Advertisement
ಗಬ್ಬೆದ್ದು ನಾರುತ್ತಿರುವ ಮುಖ್ಯ ಪ್ರದೇಶಗಳುಬೆಳಪು ಗ್ರಾಮದ ಕನಸಿನ ಕೂಸಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಜ್ಞಾನ ಸಂಶೋಧನಾ ಕೇಂದ್ರ, ಮೀಸಲು ಅರಣ್ಯ ಪ್ರದೇಶ, ಸರಕಾರಿ ಪಾಲಿಟೆಕ್ನಿಕ್ ಕೇಂದ್ರ ಹಾಗೂ ರೈಲ್ವೇ ಟ್ರಾÂಕ್ ಬಳಿಯ ಪ್ರದೇಶಗಳು ಕಸದಿಂದ ಮುಚ್ಚಿ ಹೋಗಿವೆ. ಇಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಾಗಿ ಕಸ-ತ್ಯಾಜ್ಯಗಳನ್ನು, ಕೋಳಿ – ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದು, ಇದರಿಂದಾಗಿ ಬೆಳಪು ಗ್ರಾಮದ ಬಹುತೇಕ ಪ್ರದೇಶವು ಸಂಪೂರ್ಣ ಗಬ್ಬೆದ್ದು ನಾರುವಂತಾಗಿದೆ.
ಕಸ – ತ್ಯಾಜ್ಯ ಎಸೆಯಬೇಡಿ ಎಂದು ಎಷ್ಟೇ ಬೋರ್ಡ್ ಹಾಕಿ ಎಚ್ಚರಿಕೆ ನೀಡಿದರೂ, ರಾತ್ರಿಯ ವೇಳೆ ಇಲ್ಲಿಗೆ ವಾಹನಗಳಲ್ಲಿ ಬರುವ ತ್ಯಾಜ್ಯ ಸೃಷ್ಟಿಯ ವ್ಯಕ್ತಿಗಳು ತಮಗೆ ಇಷ್ಟ ಬಂದ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿದು, ಬೆಳಪು ಗ್ರಾಮದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಪು ಗ್ರಾಮದ ವ್ಯಾಪ್ತಿಗೆ ಬರುವ ಕುಂಜೂರು ರೈಲ್ವೇ ಬ್ರಿಡ್ಜ್ನಿಂದ ಹಿಡಿದು ಬೆಳಪು ರೈಲ್ವೇ ಬ್ರಿಡ್ಜ್ನವರೆಗೂ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದ್ದು, ಇದರಿಂದಾಗಿ ಭಾಗದ ಜನರು ಮತ್ತು ಪಾದಚಾರಿ,ವಾಹನಗಳು ಸುತ್ತು ಬಳಸಿ ತಮ್ಮೂರಿಗೆ ನಡೆದಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಗ್ರಾಮವು ಹತ್ತಾರು ಯೋಜನೆಗಳ ಅನುಷ್ಠಾನದಲ್ಲಿ ದೇಶದ ಗಮನ ಸೆಳೆದಿದ್ದು, ಸ್ವತ್ಛ ಗ್ರಾಮವೆಂಬ ಕೀರ್ತಿಗೂ ಭಾಜನವಾಗಿದ್ದು, ಇತ್ತೀಚಿನ ದಿನಗಳಳಿÉ ಕೆಲವೊಂದು ಕಿಡಿಗೇಡಿಗಳು ರಸ್ತೆ ಪಕ್ಕಗಳಲ್ಲಿ ಕಸ ಎಸೆಯುತ್ತಿರುವುದರಿಂದ ಆ ಹೆಸರಿಗೂ ಅಪಕೀರ್ತಿಯುಂಟಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಕಸ ಎಳೆದಾಡುವ ಬೀದಿ ನಾಯಿಗಳ ಹಾವಳಿಯಿಂದಲೂ ಜನರಿಗೆ ತೊಂದರೆಯಾಗುತ್ತಿದೆ.
Related Articles
Advertisement
ಅಲಲ್ಲಿ ಫಲಕ ಅಳವಡಿಸಿ, ಎಚ್ಚರಿಸಲು ಚಿಂತನೆ ಕಸ ರಸ್ತೆಗೆ ಎಸೆಯುವುದು ಅಪರಾಧ, ಆರೋಗ್ಯಕ್ಕೆ ಹಾನಿಕರ, ಕಸವನ್ನು ಮನೆಯಲ್ಲೇ ವಿಲೇ ಮಾಡಿ, ಕೋಳಿ ಮಾಂಸ ಅಥವಾ ಇತರ ತ್ಯಾಜ್ಯ ರಸ್ತೆಯ ಪಕ್ಕದಲ್ಲಿ ಹಾಕಿದಲ್ಲಿ, ಕ್ರಿಮಿನಲ್ ಮೊಕದ್ದಮೆ ಹೂಡುವುದು, ಪೊಲೀಸ್ ಠಾಣೆಗೆ ದೂರು ನೀಡಲಾಗುವುದು, ಕಸ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ 2000 ರೂ. ದಂಡ ವಿಧಿಸಲಾಗುವುದು, ಬೆ„ಕ್ ಅಥವಾ ವಾಹನಗಳಲ್ಲಿ ಬಂದು ಕಸ ಎಸೆದರೆ ವಾಹನ ಮುಟ್ಟುಗೋಲು ಹಾಕಲಾಗುವುದು, ಸಿ.ಸಿ.ಟಿ.ವಿ ಅಳವಡಿಸಿ ಜಾಗƒತ ದಳ ನೇಮಿಸುವುದು ಎಂಬಿತ್ಯಾದಿ ಎಚ್ಚರಿಕೆ ಫಲಕಗಳನ್ನು ಗ್ರಾಮದುದ್ದಕ್ಕೂ ಅಳವಡಿಸಲು ಗ್ರಾಮ ಪಂಚಾಯತ್ ಚಿಂತನೆ ನಡೆಸಿದೆ. ಕಸ ಎಸೆದವರಿಗೆ ದಂಡ ; ಮಾಹಿತಿ ನೀಡಿದವರಿಗೆ ಬಹುಮಾನ
ಕಾಪು ತಾಲೂಕು ವ್ಯಾಪ್ತಿಯ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರು ರಸ್ತೆ ಪಕ್ಕದಲ್ಲಿ ತಮಗಿಷ್ಟ ಬಂದಂತೆ ಕಸ ಎಸೆದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ 2000- ರೂ. ದಂಡ ವಿಧಿಸಿ, ಅಂತಹವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ. ಅದರೊಂದಿಗೆ ಕಸ ಮುಕ್ತ ಗ್ರಾಮ ಜಾಗƒತಿಗೆ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಕಸ ತಂದು ಸುರಿಯುವವರ ಬಗ್ಗೆ ಮಾಹಿತಿ ನೀಡುವವರಿಗೆ 1000 ರೂ. ನಗದು ಬಹುಮಾನ ನೀಡಲು ನಿರ್ಣಯಿಸಲಾಗಿದೆ.
-ಡಾ| ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್