Advertisement

ಹೊಸ ವಿಷಯ ಅರಿತು ಪರಿಣಾಮಕಾರಿ ಬೋಧನೆ ಕೈಗೊಳ್ಳಿ 

05:44 PM Dec 28, 2018 | |

ಬೆಳಗಾವಿ: ನಗರದ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಗಣಿತಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ವಿಷಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು.

Advertisement

ಸಮ್ಮೇಳನ ಉದ್ಘಾಟಿಸಿದ ಕೆ.ಎಲ್‌.ಇ. ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಮಾತನಾಡಿ, ಅಧ್ಯಾಪಕರು ಹೊಸ ವಿಷಯ ಪರಿಚಯ ಹಾಗೂ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕು ಎಂದರು.

ಮುಂಬೈನ ರಾಷ್ಟ್ರೀಯ ಉನ್ನತ ಗಣಿತ ಮಂಡಳಿಯ ಅಧ್ಯಕ್ಷ ಪ್ರೊ| ವಿ. ಶ್ರೀನಿವಾಸ ಮಾತನಾಡಿ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು. ಜಾಗತೀಕರಣ ಸಂದರ್ಭದಲ್ಲಿ ಗಣಿತ ವಿಷಯದಲ್ಲಿ ಹೆಚ್ಚೆಚ್ಚು ಮಹತ್ವದ ಸಂಶೋಧನೆಗಳು ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್‌.ಇ ವಿಶ್ವವಿದ್ಯಾಲಯದ ಕುಲಪತಿ ಡಾ| ವಿವೇಕ ಸಾವೋಜಿ ಮಾತನಾಡಿ, ಕೆ.ಎಲ್‌.ಇ. ಸಂಸ್ಥೆಯು ಮೂಲ ವಿಜ್ಞಾನ ಶಿಕ್ಷಣಕ್ಕೆ ಮಹತ್ವ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಈ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು. ವಿಭಿನ್ನ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರೊ| ವಿ. ಶ್ರೀನಿವಾಸ ದಿಕ್ಸೂಚಿ ಭಾಷಣ ಮಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ| ಶಿವಾನಂದ ಬಿ. ಹೊಸಮನಿ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಲ್‌.ವಿ. ದೇಸಾಯಿ, ಡಾ| ಎಚ್‌.ಬಿ. ರಾಜಶೇಖರ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ| ವಿ.ಡಿ. ಯಳಮಲಿ ಸ್ವಾಗತಿಸಿದರು. ಪ್ರೊ| ಟಿ. ವೆಂಕಟೇಶ ಪರಿಚಯಿಸಿದರು. ಪ್ರೊ| ಎಸ್‌.ಎಸ್‌. ಚೋಬಾರಿ ವಂದಿಸಿದರು. ಪ್ರೊ| ಎಂ.ಎಸ್‌. ಬಾಗಿ ಮತ್ತು ಪ್ರೊ| ದಿವ್ಯಾ ಪರುಲೇಕರ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next