ಬೆಳಗಾವಿ: ಮಕ್ಕಳು ಒಳ್ಳೆಯ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಆದರಿಂದ ಪ್ರತಿ ವರ್ಷದಂತೆ ಸಂಸ್ಕೃತಿ ಇಲಾಖೆ ಹಮ್ಮಿಕೊಳ್ಳುತ್ತಿರುವ ಯುವ ಸೌರಭ ಕಾರ್ಯಕ್ರಮ ವೇದಿಕೆ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಲಿದೆ ಎಂದು ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಯುವ ಸೌರಭ 2023ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಅಧ್ಯಯನವೇ
ದಾರಿ ದೀಪ. ಸಂಸ್ಕೃತಿ, ಸಂಗೀತ, ಮನೋರಂಜನಾ ಕಾರ್ಯಕ್ರಮಗಳು ಮಕ್ಕಳನ್ನು ಮಾನಸಿಕವಾಗಿ ಹಾಗೂ ದೆ„ಹಿಕವಾಗಿ ಸದೃಢಗೊಳಿಸಲಿವೆ ಎಂದರು.
ಮಕ್ಕಳು ಮೊಬೆ„ಲ್ ಹಾಗೂ ಟಿ.ವಿ ನೋಡಿ ಸಮಯ ವ್ಯರ್ಥ ಮಾಡದೇ ಸಂಗೀತ, ಸಾಹಿತ್ಯ, ನೃತ್ಯ, ಜಾನಪದ, ಡೊಳ್ಳಿನ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವ ಮೂಲಕ ಕಲಾತ್ಮಕ ಗುಣ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿದ್ದರಾಮ ರೆಡ್ಡಿ, ಹಿರಿಯ ಕಲಾವಿದ ಗೋಪಾಲ ಚಿಪನಿ, ರೋಹಿಣಿ ಗಂಗಾಧರಯ್ಯ, ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಪ್ರಭಾರಿ ಪ್ರಾಚಾರ್ಯರಾದ ರಾಜೇಂದ್ರ ಗಲಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.
ಯುವ ಸೌರಭ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ನೃತ್ಯ, ಸಂಗೀತ, ಕಿರು ನಾಟಕಗಳ ಪ್ರದರ್ಶನಗಳು ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳು ನಡೆದವು.