ಮಿನ್ಸ್ಕ್: ಉಕ್ರೇನ್ ದೇಶದ ನೆರೆಯ ಬೆಲಾರಸ್ ತನ್ನ ಪರಮಾಣು ಅಲ್ಲದ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಸಾಂವಿಧಾನಿಕ ಜನಾಭಿಪ್ರಾಯ ಸಂಗ್ರಹವನ್ನು ಅಂಗೀಕರಿಸಿದೆ. ಅಲ್ಲದೆ ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳನ್ನು ತನ್ನ ದೇಶದಲ್ಲಿ ಇರಿಸಲು ದಾರಿ ಮಾಡಿಕೊಟ್ಟಿದೆ.
ದಿ ಕೈವ್ ಇಂಡಿಪೆಂಡೆಂಟ್ ಪ್ರಕಾರ, 65.16 ಪ್ರತಿಶತ ನಾಗರಿಕರು ಈ ಸಾಂವಿಧಾನಿಕ ತಿದ್ದುಪಡಿಗಳನ್ನು ಬೆಂಬಲಿಸಿದ್ದಾರೆ. ಬೆಲಾರಸ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಕಾರ್ಯನಿರ್ವಾಹಕ ಅಧಿಕಾರವನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ.
ಬೆಲಾರಸ್ ಶೀಘ್ರದಲ್ಲೇ ಉಕ್ರೇನ್ ಮೇಲೆ ರಷ್ಯಾದ ಯುದ್ಧಕ್ಕೆ ಸೇರಲಿದೆ ಎಂದು ಅನೇಕ ಮೂಲಗಳು ಹೇಳಿವೆ. ದಿ ಕೈವ್ ಇಂಡಿಪೆಂಡೆಂಟ್ ಪ್ರಕಾರ, ಮೊದಲ ಇಲ್ಯುಶಿನ್ ಇಲ್ -76 ಸಾರಿಗೆ ವಿಮಾನವು ಶೀಘ್ರದಲ್ಲೇ ಉಕ್ರೇನ್ ವಿರುದ್ಧ ನಿಯೋಜಿಸಲು ಬೆಲರೂಸಿಯನ್ ಪ್ಯಾರಾಟ್ರೂಪರ್ ಗಳನ್ನು ಹೊತ್ತೊಯ್ಯುವ ಸಾಧ್ಯತೆಯಿದೆ.
ಇದನ್ನೂ ಓದಿ:ಯುರೋಪ್ ಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ ರಷ್ಯಾದ ವಿಮಾನಯಾನ ಸಂಸ್ಥೆ ಏರೋಫ್ಲಾಟ್
ಭಾನುವಾರ, ರಷ್ಯಾ ಬೆಲಾರಸ್ ನ ಮಿನ್ಸ್ಕ್‌ಗೆ ನಿಯೋಗವನ್ನು ಕಳುಹಿಸಿ ಅಲ್ಲಿ ಉಕ್ರೇನ್ ನೊಂದಿಗೆ ಶಾಂತಿ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಹೇಳಿದರು. ಆದರೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ತಮ್ಮ ರಾಷ್ಟ್ರದ ಮೇಲೆ ಕ್ಷಿಪಣಿಗಳನ್ನು ಉಡಾಯಿಸುತ್ತಿರುವ ದೇಶದಲ್ಲಿ ಶಾಂತಿ ಮಾತುಕತೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದ್ದಾರೆ. ನಂತರ ಬೆಲಾರಸ್ ಗಡಿ ಭಾಗದಲ್ಲಿ ಮಾತುಕತೆಗೆ ಸಿದ್ಧವೆಂದು ಉಕ್ರೇನ್ ಹೇಳಿದೆ.
ರಷ್ಯಾ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 500ಕ್ಕೂ ಹೆಚ್ಚು ಜನರನ್ನು ಬೆಲಾರಸ್ ನಲ್ಲಿ ಬಂಧಿಸಲಾಗಿದೆ.