Advertisement

Belagavi; ಗುಂಪುಗಳ ಘರ್ಷಣೆ: ಮಾರಾಮಾರಿ-ಕಲ್ಲು ತೂರಾಟ

09:04 PM May 23, 2024 | Team Udayavani |

ಬೆಳಗಾವಿ: ಮಕ್ಕಳು ಕ್ರಿಕೆಟ್ ಆಟ ಆಡುವಾಗ ಆರಂಭವಾದ ಜಗಳ ದೊಡ್ಡವರ ಮಟ್ಟಿಗೆ ವಿಕೋಪಕ್ಕೆ ಬೆಳೆದು ಎರಡು ಕೋಮಿನ ಮಧ್ಯೆ ಗುಂಪು ಘರ್ಷಣೆಯಾಗಿ ಕಲ್ಲು ತೂರಾಟ ಮಾಡಿ ಮನೆಗಳ ಮೇಲೆ ದಾಳಿ ನಡೆಸಿದ ಘಟನೆ ನಗರದ ಶಹಾಪುರದ ಅಳವಾನ್ ಗಲ್ಲಿಯಲ್ಲಿ ಗುರುವಾರ ನಡೆದಿದೆ.

Advertisement

ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಸ್ಥಳಕ್ಕೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಸೇರಿ ಪೊಲೀಸರು ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಹೆಚ್ಚಿ‌ನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಅಳವಾನ್ ಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಡುವಾಗ ಜಗಳವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದೆ. ಗಲಾಟೆ ಆಗುವಾಗ ದೊಡ್ಡವರು ಬಂದಿದ್ದಾರೆ.‌ ಕೆಲವರು ಮಾರಕಾಸ್ತ್ರ ಹಿಡಿದುಕೊಂಡು ಬಂದು ಗಲಾಟೆ ನಡೆಸಿದ್ದಾರೆ.‌ ಎರಡು ಕೋಮಿನ ಮಧ್ಯೆ ಗುಂಪು ಘರ್ಷಣೆಯಾಗಿದ್ದು, ಪರಸ್ಪರ ಕೈ ಕೈ ಮಿಲಾಯಿಸುವಷ್ಟು ಹಂತಕ್ಕೆ ತಲುಪಿದೆ. ಕೆಲವರ ಮನೆಗಳ ಮೇಲೂ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆ ಎದುರು ಎರಡೂ ಗುಂಪಿನವರು ಜಮಾಯಿಸಿದ್ದಾರೆ. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಸ್ಥಳದಲ್ಲಿ ಇದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next