Advertisement

Belagavi: ಯದ್ದಲಗುಡ್ಡ ಚೆಕ್‌ಪೋಸ್ಟ್ ನಲ್ಲಿ ದಾಖಲೆ‌ ಇಲ್ಲದ 5 ಕೋಟಿ ರೂ. ನಗದು ಪತ್ತೆ

10:58 PM Apr 11, 2023 | Team Udayavani |

ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದಾಖಲೆ‌ ಇಲ್ಲದ ಕೋಟಿ ಕೋಟಿ ಹಣ ಪತ್ತೆ ಆಗುತ್ತಿದ್ದು, ಗೋಕಾಕ ತಾಲೂಕಿನ ಯದ್ದಲಗುಡ್ಡ ಚೆಕ್‌ಪೋಸ್ಟ್ ನಲ್ಲಿ ಮಂಗಳವಾರ ಮಧ್ಯಾಹ್ನ 5 ಕೋಟಿ ರೂ.‌ನಗದು ಹಣ ಪತ್ತೆ ಆಗಿದೆ.

Advertisement

ಗೋಕಾಕ ಕಡೆಯಿಂದ ಬೆಳಗಾವಿಗೆ ತೆರಳುತ್ತಿದ್ದ ಕಾರಿನಲ್ಲಿ 5 ಕೋಟಿ ರೂ.‌ನಗದು ಹಣವನ್ನು ಸಾಗಿಸಲಾಗುತ್ತಿತ್ತು. ಬ್ಯಾಂಕಿಗೆ ಸಂಬಂಧಿಸಿದ ಹಣ ಇದಾಗಿದ್ದು, ವಾಹನದಲ್ಲಿ ಬ್ಯಾಂಕ್ ಮ್ಯಾನೆಜರ್ ಎಂ.ಎಸ್. ರೋಡಗಿ, ಪ್ರಥಮ ದರ್ಜೆ ಗುಮಾಸ್ತ ಎಂ.ಬಿ ಅಂಬಿ, ಭದ್ರತಾ ಸಿಬ್ಬಂದಿ ಎಲ್.ಬಿ. ಕುಂಬಾರ, ವಾಹನ ಚಾಲಕ ಎನ್.ಬಿ. ಪಾಟೀಲ ಇದ್ದರು.

ವಿಚಾರಣೆ ಮಾಡಿದಾಗ ಈ ಹಣದ ಕುರಿತು ಸೂಕ್ತ ದಾಖಲಾತಿ ಹಾಜರಪಡಿಸಿರುವುದಿಲ್ಲ. ಅಂಕಲಗಿ ಠಾಣೆನಪೊಲೀಸರು, ಎಫ್‌ಎಸ್ ಟಿ ತಂಡದ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಚುನಾವಣ ತರಬೇತಿಯಲ್ಲಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

Advertisement

Udayavani is now on Telegram. Click here to join our channel and stay updated with the latest news.

Next