Advertisement

ಬೆಳಗಾವಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಪಾಸಿಟಿವ್ ಪ್ರಕರಣ : 95 ಮಂದಿಯಲ್ಲಿ ಸೋಂಕು ದೃಢ

08:02 PM Jun 15, 2021 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ಕೊರೊನಾ ಸೋಂಕಿನ ಪ್ರಮಾಣ ಎರಡಂಕಿಗೆ ಬಂದಿದ್ದು, ಸಕ್ರಿಯ ಪ್ರಕರಣಗಳು ಇಳಿಕೆ ಆಗಿದೆ.

Advertisement

ಮಂಗಳವಾರ ಒಂದೇ ದಿನ ಕೇವಲ 95 ಜನರಿಗೆ ಸೋಂಕು ತಗುಲಿದೆ. 797 ಜನ ಗುಣಮುಖರಾಗಿದ್ದಾರೆ. ಸೋಂಕಿನ ಪ್ರಮಾಣ ಇಳಿಮುಖ ಆಗುತ್ತಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈವರೆಗೆ 73687 ಜನರಿಗೆ ಸೋಂಕು ತಗುಲಿದಂತಾಗಿದ್ದು, 68465 ಜನ ಚೇತರಿಸಿಕೊಂಡ0ತಾಗಿದೆ. ಸದ್ಯ 4515 ಸಕ್ರಿಯ ಪ್ರಕರಣಗಳು ಇವೆ.

ಬೆಳಗಾವಿ ನಗರ ಮತ್ತು ತಾಲೂಕು ಪ್ರದೇಶದಲ್ಲಿ 26 ಮಂದಿಗೆ ಸೋಂಕು ತಗುಲಿದ್ದು, ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಅಥನಿ 6, ಬೈಲಹೊಂಗಲ 5, ಚಿಕ್ಕೋಡಿ 18, ಗೋಕಾಕ 14, ಹುಕ್ಕೇರಿ 13, ಖಾನಾಪುರ 1, ರಾಮದುರ್ಗ 2, ರಾಯಬಾಗ 7 ಹಾಗೂ ಸವದತ್ತಿ 2 ಸೇರಿ ಒಟ್ಟು 95 ಮಂದಿಗೆ ಸೋಂಕು ತಗುಲಿದೆ.

ಇದನ್ನೂ ಓದಿ :ಭಾರತದಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರಿ ವಿರುದ್ಧ ಫೈಜರ್ ಶೇ. 92 ರಷ್ಟು ಪರಿಣಾಮಕಾರಿ : ವರದಿ

Advertisement

Udayavani is now on Telegram. Click here to join our channel and stay updated with the latest news.

Next