Advertisement
ಕ್ಷೇತ್ರದಲ್ಲಿ ಪಕ್ಷದ ಪರ ವಾತಾವರಣ ಇರುವಂತೆ ಕಾಣುತ್ತಿದ್ದರೂ ಇತ್ತೀಚೆಗೆ ಪಕ್ಷದಲ್ಲಿ ನಡೆದಿರುವ ಕೆಲ ಬೆಳವಣಿಗೆಗಳುಬಿಜೆಪಿಯನ್ನು ಬಹಳ ಇಕ್ಕಟ್ಟಿಗೆ ಸಿಲುಕಿಸಿವೆ.ಮುಖ್ಯವಾಗಿ ಈ ಭಾಗದ ಪ್ರಭಾವಿನಾಯಕ ರಮೇಶ ಜಾರಕಿಹೊಳಿ ಪ್ರಕರಣ ಪಕ್ಷದ ಇಮೇಜ್ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನು ದಾಟಿ ಮತದಾರರನ್ನು ತನ್ನ ಕಡೆಸೆಳೆದುಕೊಳ್ಳುವ ದೊಡ್ಡ ಸವಾಲು ಬಿಜೆಪಿ ನಾಯಕರಮುಂದಿದೆ. ಮತದಾರರು ಈ ಪ್ರಕರಣಕ್ಕೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲ ಮೂಡಿದೆ.ಬಿಜೆಪಿಗೆ ಇಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಾಧನೆ ಜತೆಗೆಸುರೇಶ ಅಂಗಡಿ ಮೇಲಿನ ಅನುಕಂಪವೇ ಆಧಾರ.
Related Articles
Advertisement
ಪ್ರಚಾರದಲ್ಲಿ ಸಾಕಷ್ಟು ಮುಂದೆ ಇರುವ ಬಿಜೆಪಿವಲಯದಲ್ಲಿ ಪ್ರಚಾರಕ್ಕಿಂತ ಟಿಕೆಟ್ ಪಡೆಯುವದರಲ್ಲಿ ಹೆಚ್ಚಿನ ಪೈಪೋಟಿ ನಡೆದಿದೆ. ಯಾವ ನಾಯಕರೂ ಇವರಿಗೇ ಟಿಕೆಟ್ ಸಿಗುತ್ತದೆ ಎಂಬ ಖಚಿತ ವಿಶ್ವಾಸದಲ್ಲಿಲ್ಲ. ಎಲ್ಲವೂ ಪಕ್ಷದ ವರಿಷ್ಠರಾದ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೇಲೆ ಅವಲಂಬಿತವಾಗಿದೆ. ಈಗ ಚುನಾವಣೆ ದಿನಾಂಕಘೋಷಣೆಯಾಗಿರುವುದರಿಂದ ಈ ವಾರದಲ್ಲಿ ಅಭ್ಯರ್ಥಿ ಹೆಸರು ಅಂತಿಮವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.
ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಸ್ಥಾನ ತುಂಬಲುಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕುಎನ್ನುವದು ಬಿಜೆಪಿ ಕಾರ್ಯಕರ್ತರ ಹಾಗೂ ಸುರೇಶಅಂಗಡಿ ಬೆಂಬಲಿಗರ ಒತ್ತಾಯ. ಈ ಹಿನ್ನೆಲೆಯಲ್ಲಿಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಈಗ ಬಿಜೆಪಿಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯವಾಗುತ್ತಿದ್ದಾರೆ.ಆದರೆ ರಾಜ್ಯದ ನಾಯಕರು ಇದರ ಬಗ್ಗೆ ಯಾವುದೇಮಾತು ಆಡುತ್ತಿಲ್ಲ. ಮೇಲಾಗಿ ಕೇಂದ್ರ ಗೃಹ ಸಚಿವಅಮಿತ್ ಶಾ ಸಹ ಕುಟುಂಬ ರಾಜಕಾರಣಕ್ಕೆ ಪಕ್ಷ ಜೋತು ಬೀಳಬಾರದು ಎಂದು ಹೇಳಿರುವುದು ನಾನಾ ರೀತಿಯ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್‌ನಲ್ಲಿ ಕುತೂಹಲ-ಜೆಡಿಎಸ್ ಸ್ಪರ್ಧೆ ಸಾಧ್ಯತೆ ಕಡಿಮೆ :
ಇನ್ನು ಬಿಜೆಪಿಯಲ್ಲಿ ಕಾಣುವ ಉತ್ಸಾಹ ಹಾಗೂ ಸಿದ್ಧತೆ ಕಾಂಗ್ರೆಸ್ ಪಾಳೆಯದಲ್ಲಿ ಕಾಣುತ್ತಿಲ್ಲ. ಇಲ್ಲಿ ಗೆಲ್ಲುವ ಅಭ್ಯರ್ಥಿ ನಿಲ್ಲಿಸಬೇಕು ಎನ್ನುವದಕ್ಕಿಂತ “ಹರಕೆಯ ಕುರಿ’ ಮಾತೇ ಹೆಚ್ಚಾಗಿ ಕಾಣುತ್ತಿದೆ. ಹೀಗಾಗಿಯಾರಿಗೆ ಟಿಕೆಟ್ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿದೆ. ಕಾಂಗ್ರೆಸ್ ನಾಯಕರು ಬೆಳಗಾವಿ ಲೋಕಸಭೆಗೆ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇನ್ನೊಂದು ಕಡೆ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಜತೆಗೆ ಅವರ ಸಹೋದರ ಚನ್ನರಾಜ ಹಟ್ಟಿಹೋಳಿ ಹೆಸರು ಸಹ ಕೇಳಿಬಂದಿದೆ. ಇವರಿಬ್ಬರಹೊರತಾಗಿ ಮಾಜಿ ಸಂಸದ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿ ಪ್ರಕಾಶ ಹುಕ್ಕೇರಿ ಪ್ರಯತ್ನ ನಡೆಸಿದ್ದು ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈಗಿನ ಬೆಳವಣಿಗೆ ಪ್ರಕಾರ ಪ್ರಕಾಶ ಹುಕ್ಕೇರಿ ಹೆಸರು ಮುಂಚೂಣಿಯಲ್ಲಿದೆ.ಇದಲ್ಲದೆ ಆನಂದ ಗಡ್ಡದೇವರಮಠ ಮತ್ತು ಮರಾಠಾ ಸಮುದಾಯದ ಅನಿಲ ಲಾಡ್ ಹೆಸರು ಸಹ ಪ್ರಸ್ತಾಪವಾಗಿದೆ.
ಸತೀಶ ಜಾರಕಿಹೊಳಿ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ತಮ್ಮ ಖಚಿತ ನಿರ್ಧಾರ ತಿಳಿಸಿಲ್ಲ.ಇದುವರೆಗಿನ ಅವರ ಹೇಳಿಕೆಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ. ಮೇಲಾಗಿ ಲೋಕಸಭೆಗೆ ಹೋಗಬೇಕು ಎಂಬ ಆಸಕ್ತಿ ಅವರಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಆದರೆ ಪಕ್ಷದ ವರಿಷ್ಠರು ಸತೀಶ ಅವರನ್ನೇನಿಲ್ಲಿಸಲು ಆಸಕ್ತಿ ತೋರಿದಂತೆ ಕಾಣುತ್ತಿದೆ. ಹೀಗಾಗಿ ಸತೀಶ ಜಾರಕಿಹೊಳಿ ನಿರ್ಧಾರದ ಮೇಲೆ ಉಳಿದವರ ಟಿಕೆಟ್ ಭವಿಷ್ಯ ನಿಂತಿದೆ ಎನ್ನಲಾಗುತ್ತಿದೆ. ಜೆಡಿಎಸ್ ವಲಯದಲ್ಲೂ ಉಪಚುನಾವಣೆಸಂಬಂಧ ಅಂತಹ ಯಾವುದೇ ರಾಜಕೀಯ ಚಟುವಟಿಕೆಗಳು ಇದುವರೆಗೆ ಕಂಡಿಲ್ಲ. ಚುನಾವಣೆ ಸಂಬಂಧ ಇದುವರೆಗೆ ಒಮ್ಮೆಯೂ ಕಾರ್ಯಕರ್ತರ ಸಭೆ ನಡೆಯದಿರುವುದೇ ಇದಕ್ಕೆ ಸಾಕ್ಷಿ. ಈಗಿನ ಬೆಳವಣಿಗೆ ನೋಡಿದರೆ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಕಡಿಮೆ.
-ಕೇಶವ ಆದಿ