ಗದಗ: ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಜ. 27ರಂದು ಸಂಜೆ 6ಕ್ಕೆ ಗಜೇಂದ್ರಗಡದ ಎಪಿಎಂಸಿ ಎದುರಿಗೆ ಬೆಳಗಾವಿ ವಿಭಾಗ ಮಟ್ಟದ ಕರ್ನಾಟಕ ರಕ್ಷಣಾ ವೇದಿಕೆ ಸಮಾವೇಶ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 190ನೇ ಹುತಾತ್ಮ ದಿನಾಚರಣೆ ಹಾಗೂ ಜನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪೂರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಜೇಂದ್ರಗಡ ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಲಿಜಂತಿ ಪಟ್ಟದ ಮಹಾಲಿಂಗರಾಯ ಮಹಾರಾಜರು, ಸಿದ್ದನಕೊಳ್ಳದ ಡಾ| ಶಿವಕುಮಾರ ಶ್ರೀಗಳು, ಗಜೇಂದ್ರಗಡ ತೆಕ್ಕೆದ ಭಾವನವರಾದ ಹಜರತ್ ನಿಜಾಮು ದ್ದಿನಷಾ ಆರ್ಷಪಿ ಸಾನ್ನಿಧ್ಯ ವಹಿಸುವರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಚ್.ಕೆ. ಪಾಟೀಲ ತಾಯಿ ಭುವನೇಶ್ವರಿ ಭಾವಚಿತ್ರ ಅನಾವರಣಗೊಳಿಸುವರು. ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರು ನಾರಾಯಣ ಗೌಡ ಅವರ ಕುರಿತ ಧ್ವನಿಸುರಳಿ ಬಿಡುಗಡೆ ಮಾಡುವರು. ಮಹಿಳಾ ರಾಜ್ಯ ಉಪಾ ಧ್ಯಕ್ಷೆ ಅಶ್ವಿನಿಗೌಡ ಅವರು ತಾಯಿ ಚನ್ನಮ್ಮ ಅವರ ಭಾವಚಿತ್ರ ಅನಾವರಣಗೊಳಿಸು ವರು. ಮಾಜಿ ಶಾಸಕ ವಿಜಯಾನಂದ ಕಶಪ್ಪನವರ ಅವರು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಅನಾವರಣಗೊಳಿಸು ವರು.
ಇದನ್ನೂ ಓದಿ:24 ಮಂದಿಗೆ ಕೋವಿಶೀಲ್ಡ್ ಲಸಿಕೆ
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರ ಅಧ್ಯಕ್ಷತೆ ವಹಿಸು ವರು ಎಂದು ತಿಳಿಸಿದರು. ನಂತರ ನಡೆಯುವ ಜನಪದ ಸಂಭ್ರಮ ನಡೆಯಲಿದೆ ಎಂದರು. ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ನಾಗರಾಜ ಅಣ್ಣಿಗೇರಿ, ಶರಣಗೌಡ, ಭೀಮನಗೌಡ ಮಾಲಿಪಾಟೀಲ, ರತ್ನಮ್ಮ ಯಲಬುರ್ಗ, ಆಶಾ ಜೂಲಗುಡ್ಡ, ವಿರೂಪಾಕ್ಷಪ್ಪ ಹಿತ್ತಲಮನಿ, ಕೃಷ್ಣ ಲಮಾಣಿ ಇದ್ದರು.