Advertisement

Belagavi: ಮನಸ್ಸು ಅರಳಿಸುವ ಹಬ್ಬಗಳು

05:58 PM Oct 17, 2023 | Team Udayavani |

ಹುಕ್ಕೇರಿ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು ಎಲ್ಲರನ್ನು ಒಂದುಗೂಡಿಸಿ, ಅವರಲ್ಲಿ ಸಾಮರಸ್ಯದ ಬೆಸುಗೆ ಹಾಕಿ ನಮ್ಮ ದೇಶಿಯ ಸಂಸ್ಕೃತಿಯನ್ನ ಎತ್ತಿ ಹಿಡಿಯುವಲ್ಲಿ ಹಿರಿಯ ಪಾತ್ರ ವಹಿಸುತ್ತವೆ. ಹಾಗೆಯೇ ದಸರಾ ಉತ್ಸವ ನಮ್ಮಲ್ಲಿರುವ ಅಸುರೀ ಗುಣಗಳು ಹೋಗಿ ದೈವಿ ಗುಣಗಳು ಬರುವ ಹಾಗೆ ಮಾಡುವಂತಹ ಅಪರೂಪದ ಹಬ್ಬವಾಗಿದೆ.

Advertisement

ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ರಾಜ್ಯ, ಹೊರರಾಜ್ಯ, ಹೊರದೇಶದಿಂದಲೂ ಕೂಡಾ ಜನರನ್ನು ಕರೆಸುವ ಮುಖಾಂತರ ನಮ್ಮ ಜನರಿಗೆ ಪರಿಚಯಸುವ ಕೆಲಸ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನುಡಿದರು. ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಆಧ್ಯಾತ್ಮ ಪ್ರವಚನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮಿಗಳು ಮಾತನಾಡಿ, ಜನರಿಗೆ ಹೊಸದೇನಾದರೂ ಕೊಡಬೇಕು. ನಮ್ಮ ಜನ ಎಲ್ಲವನ್ನು ನೋಡಬೇಕು ಎನ್ನುವ ಅಭಿಲಾಷೆಯಿಂದ ಸಾಕಷ್ಟು ಪರಿಶ್ರಮ ಪಟ್ಟು ಸ್ವಾಮೀಜಿಗಳು ವಿನೂತನ ಕಾರ್ಯಕ್ರಮ ಮಾಡುತ್ತಾ ಬಂದಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.
.
ಆಧ್ಯಾತ್ಮ ಪ್ರವಚನ ನೀಡಿದ ಮಾತೋಶ್ರೀ ಪಾರ್ವತಿದೇವಿ ಮಾತನಾಡಿ, ಧ್ಯಾನ, ಭಜನೆ, ಸತ್ಸಂಗಗಳು ನಮ್ಮಲ್ಲಿರುವ ದುರ್ಗುಣಗಳನ್ನು ಹೊಡೆದೋಡಿಸುತ್ತವೆ. ಅದಕ್ಕಾಗಿ ನಾವು ನಿತ್ಯ ಪೂಜೆ, ಪಾರಾಯಣವನ್ನು ಮಾಡಬೇಕು ಎಂದರು.

ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಆರ್‌ ಕೆ ಹುಕ್ಕೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಹುಕ್ಕೇರಿ ಮಾತನಾಡಿದರು. ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಮಹಾವೀರ ಭಾಗಿ, ಪರಗೌಡ ಪಾಟೀಲ ಉಪಸ್ಥಿತರಿದ್ದರು. ಸಿ ಎಂ ದರಬಾರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next