Advertisement
ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಮಹಾನಗರ ಪೊಲೀಸರು ವಿಫಲರಾಗಿದ್ದಕ್ಕೆ ಜನರು ಅಸಮಾಧಾಗೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಹು ಸಂಸ್ಕೃತಿಯ ನಗರಿ ಬೆಳಗಾವಿಯಲ್ಲಿ ದಿನದಿನಕ್ಕೂ ಮನೆಗಳ್ಳತನ, ವಾಹನ, ಸರಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿಲ್ಲ. 2020 ಇಡೀ ವರ್ಷ ಕೊರೊನಾ ಹಾವಳಿಯಲ್ಲಿಯೇ ಜನರು ಕಾಲ ಕಳೆದಿದ್ದಾರೆ.
Related Articles
Advertisement
ಪೊಲೀಸರು ಸೈಲೆಂಟ್ ಆಗಿದ್ದು ಏಕೆ?: ನಗರ ವ್ಯಾಪ್ತಿಯಲ್ಲಿ ಇಷ್ಟೊಂದು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಸಮ್ಮನಿದ್ದಿದ್ದಾದರೂ ಏಕೆ. ವಿಶೇಷ ತಂಡ ರಚಿಸಿ ಪತ್ತೆ ಹಚ್ಚುವಲ್ಲಿ ನಿಷ್ಕ್ರಿಯರಾಗಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಸಂಚಾರಿ ಪೊಲೀಸರಂತೆ ಬಹುತೇಕ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನ ತಪಾಸಣೆಯಲ್ಲಿಯೇ ನಿರತರಾಗಿದ್ದಾರೆ. ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿವೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಬಾಗಿಲು, ಕಿಟಕಿ ಮುರಿದು ಒಳ ನುಗ್ಗಿ ಚಿನ್ನಾಭರಣ, ನಗದು ಹಣ ದೋಚಿರುವ ಪ್ರಕರಣಗಳು ಬಹಳಷ್ಟಿವೆ. ವಾಹನ ಕಳ್ಳತನಗಳೂ ಸಾಕಷ್ಟಿವೆ. 275 ಪ್ರಕರಣಗಳ ಪೈಕಿ ಮನೆ ಹಾಗೂ ವಾಹನ ಕಳ್ಳತ ಹೆಚ್ಚಾಗಿ ನಡೆದಿವೆ.
ಇದನ್ನೂ ಓದಿ :ಶೌಚಗೃಹ ನಿರ್ಮಾಣ ವಿಚಾರ: ಸಭೆಯಲ್ಲಿ ಧರಣಿ ನಡೆಸಿದ ಜಿಪಂ ಸದಸ್ಯರು
ಏಳು ಒಂಟಿ ಮನೆಗೆ ಕನ್ನ ಹಾಕಿದ್ದ ಖದೀಮರು 6,57,747 ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಈ ಪೈಕಿ ಎರಡೇ ಪ್ರಕರಣ ಪತ್ತೆಯಾಗಿದ್ದು, ಇನ್ನೂ ಐದು ಪ್ರಕರಣಗಳನ್ನು ಪತ್ತೆ ಹಚ್ಚಬೇಕಿದೆ. 2.35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ವಾಪಸ್ಸು ನೀಡಲಾಗಿದೆ. ನಗರದಲ್ಲಿ ಮನೆ, ಅಂಗಡಿ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕಳವು ಮಾಡಲಾಗಿದೆ. 145 ವಾಹನ ಕಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ 43 ಪ್ರಕರಣ ಪತ್ತೆ ಹಚ್ಚಲಾಗಿದೆ. ಇನ್ನೂ 102 ಪ್ರಕರಣ ಪತ್ತೆಯಾಗಬೇಕಿದೆ.
ಸರಗಳ್ಳತನ ಪ್ರಕರಣ ಪತ್ತೆ ಆಗಿಲ್ಲ: ಆರು ದರೋಡೆ ಪ್ರಕರಣಗಳಲ್ಲಿ 8,58,720 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಮೂರು ಪ್ರಕರಣ ಪತ್ತೆ ಹಚ್ಚಿ 6,27,000 ರೂ. ಮೌಲ್ಯದ ವಸ್ತುಗಳನ್ನು ಮೂಲ ಮಾಲೀಕರಿಗೆ ಮರಳಿಸಲಾಗಿದೆ. ಇನ್ನೂ ಮೂರು ಪ್ರಕರಣಗಳು ಪತ್ತೆಯಾಗಬೇಕಿದೆ. 3.49 ಲಕ್ಷ ರೂ. ಮೌಲ್ಯದ ನಾಲ್ಕು ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಇನ್ನೂವರೆಗೆ ಒಂದೂ ಪ್ರಕರಣ ಪತ್ತೆಯಾಗಿಲ್ಲ.
27 ಸಾಮಾನ್ಯ ಕಳ್ಳತನಗಳ ಪ್ರಕರಣಗಳ ಪೈಕಿ 9 ಪ್ರಕರಣ ಭೇದಿಸಲಾಗಿದ್ದು, ಇನ್ನೂ 18 ಪ್ರಕರಣಗಳು ಪತ್ತೆಯಾಗಬೇಕಿದೆ. 70,77,288 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. 83 ಸಾವಿರ ರೂ. ಮೌಲ್ಯದ ಎರಡು ಜಾನುವಾರುಗಳ ಕಳ್ಳತನವಾಗಿವೆ.