Advertisement

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

02:37 PM Dec 27, 2024 | Team Udayavani |

ಬೆಳಗಾವಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಗಾಂಧಿ ಭಾರತ ಅದ್ಧೂರಿ ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆಯಲ್ಲಿಯೇ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಗೌರವ ನಮನ ಸಲ್ಲಿಸಿತು.

Advertisement

ನಗರದ‌ ಸಿಪಿಎಡ್ ಮೈದಾನದಲ್ಲಿ ಶುಕ್ರವಾರ (ಡಿ.27) ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮನಮೋಹನ್ ಸಿಂಗ್ ಅವರ ಬದುಕು ನೋಡಿದರೆ‌ ಪವಾಡವಾಗಿದೆ. ಬಡತನ ಕುಟುಂಬದಲ್ಲಿ ಜನಿಸಿದರು. ದೇಶ ಕಂಡ ಶ್ರೇಷ್ಟ ಆರ್ಥಿಕ ತಜ್ಞರು. ಜಗತ್ತಿನಲ್ಲಿ ಆರ್ಥಿಕ ಕ್ಷೇತ್ರ ಸೇರಿ ಅನೇಕ ಕ್ಷೇತ್ರಗಳಲ್ಲಿ ಕೆಲಸ‌ ಮಾಡಿದ್ದಾರೆ. ‌ಮೃಧು ಸ್ವಭಾವ, ಮಿದುವಾಗಿ ಮಾತನಾಡುವ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.

ನಾವು ಭೇಟಿಯಾಗಿ ಹೇಳಿದ್ದನ್ನು ಬಹಳ ತಾಳ್ಮೆಯಿಂದ ಕೇಳುತ್ತಿದ್ದರು. ಪ್ರಾಮಾಣಿಕ ಪ್ರಧಾನಿಯಾಗಿದ್ದರು. ಅನೇಕ ಹುದ್ದೆಗಳನ್ನು ಅಲಂಕರಿಸಿ ಆ ಹುದ್ದೆಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ.  ದೇಶವನ್ನು ಆರ್ಥಿಕವಾಗಿ ಮೇಲೆತ್ತಿರುವುದನ್ನು ಈ ದೇಶ ಮರೆಯಲು ಸಾಧ್ಯವಿಲ್ಲ. ಆಹಾರ ಭದ್ರತೆ, ನರೇಗಾ, ಆರ್ ಟಿಐ ಸೇರಿದಂತೆ ವಿವಿಧ ಜನೋಪಯೊಗಿ ಯೋಜನೆಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು.‌ ಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯ ಅಗಲಿಕೆಯಿಂದ ಇಡೀ‌ ಜಗತ್ತಿಗೆ ಆರ್ಥಿಕ ನಷ್ಟವಾಗಿದೆ ಎಂದರು.

Advertisement

ಕರ್ನಾಟಕದ ಆರ್ಥಿಕತೆ ಸದೃಢವಾದ ಆರ್ಥಿಕತೆ ಎಂದು ಮನಮೋಹನ್‌ಸಿಂಗ್ ಅವರು ಬಣ್ಣಿಸಿದ್ದರು‌. ಮನಮೋಹನ್‌ಸಿಂಗ್ ರ ಜ್ಞಾನ ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಯಿತು. ‌ದೇಶದ ಸಾಮಾಜಿಕ‌ ಸಮಸ್ಯೆ ಪರಿಹರಿಸಲು ಸಾಧ್ಯವಾಯಿತು. ಗರ್ವದಿಂದ ನಡೆದುಕೊಳ್ಳದೆ ವಿನಯಶೀಲ ವ್ಯಕ್ತಿ ಆಗಿದ್ದರು. ಮೃದು ಭಾಷೆಯಿಂದಲೇ‌ ಅನೇಕರ‌ ಹೃದಯ ಗೆದ್ದಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಮನಮೋಹನ್‌ ಸಿಂಗ್ ಅವರಿಗೆ ಅಗಲಿಕೆ‌ ಕೋರುವ ಬದಲು ಆದರ್ಶ ಅಳವಡಿಸಿಕೊಳ್ಳುವುದೆ ನಿಜವಾದ ಶ್ರದ್ಧಾಂಜಲಿ.‌ ಶಾಸನಬದ್ಧವಾದ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಮನಮೋಹನ‌ ಸಿಂಗ್. ದೇಶದಲ್ಲಿ ಉದ್ಯೋಗ ಖಾತ್ರಿ ದೊಡ್ಡ ಕ್ರಾಂತಿ.‌ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಸಂಶೋಧನಾ ಅಧ್ಯಯನ ಕೇಂದ್ರ ಆರಂಭಿಸಲು ಸಲಹೆ ನೀಡಿದರು. ರೈತರ ಸಾಲ ಮನ್ನಾ ಮಾಡಿದ್ದು, ಎಲ್ಲ ವರ್ಗದ ಜನರ ರಕ್ಷಣೆ ನೀಡಿದ್ದು, ಕೂಲಿ ಕಾರ್ಮಿಕರ ಬೆನ್ನಿಗೆ ನಿಂತಿದ್ದು ಸಿಂಗ್. ಸತ್ತರೂ ಅವರ ಕಾರ್ಯಕ್ರಮ ಬದುಕಿದೆ. ಇವರ ಆದರ್ಶದಲ್ಲಿ ಬದುಕು ಸಾಗಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next