Advertisement

ಎದುರಾಳಿ ಮಣ್ಣು ಮುಕ್ಕಿಸಿದ ಪೈಲ್ವಾನರು

11:45 AM Feb 09, 2019 | |

ಬೆಳಗಾವಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳು ವಿವಿಧ ಪಟ್ಟುಗಳ ಮೂಲಕ ಎದುರಾಳಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದು, 14, 17ರ ವಯೋಮಿತಿ ಒಳಗಿನ ಹಾಗೂ ಹಿರಿಯರ ವಿಭಾಗದಲ್ಲಿ ಕುಸ್ತಿಗಳು ನಿರಂತರವಾಗಿ ಮುಂದುವರಿದಿವೆ.

Advertisement

ಅಂತಿಮ ಹಂತದ ಸುತ್ತು ಫೆ. 10ರಂದು ಮುಕ್ತಾಯ ಆಗುವ ಸಾಧ್ಯತೆ ಇದೆ. ಬಹುತೇಕ ಎಲ್ಲ ವಿಭಾಗಗಳಲ್ಲೂ ಬೆಳಗಾವಿ, ಬಾಗಲಕೋಟೆ, ದಾವಣಗೆರೆಯ ಪೈಲ್ವಾನರು ಮಿಂಚಿದರು. ಜಗಜಟ್ಟಿಗಳ ಕಾಳಗ ನೋಡಲು ಕುಸ್ತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಹಿರಿಯರ ವಿಭಾಗದ 61 ಕೆಜಿಯಲ್ಲಿ ಎರಡನೇ ಸುತ್ತಿನಲ್ಲಿ ಬಾಗಲಕೋಟೆಯ ಸೋಮನಾಥನನ್ನು ಹಳಿಯಾಳದ ಶ್ರವಣಕುಮಾರ, ಮನೋಜನನ್ನು ಬಾಗಲಕೋಟೆಯ ಬಾಳಾ ಮಗದುಮ್‌, ರಿಯಾಜ್‌ ಜಮಾದಾರನನ್ನು ಬೆಳಗಾವಿಯ ಚೇತನ ಲಂಗುಟಿ, ನಿಖೀಲ್‌ ಪಾಟೀಲನನ್ನು ಬೆಳಗಾವಿಯ ವಿನೋದರಾಜೆ, ರಾಕೇಶನನ್ನು ಬೆಳಗಾವಿಯ ಪ್ರಹ್ಲಾದ, ಆಕಾಶನನ್ನು ಬೆಳಗಾವಿಯ ಸಂತೋಷ ಮೇತ್ರಿ, ಕಿರಣಕುಮಾರನನ್ನು ಬೆಳಗಾವಿಯ ಶುಭಂ ಪಾಟೀಲ ಸೋಲಿಸಿದರು.

ಹಿರಿಯರ 57 ಕೆ.ಜಿಯ ಎರಡನೇ ಸುತ್ತಿನಲ್ಲಿ ರಾಮಲಿಂಗನನ್ನು ಮಲ್ಲೇಶ, ಜಮೀಲನನ್ನು ಕಾರ್ಥಿಕ, ದಾದಾಫೀರನನ್ನು ಬೆಳಗಾವಿಯ ವಿಠ್ಠಲ  ಕಲಖಾಂಬ, ಸಿದ್ದಲಿಂಗನನ್ನು ಪ್ರಮೋದ ದಡ್ಡೀಕರ ಸೋಲಿಸಿದರು.

14ರ ವಯೋಮಿತಿ ಒಳಗಿನ 38 ಕೆ.ಜಿ. ವಿಭಾಗದಲ್ಲಿ ಎರಡನೇ ಸುತ್ತಿನಲ್ಲಿ ಚಿಮ್ಮಡನ ಷಣ್ಮುಖ ವಿರುದ್ಧ ಬೆಳಗಾವಿಯ ಮಂಜುನಾಥ ಚೆಂಡಿ, ರಬಕಂವಿಯ ರಾಮು ವಿರುದ್ಧ ಬೆಳಗಾವಿಯ ರೋಹಿತ್‌ ಕೋಳಿವೀರಾಪುರದ ವಿಠuಲ ವಿರುದ್ಧ ಧಾರವಾಡದ ಶಿವಕುಮಾರ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಧಾರವಾಡದ ಸಿದ್ಧರಾಮೇಶನ ವಿರುದ್ಧ ಬಾಗಲಕೋಟೆಯ ಸಾಗರ ಕಿದ್ರಾಪುರ ಗೆಲುವು ಸಾಧಿಸಿದರು. ಬೆಳಗಾವಿಯ ದಾದಾಫೀರ ವಿರುದ್ಧ ಮುಧೋಳದ ಅಜಯ, ಶಿರಗುಪ್ಪಿಯ ಶ್ರೀವರ್ಧನ ವಿರುದ್ಧ ಬೆಳಗಾವಿಯ ನಾಗರಾಜ ಚುಳಕೆ, ದಾವಣಗೆರೆಯ ಸಚೀನ ವಿರುದ್ಧ ಬೆಳಗಾವಿಯ ಪ್ರವೀಣ, ಗೋಕಾಕ ಫಾಲ್ಸ್‌ನ ಅಶಾರಾ ವಿರುದ್ಧ ಗದಗನ ಅಕ್ಷಯ ಗೆಲುವು ಸಾಧಿಸಿದರು.

Advertisement

14ರೊಳಗಿನ 41 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಬಾಗಲಕೋಟೆಯ ಆದಿನಾಥನನ್ನು ಅಪ್ಪಾಜಿ ಮಾರನೂರ, ಸಂತೋಷನನ್ನು ಹಳಿಯಾಳದ ಸೂರಜ, ಬಾಗಲಕೋಟೆಯ ಪ್ರಶಾಂತನನ್ನು ಹಳಿಯಾಳದ ರಮೇಶ, ಬೆಳಗಾವಿಯ ಪ್ರಮೋದನನ್ನು ದಾವಣಗೆರೆಯ ಪರಶುರಾಮ ಚಿತ್‌ ಮಾಡುವ ವಿಜಯ ಸಾಧಿಸಿದರು. ಚಿಕ್ಕೋಡಿಯ ಸಚಿನ ವಿರುದ್ಧ ದಾವಣಗೆರೆಯ ಜಗದೀಶ, ಗದಗನ ಕೃಷ್ಣಾ ವಿರುದ್ಧ ಬಾಗಲಕೋಟೆಯ ಪ್ರಶಾಂತ ಛಲವಾದಿ, ಶ್ರೀನಿವಾಸ ಪಾಟೀಲ ವಿರುದ್ಧ ಬೆಳಗಾವಿಯ ವಿಠuಲ ವಂಟಮೂರಿ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next