Advertisement

ಭೀಮ ಬೆಳಗಾವಿ ಕೇಸರಿ, ಹಮೀದ ಮಲ್ಲ ಸಾಮ್ರಾಟ

10:35 AM Mar 11, 2019 | Team Udayavani |

ಬೆಳಗಾವಿ: ನಗರದ ಹಿಂದವಾಡಿಯ ಆನಂದವಾಡಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ರೋಚಕ ಪಂದ್ಯಾವಳಿಯಲ್ಲಿ ಬೆಳಗಾವಿ ಕೇಸರಿ ಪಟ್ಟಕ್ಕಾಗಿ ನಡೆದ ರೋಚಕ ಆಟದಲ್ಲಿ ಛಡಿ ಡಾವ್‌ ಮೂಲಕ ಐದೇ ನಿಮಿಷದಲ್ಲಿ ರಾಜಸ್ಥಾನದ ಪೈಲ್ವಾನ್‌ ಭೀಮ ರಾಜಸ್ಥಾನ ಹಾಗೂ ಬೆಳಗಾವಿ ಮಲ್ಲ ಸಾಮ್ರಾಟ ಪಟ್ಟವನ್ನು ಎರಡೇ ನಿಮಿಷದಲ್ಲಿ ಫ್ರಂಟ್‌ ಸಾಲ್ತೋ ಡಾವ್‌ ಮೂಲಕ ಇರಾನ್‌ ದೇಶದ ಹಮೀದ್‌ ಮಹಜೋಬ ಪಡೆದುಕೊಂಡರು.

Advertisement

ಜಿಲ್ಲಾ ಕುಸ್ತಿಗೀರ ಸಂಘಟನೆಯ 25ನೇ ವರ್ಷದ ನಿಮಿತ್ತ ನಡೆದ ರೋಚಕ ಪಂದ್ಯಾವಳಿ ವಿಧ ವಿಧದ ಪಟ್ಟುಗಳ ಮೂಲಕ ಎದುರಾಳಿಗೆ ಮಣ್ಣಿನ ರುಚಿ ತೋರಿಸಿದರು. ಮಹಾರಾಷ್ಟ್ರದ ಪೈಲ್ವಾನ್‌ ಸಮಾಧಾನ ಪಾಟೀಲರನ್ನು ಭೀಮ ಸೋಲಿಸಿದರೆ, ಶಿವರಾಜ ರಾಕ್ಷೆಯನ್ನು ಇರಾನ್‌ ದೇಶದ ಹಮೀದ್‌ ಸೋಲಿಸಿದರು.

ಕಾಟೆ ಗೆದ್ದ, ಕಿರಣ ಬಿದ್ದ: ಕರ್ನಾಟಕ ಕೇಸರಿ ಕಾರ್ತಿಕ ಕಾಟೆ ಗೆಲುವು ಸಾಧಿ ಸಿ ಎರಡನೇ ಕ್ರಮಾಂಕದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ದೆಹಲಿಯ ರೋಹಿತ್‌ ದಲಾಲ್‌ ನನ್ನು ಡಂಕಿ ಡಾವ್‌ ಮೂಲಕ ಚಿತ್‌ ಮಾಡಿ ಸೋಲಿಸಿದ ಕಾರ್ತಿಕ್‌ ಕಾಟೆಯನ್ನು ಜನ ಚಪ್ಪಾಳೆ ಮೂಲಕ ಶಹಬಾಷಗಿರಿ ನೀಡಿದರು. ಮೂರನೇ ಕ್ರಮಾಂಕದ ಭಾರೀ ರೋಚಕ ಕುಸ್ತಿಯಲ್ಲಿ ಕರ್ನಾಟಕದ ಕಿರಣ ದಾವಣಗೆರೆಯನ್ನುಮಹಾರಾಷ್ಟ್ರದ ಋಷಿಕೇಷ ಪಾಟೀಲ ಗೆಲುವು ಸಾ ಧಿಸಿದರು. 4ನೇ ಕ್ರಮಾಂಕದ ಕುಸ್ತಿಯಲ್ಲಿ ಇರಾನ್‌ ದೇಶದ ರೇಜ್‌ ಅಲಿ ಅಕºರರನ್ನು ಮಹಾರಾಷ್ಟ್ರದ ರಾಶಿವಡೆಯ ಸೌರಭ ಪಾಟೀಲ ರೋಚಕ ಡಾವ್‌ ಮೂಲಕ 6 ನಿಮಿಷದಲ್ಲಿ ಏಕ್‌ ಲಂಗಿ ಡಾವ್‌ ಮೂಲಕ ಸೋಲಿಸಿದರು. 5ನೇ ಕ್ರಮಾಂಕದಲ್ಲಿ ಅಪ್ಪಾಶಿ ಅಡಾಳಹಟ್ಟಿ ವಿರುದ್ಧ ಕರಾಡನ ರೋಹಿತ ಪಾಟೀಲ ಗೆಲುವಿನ ನಗೆ ಬೀರಿದರು. 6ನೇ ಕ್ರಮಾಂಕದ ಅಮರ ಅಟೋಳೆಯನ್ನು
ಶಿವಾನಂದ ನಿರ್ವಾನಟ್ಟಿ ಗೆದ್ದು ಪಾರಿತೋಷಕ ಪಡೆದುಕೊಂಡರು. 

7ನೇ ಕ್ರಮಾಂಕದಲ್ಲಿ ಪೈ. ತುಕಾರಾಮ ಅಥಣಿ ಅವರನ್ನು ಪೈ. ಮೌನೇಶ್ವರ ದಣಗೇಕರ ಸೋಲಿನ ರುಚಿ ತೋರಿಸಿದರು. 8ನೇ ಕ್ರಮಾಂಕದ ವೃಷಭ ಪಟ್ಟಣಕುಡೆಯನ್ನು ಗೋಪಾಳ ಅಡಳಹಟ್ಟಿ ಸೋಲಿಸಿದರು. 9ನೇ ಕ್ರಮಾಂಕದ ರೋಚಕ ಸೆಣಸಾಟದಲ್ಲಿ ಪುಣೆಯ ಓಂಕಾರ ಸಾತಪುತೆ ವಿರುದ್ಧ ಮೋತಿಬಾಗನ ನಿರ್ಪಾದಿ ನಿರ್ವಾನಟ್ಟಿ ವಿಜಯ ಸಾಧಿ ಸಿದರು. 10ನೇ ಕ್ರಮಾಂಕದಲ್ಲಿ ನಡೆದ ಸೆಣಸಾಟ ಭಾರೀ ರೋಚಕಕ್ಕೆ ಕಾರಣವಾಯಿತು. ಪುಣೆಯ ಕಿರಣ ಜಾಧವ ವಿರುದ್ಧ ಬೆಳಗಾವಿ ನಗರದ ಬಾಂಧುರ ಗಲ್ಲಿಯ ಆಕಾಶ ಗಾಢಿ ಗೆಲುವು ಸಾಧಿಸಿ ಪ್ರಶಸ್ತಿಗೆ ಭಾಜನರಾದರು. 10ಎ ಕ್ರಮಾಂಕದ ಕುಸ್ತಿಯಲ್ಲಿ ಮಂಜು ಕಕೇRರಿ ವಿರುದ್ಧ ರಮೇಶ ಸನ್ಯಾಳ ಗೆಲುವು ಸಾಧಿ ಸಿದರು. 13 ಕ್ರಮಾಂಕದಲ್ಲಿ ಪಂಕಜ ಕಡೋಲಿ ವಿರುದ್ಧ ಓಂಕಾರ ಚೌಗುಲೆ ಗೆದ್ದರು.

ಸೋಮನಾಥ ಸಾಳುಂಕೆ ಹಾಗೂ ವಿಕ್ರಮ ಶಿನೋಳಿ ಸೆಣಸಾಟದಲ್ಲಿ ಪೈಲ್ವಾನ್‌ ಸೋಮನಾಥ ಸಾಳುಂಕೆ ಗೆಲುವು ಸಾಧಿ 
ಟಗರು ತಮ್ಮದಾಗಿಸಿಕೊಂಡರು. 18ನೇ ಸಂಖ್ಯೆಯ ಕುಸ್ತಿಯಲ್ಲಿ ಸಂಜಯ ವಿರುದ್ಧ ಸುಶಾಂತ ಗೆಲುವಿನ ನಗೆ ಬೀರಿದರು. 

Advertisement

 ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next