್ರಾಕ್ಷಿ ಮಠವನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
Related Articles
Advertisement
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರೀ, ಪ್ರೊ. ಎಂ. ಎಸ್. ಇಂಚಲ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ. ಬಿ. ಎಸ್. ಗವಿಮಠ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿಗಳಾದ ಸಿದ್ರಾಮಪ್ಪ ಹೊನ್ನಳ್ಳಿ, ಸುನೀಲ ಸಾಣಿಕೊಪ್ಪ, ಮಲ್ಲೇಶ ಕೋಮಾರಶೆಟ್ಟಿ, ಶೆ„ಲಾ ಭಟ್ಟ, ಉಮಾ ಅಂಗಡಿ, ಡಾ. ಅಡಿವೆಪ್ಪ ಇಟಗಿ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಟ್ರಸ್ಟ್ ಅಧ್ಯಕ್ಷ ಶಿವಪುತ್ರ ಕರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಉಪಾಧ್ಯಕ್ಷ ರವೀಂದ್ರ ಕರ್ಕಿ, ಟ್ರಸ್ಟಿಗಳಾದ ವಿಜಯಾದೇವಿ ಕರ್ಕಿ, ರಾಜಶೇಖರ ಕರ್ಕಿ, ರಾಜಶೇಖರ ಕರ್ಕಿ, ಶಿವಲೀಲಾ ಹೂಲಿ, ಮನೋಹರ ಕರ್ಕಿ, ಮಲ್ಲಿಕಾರ್ಜುನ ಬೆಲ್ಲದ, ಶೋಭಾ ಉಳ್ಳಾಗಡ್ಡಿ, ಜ್ಯೋತಿಲಕ್ಷಿ¾ ಗೊಂದಿ, ರಾಜೇಶ್ವರಿ ಕರ್ಕಿ,ಹಿರಿಯ ಸಾಹಿತಿ ಯ. ರು. ಪಾಟೀಲ ಉಪಸ್ಥಿತರಿದ್ದರು. ಗೌರಮ್ಮ ಕರ್ಕಿ ನಿರೂಪಿಸಿದರು. ಟ್ರಸ್ಟ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಸ್ವಾಗತಿಸಿದರು. ಖಜಾಂಚಿ ಆನಂದ ಕರ್ಕಿ ವಂದಿಸಿದರು. ನಯನಾ ಗಿರಿಗೌಡರ ಹಾಗೂ ಸಂಗೀತ ಬಳಗ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.