ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಕೋಟಿ ಒಡೆಯರಾಗಿದ್ದು, ಮಹಾಂತೇಶ ಕವಟಗಿಮಠ ಹೆಸರಿನಲ್ಲಿ 3.96 ಕೋಟಿ ರೂ. ಸ್ಥಿರಾಸ್ತಿ ಇದೆ. ಪತ್ನಿ ಹೆಸರಿನಲ್ಲಿ 6.56 ಕೋಟಿ ರೂ. ಸ್ಥಿರಾಸ್ತಿ ಇದೆ.
ಮಹಾಂತೇಶ ಕವಟಗಿಮಠ ಅವರು ಒಟ್ಟು 2.31 ಕೋಟಿ ರೂ. ಮೌಲ್ಯದ ಚರಾಸ್ತಿ, ಹೊಂದಿದ್ದರೆ, ಪತ್ನಿ ರಾಜೇಶ್ವರಿ ಅವರು 3.90 ಕೋಟಿ ರೂ.. ಮಗಳು ಸುಷ್ಮಿತಾ 3.17 ಲಕ್ಷ ರೂ., ಮಗ ಶರದ್ 2.15 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಮಹಾಂತೇಶ ಅವರು ಬ್ಯಾಂಕಿನಲ್ಲಿ 27 ಲಕ್ಷ ರೂ. ಸಾಲ ಹೊಂದಿದ್ದರೆ, ಪತ್ನಿ ಹೆಸರಿನಲ್ಲಿ 4.60 ಕೋಟಿ ರೂ. ಸಾಲ ಇದೆ. ಮಹಾಂತೇಶ ಬಳಿ 3 ಲಕ್ಷ ರೂ. ನಗದು ಹಣ ಇದ್ದರೆ, ಪತ್ನಿ ರಾಜೇಶ್ವರಿ ಬಳಿ 5 ಲಕ್ಷ ರೂ. ಮಗಳು ಸುಷ್ಮಿತಾ ಬಳಿ 30 ಸಾವಿರ ರೂ., ಮಗ ಶರದ್ ಬಳಿ 20 ಸಾವಿರ ರೂ. ನಗದು ಹಣ ಇದೆ.
ಮಹಾಂತೇಶ ಕವಟಗಿಮಠ ವಿವಿಧ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ 29.99 ಲಕ್ಷ ರೂ. ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 1.68 ಲಕ್ಷ ರೂ. ಷೇರು ಹೂಡಿಕೆ ಮಾಡಿದ್ದಾರೆ. ತಮ್ಮ ತಾಯಿ ಶಾಂತಾದೇವಿ ಅವರಿಗೆ 8 ಲಕ್ಷ ರೂ. ಮತ್ತು ಪತ್ನಿಗೆ 83 ಲಕ್ಷ ರೂ. ಸಾಲ ಕೊಟ್ಟಿದ್ದಾರೆ. ಅಲ್ಲದೇ ತಮ್ಮ ಹೆಸರಿನಲ್ಲಿ ಒಟ್ಟು 51.10 ಲಕ್ಷ ರೂ. ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ.
ಪತ್ನಿಯ ಹೆಸರಿನಲ್ಲಿ ಒಟ್ಟು 2.62 ಕೋಟಿ ರೂ. ಮೌಲ್ಯದ ವಿವಿಧ ರೀತಿಯ ವಾಹನಗಳಿವೆ. ಮಹಾಂತೇಶ ಕವಟಗಿಮಠ ಅವರು ತಮ್ಮ ಹೆಸರಿನಲ್ಲಿ 22.17 ಲಕ್ಷ ರೂ. ಮೌಲ್ಯದ 793.85 ಗ್ರಾಂ. ಬಂಗಾರ ಮತ್ತು 5.24 ಲಕ್ಷ ರೂ. ಬೆಲೆಯ 14 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.