Advertisement

ಚಳಿಗಾಲ ಕಲಾಪಕ್ಕೆ ಸುವರ್ಣ ಸೌಧ ಸಜ್ಜು 

11:54 AM Dec 13, 2021 | Team Udayavani |

ಬೆಳಗಾವಿ: ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ವಿಭಾಗಕ್ಕೆ ಕಿತ್ತೂರು ಕರ್ನಾಟಕ ಮರು ನಾಮಕರಣ ಮಾಡಿ ಘೋಷಣೆ ಮಾಡುವ ಮೂಲಕ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇರುವ ಮುಖ್ಯಮಂತ್ರಿ ಎಂದೇ ಹೆಸರು ಮಾಡಿರುವ ಬಸವರಾಜ ಬೊಮ್ಮಾಯಿ ಸುವರ್ಣ ವಿಧಾನಸೌಧದಲ್ಲಿ ತಮ್ಮ ಮೊದಲ ಅಧಿವೇಶನ ಮಾಡುತ್ತಿದ್ದಾರೆ.

Advertisement

ಕೊರೊನಾ ಆತಂಕದ ಸಮಯದಲ್ಲಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುತ್ತೇವೆ ಎಂದು ಹೆಮ್ಮೆಯಿಂದಹೇಳಿಕೊಳ್ಳುವಂತಿಲ್ಲ. ಆದರೆ ಸಂಕಷ್ಟದಲ್ಲೂ ಈ ಭಾಗದಜನರ ಬೇಡಿಕೆಗೆ ಸ್ಪಂದಿಸುವ ಜವಾಬ್ದಾರಿ ಮುಖ್ಯಮಂತ್ರಿಗಳಮೇಲಿದೆ. ಇದೇ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಜನರು ಚಳಿಗಾಲದ ಅಧಿವೇಶನವನ್ನು ಬಹಳ ಕಾತರದಿಂದನೋಡುತ್ತಿದ್ದಾರೆ.

ತಮ್ಮ ಪ್ರತಿ ಭಾಷಣದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿ ಮಾತನಾಡುವಮುಖ್ಯಮಂತ್ರಿಗಳ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಮೊದಲು ಭೀಕರ ಪ್ರವಾಹ, ನಂತರ ಕೊರೊನಾಕಾರಣದಿಂದ ಮೂರು ವರ್ಷಗಳ ನಂತರ ನಡೆಯುತ್ತಿರುವ ಅಧಿವೇಶನದಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಮೂರ್‍ನಾಲ್ಕು ಪಟ್ಟು ಹೆಚ್ಚಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಮೊದಲಿಂದಲೂ ಮೂರು ಪ್ರಮುಖ ಬೇಡಿಕೆಗಳಿವೆ. ಒಂದು ಜಿಲ್ಲಾ ವಿಭಜನೆ ಮಾಡಬೇಕು. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಬೇಗಪೂರ್ಣಗೊಳಿಸಬೇಕು ಹಾಗೂ ಸರಕಾರದ ಪ್ರಮುಖಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಮಾಡಬೇಕು. ಇದಕ್ಕೆ ಈಗ ಕಿತ್ತೂರು ಕರ್ನಾಟಕಕ್ಕೆ ಹೆಚ್ಚಿನಅನುದಾನ ಹಾಗೂ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಬೆಳೆ ಹಾಗೂ ಮನೆ ಹಾನಿ ಪರಿಹಾರ ಸೇರಿಕೊಂಡಿದೆ.

ಜಿಲ್ಲೆ ವಿಭಜನೆ :

Advertisement

ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಮೂರು ಜಿಲ್ಲೆಗಳನ್ನಾಗಿ ಮಾಡಬೇಕು ಎಂಬ ಒತ್ತಾಯ ಬಹಳ ವರ್ಷಗಳಿಂದ ಇದ್ದರೂ ರಾಜಕೀಯ ಕಾರಣದಿಂದಾಗಿ ಇದು ಕಾರ್ಯರೂಪಕ್ಕೆಬರುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ಮುಖ್ಯಮಂತ್ರಿಗಳುಜಿಲ್ಲೆಯ ವಿಭಜನೆ ಮಾಡುವ ಪ್ರಸ್ತಾಪ ಮಾಡಿದ್ದರು. ಹೋರಾಟಗಾರರು ಸಹತಮ್ಮ ಶ್ರಮಕ್ಕೆ ಫಲ ಸಿಕ್ಕಿತು ಎಂದೇ ಭಾವಿಸಿದ್ದರು. ಆದರೆ ಇದಾವುದೂ ಆಗಲೇ ಇಲ್ಲ.ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ,ಜಿಲ್ಲೆಯ ರಾಜಕಾರಣಿಗಳಿಗೆ ಇದು ಬೇಡವಾಗಿದೆ. ಚಿಕ್ಕೋಡಿ ಜಿಲ್ಲೆ ಮಾಡಿದರೆ ನಮ್ಮಮಹತ್ವ ಹೋಗುತ್ತದೆ. ಸಣ್ಣ ಸಣ್ಣ ಜಿಲ್ಲೆಗಳಾದರೆ ನಮಗೆ ಮೊದಲಿನ ಪ್ರಾಮುಖ್ಯತೆ ಇರುವದಿಲ್ಲ. ವ್ಯಾಪಾರ-ವಹಿವಾಟು ಸಹ ಕುಂಠಿತವಾಗುತ್ತದೆ. ರಾಜಕಾರಣದಲ್ಲಿಸಹ ಪ್ರಭಾವ ಕಡಿಮೆಯಾಗುತ್ತದೆ ಎಂಬ ಭಾವನೆ ಕೆಲವು ನಾಯಕರಲ್ಲಿದೆ. ಅವರೇ ಇದಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬುದು ಹೋರಾಟಗಾರರ ಅಸಮಾಧಾನ.

ಕಚೇರಿಗಳ ಸ್ಥಳಾಂತರ :

ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಸಕ್ಕರೆ ಆಯುಕ್ತರ ಕಚೇರಿಜಿಲ್ಲೆಗೆ ಬಂದಿದ್ದರೂ ಸುವರ್ಣ ವಿಧಾನಸೌಧಕ್ಕೆ ಬಂದಿಲ್ಲ. ಕಾರ್ಯದರ್ಶಿಗಳ ಮಟ್ಟದ ಕಚೇರಿಗಳ ಸ್ಥಳಾಂತರದ ಮಾತು ಅಲ್ಲಿಗೆ ನಿಂತಿದೆ. ಈ ಎಲ್ಲ ಬೇಡಿಕೆಗಳ ಜೊತೆಗೆ ಅತಿಹೆಚ್ಚು ಸಕ್ಕರೆಕಾರ್ಖಾನೆಗಳನ್ನು ಹೊಂದಿರುವ ಜಿಲ್ಲೆಯಿಂದ ಸರಕಾರದ ಮುಂದೆಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕುಎಂಬ ಬೇಡಿಕೆ ಇದೆ. ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿಯದೆರೈತರ ಹಿತ ಕಾಪಾಡುವ ದೃಷ್ಟಿಯಿಂದ ಶಾಸನ ರೂಪಿಸಬೇಕುಎಂಬ ಒತ್ತಾಯ ಇದೆ. ಈ ವಿಷಯದಲ್ಲಿ ಸರಕಾರದ ನಿಲುವು ರೈತರ ಮುಂದಿನ ಹೋರಾಟವನ್ನು ನಿರ್ಧರಿಸಲಿದೆ.

ನೀರಾವರಿ ಯೋಜನೆ :

ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಇನ್ನೂ ನನೆಗುದಿಗೆ ಬಿದ್ದಿವೆ. ಖೀಳೇಗಾಂವ್‌ ಏತ ನೀರಾವರಿ,ವೀರಭದ್ರೇಶ್ವರ ಏತ ನೀರಾವರಿ, ರಾಮೇಶ್ವರ ಏತನೀರಾವರಿ, ಮಹಾಲಕ್ಷ್ಮೀ ಏತ ನೀರಾವರಿ, ಕಿಣಯೇಜಲಾಶಯ ಯೋಜನೆ ಇನ್ನೂ ಆಮೆಗತಿಯಲ್ಲಿಸಾಗಿವೆ. ಹಿಂದಿನ ಸರಕಾರದ ಅವಧಿಯಲ್ಲಿ ಕೆಲವುಯೋಜನೆಗಳಿಗೆ ಚಾಲನೆ ಸಿಕ್ಕರೂ ಕಾಮಗಾರಿನಿರೀಕ್ಷಿತ ಮಟ್ಟದಲ್ಲಿ ವೇಗ ಕಂಡುಕೊಂಡಿಲ್ಲ. ಇದರಿಂದ ಯೋಜನೆಯ ವೆಚ್ಚ ಏರಿಕೆಯಾಗುತ್ತಲೇಇದೆ ಹೊರತು ಮುಗಿಯುವ ಲಕ್ಷಣ ಇಲ್ಲ. ಈಗ ಕೊರೊನಾ ಹಾವಳಿ ಇದಕ್ಕೆ ಮತ್ತಷ್ಟು ಅಡ್ಡಿಯಾಗಿದೆ.

ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಅದು ಸಾರ್ಥಕವಾಗುತ್ತಿಲ್ಲ. ಪ್ರತಿ ವರ್ಷ ಹತ್ತಾರುಕೋಟಿ ರೂ ಇದಕ್ಕೆ ವೆಚ್ಚವಾಗುವದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆ ಕಾಣುತ್ತಿಲ್ಲ. ಇದಕ್ಕೆಈಗಲೂ ಹಾಗೇ ಇರುವ ಉತ್ತರ ಕರ್ನಾಟಕದ ಚಿತ್ರ ಹಾಗೂ ಜನರ ಸ್ಥಿತಿಯೇ ನಿದರ್ಶನ. ಕಳೆದ ನಾಲ್ಕೈದುವರ್ಷಗಳಿಂದ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಮನೆ ಹಾಗೂಬೆಳೆ ಸಂಪೂರ್ಣ ಹಾಳಾಗಿವೆ. ಆದ್ದರಿಂದ ಸರಕಾರಈ ಅದಿವೇಶನದಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಬೇಕು.– ತ್ಯಾಗರಾಜ ಕದಮ್‌, ರೈತ ಸಂಘದ ಮುಖಂಡ

2018ರ ನಂತರ ಮತ್ತೆ ಅಧಿವೇಶನ ನಡೆಯುತ್ತಿರುವುದರಿಂದ ಜನರಲ್ಲಿ ಬಹಳಷ್ಟುನಿರೀಕ್ಷೆಗಳಿವೆ. ಕೃಷಿ, ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಸ್ಯೆಗಳ ಸರಮಾಲೆ ಇದೆ.ಉತ್ತರ ಕರ್ನಾಟಕದಲ್ಲಿ ಅಧಿವೇಶನ ಮಾಡಿದರೂ ಸರಕಾರದಿಂದ ಈ ಸಮಸ್ಯೆಗಳಿಗೆ ಗಟ್ಟಿಯಾದನಿರ್ಧಾರ ಬರುತ್ತಿಲ್ಲ. ಈಗ ಈ ಭಾಗದವರೇ ಮುಖ್ಯಮಂತ್ರಿಯಾಗಿರುವುದರಿಂದ ದೊಡ್ಡ ಮನಸ್ಸುಮಾಡಿ ಹೆಚ್ಚಿನ ಅನುದಾನ ಕೊಡಬೇಕು. ಜನರಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದನೆ ಮಾಡಬೇಕು.ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಿ ಸೌಧವನ್ನು ಸಕ್ರಿಯವಾಗಿ ಮಾಡಬೇಕು. – ಅಶೋಕ ಪೂಜಾರಿ, ಉ.ಕ ವಿಕಾಸ ವೇದಿಕೆ ಅಧ್ಯಕ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next