Advertisement
ನಂದಿಹಳ್ಳಿ ಗ್ರಾಮದಲ್ಲಿರುವ ಕನ್ನಡ ಸರ್ಕಾರಿ ಶಾಲೆಯ ಮಕ್ಕಳಿಗೆ ತಾರತಮ್ಯ ಮಾಡಲಾಗುತ್ತಿದೆ. ಒಂದೂವರೆ ವರ್ಷದಿಂದಈ ತಾರತಮ್ಯ ನಡೆದಿದೆ. ಮರಾಠಿ ಮಾಧ್ಯಮದ ಮಕ್ಕಳಿಗೆ ಕೊಠಡಿಯೊಳಗೆ ಪಾಠ ಹೇಳುತ್ತಿದ್ದರೆ, ಕನ್ನಡ ಮಾಧ್ಯಮದ ಮಕ್ಕಳಿಗೆ ಕೊಠಡಿ ಹೊರ ಭಾಗದಲ್ಲಿ ಕೂರಿಸಿ ಪಾಠ ಹೇಳಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಕರುನಾಡ ಸೇನೆ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಮಾಧ್ಯಮದ 83 ಮಕ್ಕಳು ಇದ್ದಾರೆ. ಆದರೆ ಕೇವಲ 2 ಕೊಠಡಿಗಳು ಇರುವುದರಿಂದ ಮಕ್ಕಳಿಗೆ ಸೂಕ್ತ ಜಾಗ ಇಲ್ಲದೇ ಹೊರ ಭಾಗದಲ್ಲಿ ಅನಿವಾರ್ಯವಾಗಿ ಪಾಠ ಕಲಿಯಬೇಕಾಗಿದೆ. ಕನ್ನಡ ಶಾಲೆಗಳಿಗೆ ಈ ರೀತಿ ತಾರತಮ್ಯ ಮಾಡುತ್ತಿರುವ ಶಿಕ್ಷಣ ಇಲಾಖೆ ವಿರುದ್ಧ ಕಿಡಿಕಾರಿದರು. ಮರಾಠಿ ಮಾಧ್ಯಮದ ಮಕ್ಕಳಿಗೆ ಸುಸಜ್ಜಿತ ಕಟ್ಟಡದಲ್ಲಿ ಪಾಠ, ಕನ್ನಡ ಮಾಧ್ಯಮದ ಮಕ್ಕಳಿಗೆ ಶಾಲಾ ಕಟ್ಟಡದ ಕಟ್ಟೆ ಮೇಲೆ ಪಾಠ ಮಾಡಲಾಗುತ್ತಿದೆ. ಒಂದೇ ಕೊಠಡಿಯಲ್ಲಿ ಐದು ತರಗತಿಗಳನ್ನು ನಡೆಸುತ್ತಿದ್ದರೆ, ಇನ್ನೊಂದು ಕೊಠಡಿಯಲ್ಲಿ ಕಚೇರಿ ಮತ್ತೂಂದು ತರಗತಿ ನಡೆಸಲಾಗುತ್ತಿದೆ. ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮರಾಠಿ ಭಾಷಿಕ ಮಕ್ಕಳು ಮಾತ್ರ ಸುಸಜ್ಜಿತ ಕಟ್ಟಡದಲ್ಲಿ ಪಾಠ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ನಮ್ಮ ಕನ್ನಡ ಶಾಲೆಯಲ್ಲಿ 83 ಮಕ್ಕಳು ಕಲಿಯುತ್ತಿದ್ದು ಎರಡು ಕೊಠಡಿಗಳಿವೆ. 1ರಿಂದ 3ನೇ ತರಗತಿವರೆಗೆ ನಲಿ ಕಲಿ ತರಗತಿನಡೆಯುತ್ತದೆ. ಮರಾಠಿ ಶಾಲೆಯವರೇ ನಮಗೆ ಒಂದು ಕೊಠಡಿ ನೀಡಿದ್ದು, ಅದರಲ್ಲಿ ಪಾಠ ಮಾಡಲಾಗುತ್ತಿದೆ. ಇನ್ನೂ ಮೂರು ಕೊಠಡಿಗಳ ಅಗತ್ಯವಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಪ್ರತಿಕ್ರಿಯಿಸಿದರು. ನಂದಿಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಹೋಗಿ ಜನರ ಹೆಸರು ಹಿಡಿದು ನಾನು ಕರೆಯುತ್ತೇನೆ. ಕನ್ನಡ ಮಕ್ಕಳಿಗೆ ತಾರತಮ್ಯ ಆಗುತ್ತಿರುವ ಬಗ್ಗೆ ಒಮ್ಮೆಯೂ ಜನ ನನಗೆ ಹೇಳಿಲ್ಲ. ನನ್ನ ಕ್ಷೇತ್ರದ ಮರಾಠಿ ಶಾಲೆಗಳಲ್ಲಿ ಮರಾಠಿ ಕಲೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಪಾಲಕರು ಕನ್ನಡ ಮಾಧ್ಯಮಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ.
*ಲಕ್ಷ್ಮೀ ಹೆಬ್ಬಾಳಕರ, ಸಚಿವ