Advertisement

Belagavi: ಬಸ್‌ ಸೀಟಿಗಾಗಿ ಜಗಳ: ದಂಪತಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ತಂಡ

03:43 PM Dec 03, 2024 | Team Udayavani |

ಬೆಳಗಾವಿ: ಬಸ್ ಸೀಟಿಗಾಗಿ ಜಗಳವೊಂದು ನಡೆದು ವಿಕೋಪಕ್ಕೆ ತಿರುಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ನಡೆದಿದೆ. ಯುವಕರ ಗುಂಪೊಂದು ಗಂಡ ಹೆಂಡತಿಗೆ ಮನಸೋ ಇಚ್ಚೆ ಹೊಡೆದಿದೆ. ಗರ್ಭಿಣಿ ಎಂದು ನೋಡದೆ ಮನಸೋ‌ ಇಚ್ಚೆ ಹೊಡೆಯಲಾಗಿದೆ.

Advertisement

ನನ್ನ ತಂದೆ‌-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಮಗಳು ಕಣ್ಣೀರು ಹಾಕಿದೆ. ನನ್ನ ಪತಿಗೆ ಹೊಡೆಯಬೇಡಿ ಎಂದು ಬಿಡಿಸಲು ಹೋದ ಪತ್ನಿಯ ಮೇಲೂ ಹಲ್ಲೆ ಮಾಡಲಾಗಿದೆ.

ಪರಪ್ಪ ಶಿವಪ್ಪ ನಾಸಿಪುಡಿ, ಹಾಗೂ ಪತ್ನಿ ಸುನಿತಾ ಮೇಲೆ ಹಲ್ಲೆ ಮಾಡಲಾಗಿದೆ.

ಏನಿದು ಘಟನೆ?

ಸಂಕೇಶ್ವರದಿಂದ ಗೋಕಾಕ್ ಗೆ ಹೊರಟಿದ್ದ ಬಸ್‌ನಲ್ಲಿ ಗಲಾಟೆ ನಡೆದಿದೆ.  ಬಸ್‌ನಲ್ಲಿ ಸೀಟು ವಿಚಾರಕ್ಕೆ ದಂಪತಿಯೊಂದಿಗೆ ಇಬ್ಬರು ಮಹಿಳೆಯರ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಬಸ್‌ ನಲ್ಲಿದ್ದ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಮಹಿಳೆಯರು ಮನೆಯವರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಹತ್ತಕ್ಕೂ ಹೆಚ್ಚು ಯುವಕರ ಬಂದು ಹಲ್ಲೆ ನಡೆಸಿದೆ.

Advertisement

ಬೈಕ್ ನಲ್ಲಿ ಬಂದ ಯುವಕರ ತಂಡ ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ದಂಪತಿಗೆ ಹಲ್ಲೆ ಮಾಡಿದೆ. ಪತಿ ಹಾಗೂ ಪತ್ನಿ ಇಬ್ಬರನ್ನೂ ಬಸ್ಸಿನಿಂದ ಕೆಳಗೆಳೆದು ಮನಬಂದಂತೆ ಹೊಡೆದಿದ್ದಾರೆ.

ಬಸ್‌ನಲ್ಲಿದ್ದ ಪ್ರಯಾಣಿಕರು ಹೇಳಿದರೂ ಕೇಳದ ಯುವಕರು ಮನಬದಂತೆ ಥಳಿಸಿದ್ದಾರೆ. ತಂದೆ ತಾಯಿಯ ಮೇಲೆ ಹಲ್ಲೆ ಕಂಡ ಮಗಳು ಕಣ್ಣೀರು ಹಾಕಿದ್ದಾಳೆ.

ಸಂಕೇಶ್ವರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next