Advertisement

ಬೆಳಗಾವಿ: ಮಟ್ಕಾ ಬುಕ್ಕಿಯಿಂದ ಲಂಚ ಪಡೆದಿದ್ದ ಎಎಸ್‌ಐ, ಮುಖ್ಯ ಪೇದೆ ಅಮಾನತು

07:09 PM Feb 01, 2022 | Team Udayavani |

ಬೆಳಗಾವಿ : ಮಟ್ಕಾ ಬುಕ್ಕಿಯಿಂದ ಒಂದು ಲಕ್ಷ ರೂ. ಲಂಚ ಪಡೆದಿದ್ದ ಎಎಸ್‌ಐ ಹಾಗೂ ಹೆಡ್ ಕಾನ್ಸಟೇಬಲ್ ಅವರನ್ನು ಅಮಾನತು ಮಾಡಿ ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

Advertisement

ಖಡೇಬಜಾರ್ ಠಾಣೆ ಎಎಸ್‌ಐ ಹತ್ತಿಕಟ್ಟಿ ಹಾಗೂ ಎಸಿಪಿ ಕ್ರೈಂ ವಿಭಾಗದ ಹೆಡ್ ಕಾನ್ಸಟೇಬಲ್ ಶಂಕರ ಪಾಟೀಲ ಅವರನ್ನು ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರು ಅಮಾನತುಗೊಳಿಸಿದ್ದಾರೆ.

ನಗರದಲ್ಲಿ ಅವ್ಯಾಹತವಾಗಿ ಮಟ್ಕಾ, ಜೂಜಾಟ ನಡೆಯುತ್ತಿದ್ದು, ಮಟ್ಕಾ ಆಡುವವರಿಗೆ ಎಎಸ್‌ಐ ಹತ್ತಿಕಟ್ಟಿ ಹಾಗೂ ಪೊಲೀಸ್ ಪೇದೆ ಶಂಕರ ಪಾಟೀಲ ಸಹಕಾರ ನೀಡುತ್ತಿದ್ದರು.

ಸೋಮವಾರ ಮಟ್ಕಾ, ಓಸಿ ಬುಕ್ಕಿಯಿಂದ ಈ ಇಬ್ಬರೂ ಸೇರಿ ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಕಮೀಷನರ್ ಬೋರಲಿಂಗಯ್ಯ ಅವರು, ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ.

ಇದನ್ನೂ ಓದಿ :  ಶರಣ ಸಾಹಿತ್ಯವನ್ನು ರಕ್ಷಣೆ ಮಾಡಿದವರಲ್ಲಿ ಮಾಚಿದೇವರು ಒಬ್ಬರು: ಶಾಸಕ ಸಿದ್ದು ಸವದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next