Advertisement

ವಿಮಾನ ನಿಲ್ದಾಣಕ್ಕೆ ಅಗತ್ಯ ಜಮೀನು: ನಿತೇಶ್‌

06:13 PM Nov 09, 2023 | Team Udayavani |

ಬೆಳಗಾವಿ: ಬೆಳಗಾವಿ ವಿಮಾನನಿಲ್ದಾಣದ ರನ್‌ ವೇ ಮತ್ತು ಟರ್ಮಿನಲ್‌ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅವರು ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರನ್‌ ವೇ ಮತ್ತು ಟರ್ಮಿನಲ್‌ ಜಮೀನು ಅಗತ್ಯತೆ ಹಾಗೂ ಅದರ ಸಮರ್ಪಕ ಬಳಕೆಯ ಕುರಿತು ನೀಲನಕ್ಷೆಯ ಸಮೇತ ಸಮಗ್ರ ವರದಿಯನ್ನು ಸಲ್ಲಿಸಬೇಕು. ಇದನ್ನು ಆಧರಿಸಿ ಅಗತ್ಯತೆ ಅನುಸಾರ ಜಮೀನು ಒದಗಿಸಲಾಗುವುದು ಎಂದರು.

ಭೂ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸ್ಥಳೀಯ ಜನರಿಗೆ ಪರ್ಯಾಯ ರಸ್ತೆ, ಮತ್ತಿತರ ಸೌಕರ್ಯಗಳನ್ನು ಒದಗಿಸುವ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕರು ಸ್ಪಷ್ಟ ಹಾಗೂ ಲಿಖೀತ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.

ವಿಮಾನ ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಜಮೀನು ಒದಗಿಸಲಾಗಿದೆ. ಅದ್ದರಿಂದ ರನ್‌ ವೇ ಮತ್ತು ಟರ್ಮಿನಲ್‌ ವಿಸ್ತರಣೆ, ಸಿಗ್ನಲ್‌ ದೀಪಗಳ ಅಳವಡಿಕೆಗೆ ಅತ್ಯಗತ್ಯವಾಗಿರುವ ಜಮೀನು ಮಾತ್ರ ಒದಗಿಸಲಾಗುವುದು. ಸಾಧ್ಯವಾದಷ್ಟು ಕಾಮಗಾರಿಗಳನ್ನು ಈಗಾಗಲೇ ಒದಗಿಸಲಾಗಿರುವ ಜಮೀನಿನಲ್ಲಿ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಭೂಸ್ವಾದೀನ ಪಡಿಸಿಕೊಂಡಿರುವ ಜಮೀನಿನಲ್ಲಿ 14.05 ಎಕರೆ ಜಮೀನು ಏರ್‌ ಫೋರ್ಸ್‌ ಸ್ವಾದೀನದಲ್ಲಿರುವುದರಿಂದ ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕರಾದ ತ್ಯಾಗರಾಜನ್‌ ಅವರು ಮಾತನಾಡಿ, ರನ್‌ ವೇ ಮತ್ತು ಟರ್ಮಿನಲ್‌ ವಿಸ್ತರಣೆಗಾಗಿ ಅಗತ್ಯವಿರುವ ಜಮೀನು ಒದಗಿಸುವುದರ ಜತೆಗೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು. ಸ್ಥಳೀಯರಿಗೆ ಪರ್ಯಾಯ ರಸ್ತೆ ನಿರ್ಮಾಣ, ಮತ್ತಿತರ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ್‌ ದುಡಗುಂಟಿ, ಭೂದಾಖಲೆಗಳ  ಇಲಾಖೆಯ ಉಪನಿರ್ದೇಶಕರಾದ ವಿಜಯಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next