Advertisement
ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಬೆಳಪು ಗ್ರಾಮದಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರ, ಪಿ.ಜಿ. ಸೆಂಟರ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಕೈಗಾರಿಕಾ ಪಾರ್ಕ್ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಬೆಳಪು ಮತ್ತು ಸುತ್ತಲಿನ ಗ್ರಾಮಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ನಗರ ಪ್ರದೇಶವನ್ನು ಅವಲಂಬಿಸುವ ಕಾಲವಿತ್ತು. ಆದರೆ ಇದೀಗ ಬೆಳಪು ಗ್ರಾಮದಲ್ಲಿ ಉನ್ನತ ಶಿಕ್ಷಣದೊಂದಿಗೆ ತಾಂತ್ರಿಕ ಶಿಕ್ಷಣ, ಸಂಶೋಧನಾ ಶಿಕ್ಷಣಕ್ಕೆ ಅವಕಾಶ ಒದಗಿಸಿಕೊಡುವ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದು ದೇಶ ದಲ್ಲಿಯೇ ಪ್ರಥಮದ್ದಾಗಿದೆ. ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ
ಮಂಗಳೂರು ವಿಶ್ವ ವಿದ್ಯಾಲಯ ಸಂಯೋಜಿತ ಅತ್ಯಾಧುನಿಕ ಸಂಶೋಧನಾ ಕೇಂದ್ರದ ನಿರ್ಮಾಣ ಕಾಮಗಾರಿಯ ಪ್ರಥಮ ಹಂತದಲ್ಲಿ ಕಾಮಗಾರಿಯು ನಡೆಯುತ್ತಿದ್ದು, 49.25 ಕೋಟಿ ರೂ. ವೆಚ್ಚದ ಬಹುಮಹಡಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ಹೌಸಿಂಗ್ ಬೋರ್ಡ್‌ನ ಮೂಲಕ ಸಂಶೋಧನಾ ಕೇಂದ್ರದ ಕಾಮಗಾರಿ ನಡೆಯುತ್ತಿದ್ದು ಕಾಪು ದೇವಿಪ್ರಸಾದ್ ಕನ್‌ಸ್ಟÅಕ್ಷನ್ಸ್‌ನ ಕೆ. ವಾಸುದೇವ ಶೆಟ್ಟಿ ಅವರು ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿದ್ದಾರೆ.
Related Articles
ಬೆಳಪು ಗ್ರಾಮದ 5 ಎಕ್ರೆ ಭೂ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ಎರಡು ಮಹಡಿಯ ಕಟ್ಟಡದಲ್ಲಿ ಸುಮಾರು 7 ತಾಂತ್ರಿಕ ಶೆ„ಕ್ಷಣಿಕ ಬ್ರಾಂಚ್‌ಗಳು ಕಾರ್ಯಾರಂಭಗೊಳ್ಳಲಿವೆ. ಮಂಗಳೂರು ಮತ್ತು ಮಣಿಪಾಲವನ್ನು ಹೊರತುಪಡಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಇದೊಂದು ಆಶಾಕಿರಣವಾಗಿ ಮೂಡಿಬರಲಿದೆ. ರಾಜ್ಯದ ವಿವಿಧೆಡೆಯ ವಿದ್ಯಾರ್ಥಿಗಳು ಆನ್‌ಲೆ„ನ್ ಮೂಲಕ ಪ್ರವೇಶ ಪಡೆಯಲಿದ್ದು, ಮುಂದಿನ ಶೆ„ಕ್ಷಣಿಕ ವರ್ಷದಲ್ಲಿ ಯೋಜನೆ ಪ್ರಾರಂಭಗೊಳ್ಳುವ ಪೂರ್ವ ತಯಾರಿ ನಡೆಸುತ್ತಿದ್ದು ಬೆಂಗಳೂರು ಮೂಲದ ಗುತ್ತಿಗೆ ಸಂಸ್ಥೆಯಾದ ರೈಟ್ಸ್ ಕಂಪೆನಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.
Advertisement
ಕೈಗಾರಿಕಾ ಪಾರ್ಕ್ಬೆಳಪು ಗ್ರಾಮದ ಸುಮಾರು 68 ಎಕ್ರೆ ಸರಕಾರಿ ಭೂಮಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 10 ಕೋಟಿ ರೂ. ವೆಚ್ಚದೊಂದಿಗೆ ಮೂಲ ಭೂತ ಸೌಕರ್ಯಗಳ ಸಹಿತವಾಗಿ ಕೈಗಾರಿಕಾ ಪಾರ್ಕ್‌ನ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಜೊತೆಗೆ ಆನ್‌ಲೈನ್ ಟೆಂಡರ್ ಮೂಲಕ ವಿವಿಧ ಕೈಗಾರಿಕೋದ್ಯಮಿಗಳಿಗೆ ಭೂಮಿ ಮಂಜೂರಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಇದರಿಂದ ಇಲ್ಲಿನ ಯುವಕರಿಗೆ ಸ್ವಂತ ಉದ್ದಿಮೆಗಳ ಸ್ಥಾಪನೆ ಅನುಕೂಲವಾಗಲಿದ್ದು ಸುಮಾರು 60 ಸಣ್ಣ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಗಾಂಧಿ ಗ್ರಾಮ ಸ್ಥಾಪನೆ
ಬೆಳಪು ಗ್ರಾಮದ ಜನತೆಯ ಬಹುಕಾಲದ ಕನಸು ಈಗ ನನಸಾಗುತ್ತಿದೆ. ತ್ರವಳಿ ಬೃಹತ್ ಯೋಜನೆಗಳು ಏಕಕಾಲದಲ್ಲಿ, ಒಂದೇ ಗ್ರಾಮದಲ್ಲಿ ಕಾರ್ಯಗತಗೊಳ್ಳುತ್ತಿದ್ದು, ಆ ಮೂಲಕ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಈ ಯೋಜನೆಗಳು ಮುಂದಿನ ಯುವ ಪೀಳಿಗೆಗೆ ಆದರ್ಶವಾಗುವ ಯೋಜನೆಗಳಾಗಿದ್ದು ಗ್ರಾಮೀಣಾಭಿವೃದ್ಧಿಯಲ್ಲಿ ದೀರ್ಘಕಾಲ ಸಲ್ಲಿಸಿರುವ ಸೇವೆಗೆ ಈಗ ಸಾರ್ಥಕವಾಗಿದೆ. ಗಾಂಧೀಜಿಯವರ ಗ್ರಾಮ ರಾಜ್ಯದ ಕನಸು ನನಸಾಗುತ್ತಿದ್ದು, ಗಾಂಧಿ – 150 ಕಾರ್ಯಕ್ರಮಕ್ಕೆ ಪೂರಕವಾಗಿ ಬೆಳಪುವಿನಲ್ಲಿ ಗಾಂಧಿ ಗ್ರಾಮ ಸ್ಥಾಪಿಸುವ ಕಲ್ಪನೆ ನಮ್ಮದಾಗಿದೆ. -ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್