Advertisement
ಬೆಳಗಾವಿ ಗಣೇಶೋತ್ಸವ ಎಂದರೆ ಇಡೀ ಕರ್ನಾಟಕದಲ್ಲಿಯೇ ಅತ್ಯಂತ ವೈಭವ ಹಾಗೂ ಸಂಭ್ರಮದ ಹಬ್ಬವಾಗಿದೆ. ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಆಗಿರುವ ಮೂರ್ತಿಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಈ ಗಣಪನ ಮೂರ್ತಿಗಳನ್ನು ವೀಕ್ಷಿಸುವುದೇ ಒಂದು ಸಂಭ್ರಮ-ಸಂತಸ. ಒಂದು ವಾರದಿಂದ ಬೆಳಗಾವಿಗೆ ಗಣೇಶ ಮೂರ್ತಿ ನೋಡಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆಯಿಂದ ಬರುತ್ತಿರುವ ಜನರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ.
ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಮಹಾರಾಷ್ಟ್ರ ಹಾಗೂ ಗೋವಾ ಕಡೆಗಳಿಂದಲೂ ಜನರು ಬೆಳಗಾವಿಗೆ ಬರುತ್ತಿದ್ದಾರೆ. ವಾರಾಂತ್ಯದ ಶನಿವಾರ ಮತ್ತು ರವಿವಾರವಂತೂ ಗಣಪನ ವೀಕ್ಷಣೆಗೆ ಜನಜಂಗುಳಿಯೇ ಸೇರಿತ್ತು. ಭಕ್ತರ ಸಂಖ್ಯೆ ಅಧಿಕವಾಗಿದ್ದರಿಂದ ಕೆಲವು ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಎಲ್ಲಿ ನೋಡಿದರಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
Related Articles
Advertisement
ಸಾಮಾಜಿಕ ಸಂದೇಶ ಸಾರುವ ರೂಪಕಗಳು ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ 378ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಒಂದಕ್ಕಿಂತ ಒಂದು ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಭಕ್ತರನ್ನು ಆಕರ್ಷಿಸಲು ಕೆಲ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿಗಳು ವಿವಿಧ ರೂಪಕಗಳನ್ನು ತಯಾರಿಸಿವೆ. ಪ್ರಚಲಿತ ವಿದ್ಯಮಾನಗಳು, ಮಕ್ಕಳಿಗೆ ಶಿಕ್ಷಣ ಕಲಿಸಿ ಎನ್ನುವ ಶಿಕ್ಷಣ ಜಾಗƒತಿ, ಚಂದ್ರಯಾನ-3 ಯಶಸ್ವಿ ಉಡಾವಣೆ, ನೇಕಾರರ ಶ್ರಮ, ರೈತರು ಹೊಲದಲ್ಲಿ ಉಳುಮೆ ಮಾಡುತ್ತಿರುವುದು, ಹಿಮಾಲಯ ಪರ್ವತ ಮಾದರಿ ನಿರ್ಮಾಣ, ಸೇತುವೆ ನಿರ್ಮಾಣ, ಚಕ್ಕಡಿ ಗಾಡಿ ಶರ್ಯತ್ತಿನ ಮಾದರಿ ಹೀಗೆ ವಿವಿಧ ಮಾದರಿಗಳು ಸಾಮಾಜಿಕ ಸಂದೇಶ ಸಾರುತ್ತಿವೆ. ಆಕರ್ಷಕ ಭಂಗಿಯ ಮೂರ್ತಿಗಳು
ಈ ವರ್ಷ ವಿವಿಧ ಭಂಗಿ ಹಾಗೂ ಅವತಾರಗಳ ಬೆನಕನನ್ನು ಸಾರ್ವಜನಿಕ ಮಂಡಳಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಲಾವಿದನ ಕೈಚಳಕದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಗರುಡ ಮೇಲೆ ಗಣಪ, ಗದೆ ಮೇಲೆ ಕುಳಿತಿರುವ ಗಣೇಶ, ಬಾಲ ಗಣಪ, ನೃತ್ಯ ಮಾಡುತ್ತಿರುವುದು, ಕೃಷ್ಣನ ಅವತಾರ, ಛತ್ರಪತಿ ಶಿವಾಜಿ ಮಹಾರಾಜರ ಅವತಾರ, ಕೃಷ್ಣೆ-ರಾಧೆಯ ನೃತ್ಯ, ಮಹಿಳೆಯನ್ನು ಛೇಡಿಸುತ್ತಿರುವ ವ್ಯಕ್ತಿಗೆ ಗಣಪನಿಂದ ಶಿಕ್ಷೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆನಕ, ಹಾವಿನ ಮೇಲೆ ನಿಂತಿರುವ ವಿಘ್ನನಿವಾರಕ, ಡಮರುಗ-ತ್ರಿಶೂಲದಲ್ಲಿ ವಿನಾಯಕ ಹೀಗೆ ವಿವಿಧ ಅತ್ಯಾಕರ್ಷಕ ಭಂಗಿಯ ಗಣಪತಿ ಮೂರ್ತಿಗಳು ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಆಗಿವೆ. ಪ್ರತಿ ವರ್ಷ ನಾವು ಗಣೇಶ ಮೂರ್ತಿಗಳನ್ನು ವೀಕ್ಷಿಸಲು ಬೆಳಗಾವಿಗೆ ಬರುತ್ತಿವೆ. ಮುಂಬೈ, ಪುಣೆ ಹೊರತುಪಡಿಸಿದರೆ ಬೆಳಗಾವಿಯಲ್ಲಿ ಅತ್ಯಂತ ಆಕರ್ಷಕ ಮೂರ್ತಿಗಳು ಗಮನಸೆಳೆಯುತ್ತಿವೆ. ನಾವು ಕುಟುಂಬ ಸಮೇತರಾಗಿ ಬಂದಿದ್ದೇವೆ.
ಮಹಾದೇವ ಕಲ್ಲಣ್ಣವರ, ಬೈಲಹೊಂಗಲ *ಭೈರೋಬಾ ಕಾಂಬಳೆ