Advertisement

Belekeri ರೆಡಾರ್ ಕೇಂದ್ರ ಮೂರು ತಿಂಗಳಲ್ಲಿ ಕಾರ್ಯಾರಂಭ: ಮನೋಜ್ ಬಾಡಕರ್

05:57 PM Sep 13, 2023 | Team Udayavani |

ಕಾರವಾರ: ಕೋಸ್ಟ್ ಗಾರ್ಡ್ ಡಿಜಿಟಲೀಕರಣದಲ್ಲಿ ಮುಂದಿದೆ .ಬೇಲೇಕೇರಿ ರೆಡಾರ್ ಕೇಂದ್ರ ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪಶ್ಚಿಮ ವಲಯ ಕೋಸ್ಟ್ ಗಾರ್ಡ್ ಕಮಾಂಡರ್ ಮನೋಜ್ ಬಾಡಕರ್ ಹೇಳಿದರು‌.

Advertisement

ಕೋಸ್ಟ್ ಗಾರ್ಡ್ ಸಮರ ನೌಕೆ ಸಾಮ್ರಾಟ್ ನಲ್ಲಿ ಬುಧುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು‌. ಕೋಸ್ಟ್ ಗಾರ್ಡ್ ವಿಶಾಲವಾಗಿದೆ. 7500 ಕಿ.ಮೀ.ಉದ್ದದ ಕಡಲತೀರವನ್ನು ಕೋಸ್ಟ್ ಗಾರ್ಡ್ ಸಹ ರಕ್ಷಿಸುತ್ತಿದೆ. ನಮ್ಮ ಕಡಲತೀರದಲ್ಲಿ ಈಗಾಗಲೇ ಅತ್ಯಾಧುನಿಕ 8 ರೆಡಾರ್ ಕೇಂದ್ರ ನಾವು ಹೊಂದಿದ್ದೇವೆ. ಇನ್ನೂ 8 ರೆಡಾರ್ ಕೇಂದ್ರಗಳನ್ನು ಕೋಸ್ಟ್ ಗಾರ್ಡ್ ಹೊಂದಲಿದೆ. ಬೇಲೇಕೇರಿ ರೆಡಾರ್ ಕೇಂದ್ರ ಅತ್ಯಾಧುನಿಕವಾಗಿದ್ದು 30 ನಾಟಿಕಲ್ ಮೈಲ್ ತನಕದ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಾವು ಮುಂಬಯಿ, ಮಂಗಳೂರು, ದೆಹಲಿಯಲ್ಲಿ ಕುಳಿತು ಕಣ್ಣಿಡಬಹುದಾಗಿದೆ ಎಂದರು.

ಬೇಲೇಕೇರಿ ಬಳಿಯ ರೇಡಾರ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ರೂಪಿಸುತ್ತಿದೆ. ಅಮದಳ್ಳಿ ಬಳಿ ಕೋಸ್ಟ್ ಗಾರ್ಡ್ ಕಚೇರಿ , ಆಫೀರ್ಸಕ್ವಾಟರ್ಸ , ಸಿಬ್ಬಂದಿ ವಸತಿ ಗೃಹವನ್ನು ಮಿಲಿಟರಿ ಎಂಜಿನಿಯರಿಂಗ್‌ ಸರ್ವೀಸ್ ನವರು ಕಟ್ಟುತ್ತಿದ್ದಾರೆ. ಭರದಿಂದ ಕೆಲಸ ನಡೆದಿದೆ. ಎರಡು ವರ್ಷಗಳಲ್ಲಿ ಈ ಕಾಮಗಾರಿ ಮುಗಿಯಲಿದೆ ಎಂದರು‌ . ಕೈಗಾ ಅಣುಸ್ಥಾವರ, ನೇವಿ ಇರುವ ಕಾರವಾರಕ್ಕೆ ಹೋವರ್ ಕ್ರಾಫ್ಟ್ ಅಗತ್ಯವಾಗಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ ನಮಗೆ ದಿವೇಕರ ಕಾಲೇಜಿನ ಬಳಿ ಭೂಮಿ ನೀಡಿತ್ತು. ಅದು ಕೆಲ ತಪ್ಪು ಅಭಿಪ್ರಾಯ , ತಪ್ಪು ಮಾಹಿತಿಯಿಂದ ಸ್ಥಳೀಯರ ವಿರೋಧ ಬಂತು. ಆಗ ಸರ್ಕಾರ ಭೂಮಿ ವಾಪಾಸ್ ಪಡೆದಿದೆ. ಜಿಲ್ಲೆಯಲ್ಲಿ ಹೋವರ್ ಕ್ರಾಪ್ಟಗೆ ಕಡಲತೀರದಲ್ಲಿ ನಾವು ಹಾಗೂ ಜಿಲ್ಲಾಡಳಿತ ಸ್ಥಳ ಹುಡುಕುತ್ತಿದೆ ಎಂದರು.

ಕೋಸ್ಟ್ ಗಾರ್ಡ್ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಈಚೆಗೆ ಸಮುದ್ರದಲ್ಲಿ ವಾಣಿಜ್ಯ ಹಡಗಿನ ಸಿಬಂದಿಯೋರ್ವರಿಗೆ ಎದೆನೂವು ಕಾಣಿಸಿಕೊಂಡಾಗ, ನಮ್ಮ ಕೋಸ್ಟ ಗಾರ್ಡ ಹೆಲಿಕಾಪ್ಟರ್ 180 ಮೈಲಿ ದೂರ ಪಯಣಿಸಿ, ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಿತು‌ . ಕೋಸ್ಟ್ ಗಾರ್ಡ್ ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ. ಮೀನುಗಾರರ ಜೀವವನ್ನು ಹಲವು ಸಲ ರಕ್ಷಿಸಿದೆ ಎಂದು ಮನೋಜ್ ಬಾಡಕರ್ ಹೇಳಿದರು. ಸಾಮ್ರಾಟ್ ನೌಕೆಯ ಸೇಲರ್ಸ ಯಶಸ್ ಇತರೆ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next