Advertisement
ಜೊತೆಗೆ ಕೋಟ್ಯಧಿಪತಿಯಾಗಿರುವ ಸಂತೋಷ ಪದ್ಮನ್ನವರ ಸಾವಿಗೆ ಅವರ ಪತ್ನಿಯೇ ಕಾರಣ ಎಂಬುದು ಮೇಲ್ನೋಟ್ಟಕ್ಕೆ ಕಂಡುಬಂದಿದ್ದು ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ಟೋಬರ್ 9ರಂದು ಕೋಟ್ಯಧಿಪತಿ, ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮನ್ನವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ನೀಡಿದ ಹೇಳಿಕೆ ಅನ್ವಯ ಲಿಂಗಾಯತ ಸಂಪ್ರದಾಯದಂತೆ ರುದ್ರಭೂಮಿಯಲ್ಲಿ ಕುಟುಂಬದವರ ಜೊತೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು, ಅಂತ್ಯಕ್ರೀಯೆ ನೆರವೇರಿದ ಬಳಿಕ ಮನೆ ಮಂದಿಯ ಜೊತೆ ಮನೆಯ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಲು ಸಹೋದರನ ಬಳಿ ಹೇಳಿದ್ದಾಳೆ ಈ ವೇಳೆ ಅಲ್ಲೇ ಇದ್ದ ತಾಯಿ ಮಗಳಿಗೆ ಮೊದಲು ಸ್ನಾನ ಮಾಡಿ ಬಾ ಆಮೇಲೆ ಸಿಸಿ ಟಿವಿ ಪರಿಶೀಲನೆ ಮಾಡುವಂತೆ ಎಂದು ಗದರಿಸಿದ್ದಾಳೆ ತಾಯಿಯ ಮಾತು ಕೇಳಿ ಮಗಳು ಸ್ನಾನಕ್ಕೆ ಹೋಗಿದ್ದಾಗ ತಾಯಿ ತನ್ನ ಪುತ್ರರ ಬಳಿ ಸಿಸಿ ಟಿವಿ ಫೂಟೇಜ್ ಡಿಲೀಟ್ ಮಾಡುವಂತೆ ಹೇಳಿದ್ದಾಳೆ ಅದರಂತೆ ಮಕ್ಕಳು ಡಿಲೀಟ್ ಮಾಡಿದ್ದಾರೆ ಮಗಳು ಸ್ನಾನ ಮಾಡಿ ಬಂದು ಸಿಸಿ ಫೂಟೇಜ್ ಪರಿಶೀಲನೆ ನಡೆಸಿದ ವೇಳೆ ತಂದೆ ತೀರಿಹೋದ ದಿನದ ಫೂಟೇಜ್ ಡಿಲೀಟ್ ಆಗಿತ್ತು ಇದರ ಬಗ್ಗೆ ಸಹೋದರರ ಬಳಿ ಕೇಳಿದಾಗ ಅಮ್ಮ ಡಿಲೀಟ್ ಮಾಡಲು ಹೇಳಿದ್ದಾಳೆ ಎಂದು ಹೇಳಿದ್ದಾರೆ ಇದರಿಂದ ಅನುಮಾನಗೊಂಡ ಮಗಳು ತನ್ನ ತಂದೆಯ ಸಾವಿನ ಹಿಂದೆ ಕೊಲೆ ಅನುಮಾನ ಇದೆ ಎಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾಳೆ.
ದೂರು ಸ್ವೀಕರಿಸಿದ ಮಾಳಮಾರುತಿ ಠಾಣೆ ಪೊಲೀಸರು ಕೂಡಲೇ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ, ಅಲ್ಲದೆ ಸಂತೋಷ ಅವರ ನೆರೆಮನೆಯವರ ಸಿಸಿ ಟಿವಿ ದೃಶ್ಯಾವಳಿ ಗಮನಿಸಿದಾಗ ಮನೆಗೆ ಯಾರೋ ಬಂದು ಹೋಗಿರುವುದು ಬೆಳಕಿಗೆ ಬಂದಿದೆ ಈ ಕುರಿತು ಸಂತೋಷ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಪತಿ ತನಗೆ ನಿರಂತರವಾಗಿ ಕಿರುಕುಳ ನೀಡಿತ್ತಿದ್ದು ಅಲ್ಲದೆ ನನ್ನ ಮೇಲೆ ಅನುಮಾನ ಪಡುತ್ತಿದ್ದ ಹಾಗಾಗಿ ತನ್ನ ಫೇಸ್ ಬುಕ್ ಗೆಳೆಯನ ಜೊತೆ ಸೇರಿ ಕುಡಿಯುವ ನೀರಿಗೆ ನಿದ್ದೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿದ ಬಳಿಕ ದಿಂಬಿನ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದುರುವುದಾಗಿ ಒಪ್ಪಿಕೊಂಡಿದ್ದಾಳೆ.
ಇತ್ತ ಸಂತೋಷ್ ಮೃತಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ತನ್ನ ಪತಿ ಹೃದಯಾಘಾತಗೊಂಡು ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಸಂಬಂಧಿಕರು ಸಂತೋಷ್ ಪತ್ನಿ ನಿಜ ಹೇಳುತ್ತಿದ್ದಾಳೆ ಎಂದು ನಂಬಿ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದಾರೆ ಇದರ ನಡುವೆ ಸಂತೋಷ್ ಅವರ ಓರ್ವ ಮಗಳು ಬೆಂಗಳೂರಿನಲ್ಲಿದ್ದು ಆಕೆಗೂ ವಿಚಾರ ತಿಳಿಸಲಾಗಿತ್ತು ಅದರಂತೆ ಆಕೆಯೂ ಮನೆಗೆ ಬಂದಿದ್ದಳು ಅಂತ್ಯಕ್ರಿಯೆ ಮುಗಿದು ಮನೆಗೆ ಬಂದ ವೇಳೆ ಮಗಳು ಮನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡಬೇಕೆಂದು ಸಹೋದರ ವಾಲಿ ಕೇಳಿಕೊಂಡಿದ್ದಾಳೆ ಇದೆ ವೇಳೆಗೆ ತನ್ನ ಕೃತ್ಯ ಹೊರಬರುತ್ತೆ ಎಂದು ಗಾಬರಿಗೊಂಡ ತಾಯಿ ಮಗಳಿಗೆ ಗದರಿಸಿ ಸ್ನಾನಕ್ಕೆ ಹೋಗುವಂತೆ ಹೇಳಿ ಆಕೆ ಸ್ನಾನಕ್ಕೆ ಹೋದ ವೇಳೆ ಸಿಸಿ ಟಿವಿ ದೃಶ್ಯಾವಳಿ ಯನ್ನು ಪುತ್ರರ ಸಹಕಾರದಿಂದ ಡಿಲೀಟ್ ಮಾಡಿಸಿದ್ದಾಳೆ.
Related Articles
ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಬಿಮ್ಸ್ ವೈದ್ಯರು, ಎಫ್‌ಎಸ್‌ಎಲ್, ಫಾರೆನ್ಸಿಕ್, ಮಾಳಮಾರುತಿ ಠಾಣೆ ಪೊಲೀಸರು ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಹೂತಿದ್ದ ಸಂತೋಷ್ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ಹೂತಿದ್ದಾರೆ.
Advertisement
ಪ್ರಾಥಮಿಕ ತನಿಖೆ ವೇಳೆ ಸಂತೋಷ ಸಾವು ಸಹಜವಲ್ಲ, ಕೊಲೆ ಎಂಬುದು ದೃಢಪಟ್ಟಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ಹೊರಬರಲಿದೆ.
ಇದನ್ನೂ ಓದಿ: KSRTC ದಸರಾ ಪ್ಯಾಕೇಜ್ ಯಶಸ್ವಿ; 6,010 ಪ್ರವಾಸಿಗರು ಭಾಗಿ, ಕೊಲ್ಲೂರಿಗೆ ಭರ್ಜರಿ ಬೇಡಿಕೆ