Advertisement

ಬೆಳಗಾವಿಯಲ್ಲಿ ವ್ಯಕ್ತಿಯ ರುಂಡ ಚೆಂಡಾಡಿ ಭೀಕರ ಹತ್ಯೆ!

06:44 PM Aug 26, 2022 | Team Udayavani |

ಬೆಳಗಾವಿ: ತಾಲೂಕಿನ ಹಲಗಾ ಗ್ರಾಮದ ತಾರೀಹಾಳ ಕ್ರಾಸ್‌ನ ಜೈನ ಬಸದಿ ಬಳಿ ವ್ಯಕ್ತಿಯೋರ್ವನ ರುಂಡ ಚೆಂಡಾಡಿ ಭೀಕರ ಹತ್ಯೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಗದಗಯ್ಯ ಹಿರೇಮಠ(45) ಎಂಬ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ರುಂಡವನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಬೈಕ್ ಮೇಲೆಯೇ ಮೃತದೇಹ ಬಿದ್ದಿದ್ದು, ಇದನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಕೊಂಡಸಕೊಪ್ಪ ಗ್ರಾಮದಿಂದ ಹೊರಟಿದ್ದ ಗದಗಯ್ಯನ ದ್ವಿಚಕ್ರ ವಾಹನ ನಿಲ್ಲಿಸಿದ ಹಂತಕರು ಏಕಾಏಕಿ ಮಾರಕಾಸ್ತ್ರದಿಂದ ಹೊಡೆದಿದ್ದಾರೆ. ರುಂಡ ಚೆಂಡಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಗದಗಯ್ಯನ ಕೊಲೆ ನಡೆದಿದೆ ಎಂದು ಪೊಲೀಸಕರು ಶಂಕಿಸಿದ್ದಾರೆ.

ಇದನ್ನೂ ಓದಿ: ಧರ್ಮದ ಹೆಸರಿನಲಿ ಬಿಜೆಪಿ ರಾಜಕಾರಣ; ಬಿ.ಕೆ.ಹರಿಪ್ರಸಾದ್‌

ಹಿರೇಬಾಗೇವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಇನ್ಸಪೆಕ್ಟರ್ ವಿಜಯಕುಮಾರ ಸಿನ್ನೂರ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next