Advertisement

ರಾಮದುರ್ಗದಲ್ಲಿ ಶಾಂತಿಯುತ ಮತದಾನ

04:03 PM Apr 24, 2019 | Naveen |

ರಾಮದುರ್ಗ: ಲೋಕಸಭಾ ಚುನಾವಣೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಮತದಾನ ಸಂದರ್ಭದಲ್ಲಿ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷದಿಂದ ಕೆಲ ಹೊತ್ತು ವಿಳಂಭ ಹಾಗೂ ಘಟಕನೂರ ಗ್ರಾಮದಲ್ಲಿ ದಲಿತ ಸಮುದಾಯದವರ ಮತದಾನ ಬಹಿಷ್ಕಾರ ಘಟನೆ ಹೊರತು ಪಡಿಸಿದರೆ ಬಹುತೇಕ ಶಾಂತಿಯುತ ಮತದಾನವಾಗಿದೆ.

Advertisement

ತಾಲೂಕಿನ ಘಟಕನೂರ ಗ್ರಾಮದಲ್ಲಿ ಮತಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡ ಪ್ರಯುಕ್ತ ಸುಮಾರು 2 ಗಂಟೆಗಳ ಕಾಲ, ಮುದೇನೂರ ಗ್ರಾಮದಲ್ಲಿ 1 ಗಂಟೆ ಸೇರಿದಂತೆ ಇತರ ಕೆಲ ಮತಗಟ್ಟೆಗಳಲ್ಲಿ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಂತ್ರಜ್ಞರು ಯಂತ್ರವನ್ನು ದುರಸ್ಥಿಗೊಳಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯ ವರೆಗೆ ಮತದಾರರು ಅತೀ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿರುವ ದೃಶ್ಯ ಕಂಡು ಬಂದಿತ್ತು. ನಂತರ ಮಧ್ಯಾಹ್ನದ ಹೊತ್ತಿಗೆ ಬಿಸಿಲು ಹೆಚ್ಚಾಗುತ್ತಿದ್ದಂತೆ ಮಂದಗತಿಯಲ್ಲಿ ಸಾಗುತ್ತಿದ್ದ ಮತದಾನ ನಂತರ ಸಂಜೆಯ ಹೊತ್ತಿಗೆ ಮತ್ತೆ ಬಿರುಸಿನ ಮತದಾನ ಪ್ರಾರಂಭವಾಯಿತು. ಘಟಕನೂರ ಗ್ರಾಮದ ಶಿವಕ್ಕ ಹನಮಂತ ಪಾಟೀಲ ಎಂಬ 110 ವರ್ಷದ ವೃದ್ಧೆ ವೀಲ್ಚೇರ್‌ನಲ್ಲಿ ಆಗಮಿಸಿ ಮತದಾನ ಮಾಡಿದರು.

ಶಾಸಕ ಮಹಾದೇವಪ್ಪ ಯಾದವಾಡ ಅವರು ತಾಲೂಕಿನ ಬಟಕುರ್ಕಿಯ 44ರ ಮತಗಟ್ಟೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಇನ್ನೂ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಪುರಸಭೆಯಲ್ಲಿ ನಿರ್ಮಿಸಿದ ಮತಗಟ್ಟೆ ಸಂಖ್ಯೆ 167 ರಲ್ಲಿ ಮತದಾನ ಮಾಡಿದರು. ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸನ್‌ನಯೀಂ ಸುರಕೋಡ ಪುರಸಭೆಯ ಮತಗಟ್ಟೆ ಸಂಖ್ಯೆ 167 ರಲ್ಲಿ ಮತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next