Advertisement
ನಗರಸೇವಕ ಅಭಿಜಿತ್ ಜವಳಕರ ಹಲ್ಲೆಗೊಳಗಾಗಿರುವವರು. ಇಲ್ಲಿನ ಭಾಗ್ಯ ನಗರದ ಒಂಬತ್ತನೇ ಕ್ರಾಸ್ ದಲ್ಲಿ ಮನೆಯೊಂದರ ಮೇಲೆ ಮೊಬೈಲ್ ಟವರ್ ಕೂಡಿಸಲಾಗುತ್ತಿತ್ತು. ಆದರೆ ಇದಕ್ಕೆ ಪಾಲಿಕೆಯಿಂದ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ಅಲ್ಲಿನ ನಿವಾಸಿಗಳು ಅಭಿಜಿತ್ ಜವಳಕರ ಮೂಲಕ ಮಹಾನಗರಪಾಲಿಕೆಗೆ ದೂರು ಸಲ್ಲಿಸಿದ್ದರು. ಅದರಂತೆ ಗುರುವಾರ ಮೊಬೈಲ್ ಟವರ್ ಕೂಡಿಸುತ್ತಿದ್ದ ವ್ಯಕ್ತಿಯನ್ನು ಅಭಿಜಿತ್ ಜವಳಕರ ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಮೊಬೈಲ್ ಟವರ್ ಕೂಡಿಸುತ್ತಿದ್ದ ವ್ಯಕ್ತಿಯ ಕಡೆಯವರು ಅಭಿಜಿತ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸುದ್ದಿ ತಿಳಿದ ತಕ್ಷಣ ಬಿಜೆಪಿ ನಗರ ಸೇವಕರು ಟಿಳಕವಾಡಿ ಪೊಲೀಸ್ ಠಾಣೆಗೆ ಧಾವಿಸಿ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
Advertisement
Belagavi: ಮೊಬೈಲ್ ಟವರ್ ಅಳವಡಿಸುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಪ್ರತಿಭಟನೆ
07:00 PM Nov 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.