ರಭಸಕ್ಕೆ ಮಾವು ಇಳುವರಿ ಇಳಿಮುಖವಾಗಲಿದೆ. ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಉತ್ಪಾದನೆ ಕಡಿಮೆ ಆಗಲಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಶೇ. 30ರಿಂದ 40ರಷ್ಟು ಉತ್ಪಾದನೆ ಕಡಿಮೆ ಆಗಲಿದ್ದು, ಬಂಡವಾಳ ಹಾಕಿ ಮಾವು ಬೆಳೆದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಹಂಗಾಮು ಶುರುವಾದಾಗಿನಿಂದಲೂ ಹೂವು ಬಿಡದಿರುವುದರಿಂದ ಪ್ರಮಾಣ ಇಳಿಮುಖವಾಗಲಿದೆ.
Advertisement
ಪ್ರತಿ ಹೆಕ್ಟೆರ್‌ಗೆ ಇಳುವರಿ ಕಡಿಮೆ:ಜಿಲ್ಲೆಯಲ್ಲಿ 4300 ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 40ರಿಂದ 50 ಹೆಕ್ಟರ್ ಮಾವಿನ ತೋಟ ಹೆಚ್ಚುತ್ತಿದೆ. ಪ್ರತಿ ಹೆಕ್ಟೆರ್‌ನಲ್ಲಿ ಸರಾಸರಿ 7ರಿಂದ 20 ಟನ್‌ವರೆಗೆ ಉತ್ಪಾದನೆ ಸಿಗುತ್ತದೆ. ಆದರೆ ಈ ಬಾರಿ ಮಾವು ಹೂ ಕಚ್ಚುವಾಗಲೇ ಕಳೆದ ವರ್ಷಕ್ಕಿಂತ ಕಡಿಮೆ ಬಂದಿತ್ತು. ಪ್ರತಿ ವರ್ಷ ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ಮಾವಿನ ಮರಗಳು ಹೂ ಬಿಡಲು ಶುರು ಮಾಡುತ್ತವೆ. ಹೂವುಗಳು ಕಾಯಿಗಳಾಗಿ ಪರಿವರ್ತನೆಯ ಪ್ರಮಾಣ ಅಂದುಕೊಂಡಂತೆ ಆಗಿರಲಿಲ್ಲ. ಜತೆಗೆ ಅಕಾಲಿಕ ಮಳೆ-ಗಾಳಿಯ ಹೊಡೆತಕ್ಕೆ ಕೆಲವು ಕಡೆಗೆ ಕಾಯಿಗಳು ನೆಲಕ್ಕುರುಳಿದ್ದರಿಂದ ಹಾನಿ ಉಂಟಾಗಿದೆ. ಸುಮಾರು ಶೇ. 30ರಿಂದ 40ರಷ್ಟು ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.
402 ಹೆಕ್ಟರ್, ಸವದತ್ತಿ 72, ಬೆ„ಲಹೊಂಗಲ 67 ಹೆಕ್ಟೆರ್, ಅಥಣಿ 63 ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಭಾಗದ ಹವಾಮಾನಕ್ಕೆ ಅಲ್ಪಾನ್ಸೋ ಮತ್ತು ಕೇಸರ್ ತಳಿಯ ಮಾವು ಉತ್ತಮವಾಗಿ ಬೆಳೆಯುತ್ತವೆ. ಅಲ್ಪಾನ್ಸೋ ತಳಿಯ ಮಾವು ಬಹುತೇಕ ಕಡೆ ಎರಡು ವರ್ಷಕ್ಕೊಮ್ಮೆ ಉತ್ತಮ ಫಸಲು ನೀಡುತ್ತದೆ. ಈ ವರ್ಷ ಉತ್ತಮ ಇಳುವರಿ ಬಂದರೆ ಮುಂದಿನ ವರ್ಷದ ಹಂಗಾಮಿನಲ್ಲಿ ಇಳುವರಿ ಪ್ರಮಾಣ ಕಡಿಮೆ ಆಗುವುದೇ ಈ ತಳಿಯ ಲಕ್ಷಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅ ಧಿಕಾರಿಗಳು.
Related Articles
ಮಾವಿನ ಹಣ್ಣಿನೊಂದಿಗೆ ಹಸಿ ಮಾವಿನ ಮಾರಾಟವೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಕೆಲ ವರ್ಷಗಳಿಂದ ಮಾಹಾರಾಷ್ಟ್ರ
ಹಾಗೂ ಗೋವಾದಿಂದಲೂ ಮಾವಿನ ಹಣ್ಣುಗಳು ರಫ್ತಾಗುತ್ತಿವೆ. ವಿಶೇಷವಾಗಿ ಖಾನಾಪುರ ತಾಲೂಕಿನಲ್ಲಿ ವನ್ಯಜೀವಿಗಳ ಕಾಟ
ಹೆಚ್ಚಾಗಿದೆ. ಭತ್ತ, ಕಬ್ಬು , ತರಕಾರಿ ಸೇರಿದಂತೆ ಇತರೆ ಬೆಳೆ ನಷ್ಟವಾಗುತ್ತಿವೆ. ಜತೆಗೆ ಬೆಳೆಗೆ ನೀರಿನ ಅಭಾವವೂ ಉಂಟಾಗುತ್ತಿದೆ.
Advertisement
ಹೀಗಾಗಿ ರೈತರು ಮಾವಿನ ತೋಟಗಳತ್ತ ಒಲವು ತೋರುತ್ತಿದ್ದಾರೆ. ಸ್ಥಳೀಯ ಹವಾಮಾನದಲ್ಲಿ ಕೇಸರ್ ಮತ್ತು ಅಲಾನ್ಸೊಮಾವಿನ ಇಳುವರಿ ಅಧಿಕವಾಗುತ್ತಿದೆ. ಜತೆಗೆ ಪಾಯರಿ, ಮಲ್ಲಿಕಾ, ತೋತಾಪುರಿ, ಐಶ್ವರ್ಯ, ಮಾಲಗೋವಾ ಸೇರಿದಂತೆ
ಇತರೆ ತಳಿಗಳ ಮಾವು ಇಳುವರಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಅಲಾ #ನ್ಸೊ ಮಾವಿನ ತಳಿ ಎರಡು ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುತ್ತದೆ. ನಂತರದ ವರ್ಷದಲ್ಲಿ ಇಳುವರಿ ಇಳಿಮುಖ ಆಗುವುದು ಈ ತಳಿಯ ಗುಣಲಕ್ಷಣ. ಈ ವರ್ಷ ಶೇ. 30ರಿಂದ 40ರಷ್ಟು ಮಾವು ಇಳುವರಿ ಇಳಿಕೆ ಆಗಲಿದೆ.
∙ಮಹಾಂತೇಶ ಮುರಗೋಡ,
ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಈ ವಾರದಲ್ಲಿ ಸುರಿದ ಅಕಾಲಿಕ ಗಾಳಿ-ಮಳೆಯಿಂದ ಮಾವು ಬೆಳೆಗೆ ಭಾರೀ ಹಾನಿ ಉಂಟಾಗಿದೆ. ಕಿತ್ತೂರು ಭಾಗದ ಬಹುತೇಕ
ಮಾವಿನ ಕಾಯಿಗಳು ನೆಲಕ್ಕುರುಳಿವೆ. ಇನ್ನೂ ಕೆಲವು ಕಡೆಗೆ ಆಲಿಕಲ್ಲು ಮಳೆಯೂ ಆಗಿದೆ. ಈ ಸಲ ಇಳುವರಿ ಕುಂಠಿತಗೊಂಡು ಆರ್ಥಿಕ ನಷ್ಟ ಆಗಲಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ಪರಿಹಾರ ನೀಡಬೇಕು.
ಅಲ್ತಾಫ ಜಮಾದಾರ, ಮಾವು ಬೆಳೆಗಾರ *ಭೈರೋಬಾ ಕಾಂಬಳೆ