ಬೆಳಗಾವಿ: ಬೆಳಗಾವಿ ರಾಮತಿರ್ಥ ನಗರದಲ್ಲಿ ನಡೆದಿದ್ದ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ನಕಲಿ ವೈದ್ಯ ಅಬ್ದುಲ್ ಗಾಫರ್ ಲಾಡಖಾನ್ ಸೇರಿದಂತೆ ಐದು ಜನ ಮಕ್ಕಳ ಮಾರಾಟ, ಭ್ರೂಣಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು.
ನಕಲಿ ವೈದ್ಯ ಲಾಡಖಾನನಿಂದ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಹಾದೇವಿ ಜೈನ ಎಂಬ ನರ್ಸ್ ಹೆಣ್ಣುಮಗುವನ್ನು ಖರೀದಿಸಿ, ಬೆಳಗಾವಿಗೆ ಬಂದು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದರು.
ಕೂಸು ಬೆಳವಣಿಗೆ ಆಗದೆ ಕುಂಠಿತವಾಗಿತ್ತು. ತೂಕ ಹೆಚ್ಚಳ ಆಗದೆ ಅನಾರೋಗ್ಯದಿಂದ ಬಳಲುತ್ತಿದ್ದ ಕೂಸನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆರೈಕೆ ಪ್ರಕ್ರೀಯೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಈಗ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
“ಮೃತ ಕೂಸು ಸಂಪ್ರದಾಯದಂತೆ ದಿನ ತುಂಬುವ ಮೊದಲು ಕೃತಕವಾಗಿ ಜನಸಿದ್ದರಿಂದ ಮಗುವಿನ ತೂಕ ಬೆಳವಣಿಗೆಯಾಗದೆ ಕುಂಟಿತವಾಗಿದ್ದು ತೂಕ ಹೆಚ್ಚಳವಾಗದೇ ಅನಾರೋಗ್ಯದಿಂದ ಮಗು ಶುಕ್ರವಾರ ತಡರಾತ್ರಿ ಮರಣ ಹೊಂದಿದೆ. ಡಿಎನ್‌ಎ ಟೆಸ್ಟ್ ಸೇರಿದಂತೆ ಎಲ್ಲ ತರಹದ ತಪಾಸಣೆಗಳನ್ನು ಮಾಡಲು ಮೃತ ದೇಹವನ್ನು ಆಸ್ಪತ್ರೆಯ ತಪಾಸಣಾ ಕೊಟಡಿಯಲ್ಲಿ ಇರಿಸಲಾಗಿದೆ. ನಂತರ ಮೃತ ಮಗುವಿನ ದೇಹವನ್ನು ಅಂತ್ಯಕ್ರೀಯೆ ಪೊಲೀಸರಿಗೆ ಹಸ್ತಾಂತರಿಸಲಾಗುವುದು” ಎಂದು ಜಿಲ್ಲಾ ವೈದ್ಯಾಧಿಕಾರಿಯಾದ ಮಹೇಶ ಕೋಣಿ ಹೇಳಿದ್ದಾರೆ.
ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ YSRP ಕೇಂದ್ರ ಕಚೇರಿ ಧ್ವಂಸ; NDA ಸೇಡಿನ ರಾಜಕಾರಣ ಮಾಡುತ್ತಿದೆ; ಜಗನ್