Advertisement

ಸಂಪತ್ತು ಮಾಡಿದರೆ ಉಪಯೋಗವಲ್ಲ, ಜ್ಞಾನವನ್ನು ಧಾರೆಯೆರೆಯುವುದರಿಂದ ಜೀವನ ಸಾರ್ಥಕವಾಗುತ್ತದೆ

06:16 PM Aug 22, 2021 | Team Udayavani |

ಬೈಲಹೊಂಗಲ: ಶಿಕ್ಷಕರು ನಮ್ಮ ಬದುಕು ರೂಪಿಸುವ ಪ್ರೇರಣಾದಾಯಕರಾಗಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವದರಿಂದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಹೇಳಿದರು.

Advertisement

ಸಮೀಪದ ಇಂಚಲದ ಸರಕಾರಿ ಪ್ರಾಥಮಿಕ‌ ಶಾಲೆಯ ಆವರಣದಲ್ಲಿ ರವಿವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಾಕಷ್ಟು ಸಂಪತ್ತು ಮಾಡಿದರೆ ಉಪಯೋಗವಲ್ಲ .ಇದ್ದ ಜ್ಞಾನವನ್ನು ಧಾರೆ ಎರೆಯುವದರಿಂದ ಜೀವನ ಸಾರ್ಥಕತೆ ಕಾಣುತ್ತದೆ‌. ಬೈಲಹೊಂಗಲ, ಇಂಚಲ ಮಣ್ಣಿನ ಗುಣಧರ್ಮದಲ್ಲಿ ಓದಿ ಯಶಸ್ಸು ಕಾಣುವುದು ಹೆಚ್ಚಾಗಿದೆ. ಬೆಳಗಾವಿ ಎಎಸ್ ಪಿ ಇದ್ದಾಗ ಇಂಚಲಕ್ಕೆ ಸಾಕಷ್ಟು ಬಾರಿ ಬೇಟಿ ನೀಡಿದ್ದೇನೆ.ಇಂಚಲ. ಡಾ.ಶಿವಾನಂದ ಭಾರತಿ ಸ್ವಾಮೀಜಿಗಳ ಪ್ರಯತ್ನದಿಂದ ಇಂಚಲ ಊರು ಶಿಕ್ಷಕರ ತವರೂರೆಂದು ಗುರುತಿಸಿಕೊಂಡಿದೆ ಎಂದರು.

ಸಂಘಟಕ ನಾಗಪ್ಪ ಮೇಟಿಯವರು 150 ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೆ ಪುಸ್ತಕಗಳನ್ನು ವಿತರಿಸುವ ಕಾರ್ಯ ಶ್ಲಾಘನೀಯವಾದುದು. ಪಿಎಸ್ ಐ, ಕೆಎಎಸ್, ಐಪಿಎಸ್, ಐಎಎಸ್ ಓದುವವರಿಗೆ ಇಂತಹ ಪುಸ್ತಕಗಳು ಸಹಕಾರಿಯಾಗಿವೆ. ಕೆಎಎಸ್, ಐಎಎಸ್ ಓದಿದವರು ದೊಡ್ಡವರಲ್ಲ. ಈ ನಾಡಿಗೆ ಅನ್ನ ನೀಡುವ ರೈತ ದೊಡ್ಡವನು.ಡಿಗ್ರಿ ಮಾಡಿದ್ದೇನೆ ಏನೂ ಕೆಲಸವಿಲ್ಲ ಎಂದು ಕೀಳರಿಮೆ ಬೆಳೆಸಿಕೊಳ್ಳದೆ ಯಾವುದಾರೂ ಕೆಲಸವಾದರೂ ಸರಿ ಪ್ರೇರಣಾದಾಯಕವಾಗಿ ಮಾಡಿ ಯಶಸ್ಸು ಕಾಣಬೇಕೆಂದರು.

ಇದನ್ನೂ ಓದಿ:ಆಗಸ್ಟ್ 23ರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ದಾಖಲಾತಿ ಆರಂಭ :ಸಚಿವ ಅಶ್ವತ್ಥನಾರಾಯಣ

ಕೆಎಎಸ್ ಅಧಿಕಾರಿ ಅಶೋಕ ಮಿರ್ಜಿ,  ಶಿವಯೋಗಿಶ್ವರ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಎಂ.ರಾಹುತನವರ, ಬೆಳಗಾವಿ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಅಬ್ದುಲ್ ರಶಿದ ಮಿರ್ಜನ್ನವರ, ಬಿಜಾಪುರ ಆಹಾರ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಸಿದ್ರಾಮ ಬಾಗೇವಾಡಿ,

Advertisement

ಎಂ.ಎಸ್.ರಾಯನಾಯ್ಕರ, ಪಿಡಿಓ ಮಲ್ಲಪ್ಪ ರಾಯನಾಯ್ಕರ,ಸದೆಪ್ಪ ವಾರಿ,ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವಾ ಗೊವನಕೊಪ್ಪ, ಉದ್ಯಮಿ ಶಿವು ಪಾಟೀಲ,ಎಸ್.ವಾಯ್.ಮಾರಿಹಾಳ, ಅಶೋಕ ಮಿರ್ಜನ್ನವರ,ಇನ್ನಿತರರು ಇದ್ದರು.ಎಸ್.ಆರ್.ಪಾಟೀಲ ಸ್ವಾಗತಿಸಿದರು.ಎನ್.ಜಿ.ಗಂಗಾಳದ ವಂದಿಸಿದರು.ಎಂ.ಬಿ.ಖಾನಗೌಡ್ರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next