ಮೂಡಲಗಿ: ಗಾಂಧೀಜಿ ಭವ್ಯ ಭಾರತದ ಮಹಾನ್ ಚೇತನ ವ್ಯಕ್ತಿ. ಅವರು ಕಂಡ ಕನಸು ನನಸಾಗಿಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಬಿ. ಗೋರೋಶಿ ಹೇಳಿದರು. ಪುರಸಭೆ ಸಭಾ ಭವನದಲ್ಲಿ ಮಹಾತ್ಮ ಗಾಂಧೀಜಿ 150 ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹಿರಿಯ ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ, ಪ್ರತಿಯೊಬ್ಬರೂ ಪ್ರತಿ ದಿನ ತಮ್ಮ ಮನೆಗಳಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳುವ ಕಾರ್ಯವೇ ಸ್ವಚ್ಛತಾ ಅಭಿಯಾನವಾಗಿದೆ ಎಂದರು.
ತಹಶೀಲ್ದಾರ್ ಕಾರ್ಯಾಲಯದ ಶಿರಸ್ತೇದಾರ ಎಸ್.ಎ. ಬಬಲಿ, ಎ.ಆರ್. ಕುರಬರ, ಸಿ.ಬಿ. ಪಾಟೀಲ, ಪಾಂಡು ಬಂಗೆನ್ನವರ, ಈರಪ್ಪ ಢವಳೇಶ್ವರ, ಜಯಶ್ರೀ ದೇಶಪಾಂಡೆ, ಗೀತಾ ಬೂದಿಹಾಳ, ರವಿ ಸಣ್ಣಕ್ಕಿ, ರಮೇಶ ಅಲಗೂರ, ಬಿ.ಎಸ್. ಪಾಟೀಲ ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಶೃತಿ ಬಂಗೆನ್ನವರ ಪ್ರಥಮ, ಸೈಯ್ಯದ ಅಲಿ ನದಾಫ ದ್ವಿತೀಯ, ಭಾಗ್ಯಶ್ರೀ ಗಾಣಿಗೇರ ತೃತೀಯ, ಚಿತ್ರಕಲೆಯಲ್ಲಿ ಶಿಲ್ಪಾ ಸೂಳನ್ನವರ ಪ್ರಥಮ, ಸಂತೋಷ ಬಾಗೇವಾಡಿ ದ್ವಿತೀಯ, ಸಚಿನ್ ಮಿರ್ಜಿ ತೃತೀಯ ಬಹುಮಾನ ಪಡೆದರು.
ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಚರಣೆ: ತಹಶೀಲ್ದಾರ್ ಕಾರ್ಯಾಲಯದಲ್ಲಿ ಗ್ರೇಡ್-2 ತಹಶೀಲ್ದಾರ್ ಎಲ್.ಎಚ್. ಭೋವಿ ಮಹಾತ್ಮ ಗಾಂಧೀ ಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿರಸ್ತೇದಾರ ಎಸ್.ಎ. ಬಬಲಿ, ಅಮೀತ ಕರನೂರೆ, ವೈ. ಎಂ. ಉದ್ದಪ್ಪನವರ, ವಿ.ಎಸ್. ಕುಂಬಾರ, ಭಾರತಿ ಕಾಳೆ ಇದ್ದರು.