Advertisement

ರೌಡಿಗಳ ಮನೆ ಮೇಲೆ ಖಾಕಿ ಪಡೆ ದಾಳಿ

07:07 PM Mar 20, 2021 | Team Udayavani |

ಬೆಳಗಾವಿ: ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಸಿಸಿಬಿ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ಏಕಕಾಲಕ್ಕೆ ಸುಮಾರು 10 ಕಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಜನರಲ್ಲಿ ಭಯ ಮೂಡಿಸುತ್ತದ್ದ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ತಲವಾರ್‌, ಜಂಬೆ, ಚಾಕು, ಜಿಂಕೆ ಕೊಂಬು ಸೇರಿದಂತೆ ಅನೇಕ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಸಭೆ ಚುನಾವಣೆ ವೇಳೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಸಬಾರದು ಎಂಬ ಉದ್ದೇಶದಿಂದ ಮುಂಜಾಗ್ರತ ಕ್ರಮವಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಕಪಿಲೇಶ್ವರ ಗುಡಿಯ ಹಿಂದೆ ಇರುವ ಕಿಟ್ಟು ಅಲಿಯಾಸ್‌ ಗಣೇಶ ಜೋಗಿಂದರಸಿಂಗ್‌ ರಜಪೂತ, ರಮೇಶ ಅಲಿಯಾಸ್‌ ಅಮ್ಮು ಕಾಶಿ ಜಾಲಗಾರ, ರವಿ ಕಾಶಿ ಜಾಲಗಾರ, ಕಪಿಲೇಶ್ವರ ರಸ್ತೆಯ ತಾಂಗಡಿ ಗಲ್ಲಿಯ ಕಪೀಲ ರಮೇಶ ಭೋಸಲೆ, ಶಶಿ ಸಂಜಯ ಜಾಲಗಾರ, ರಾಹುಲ್‌ ಸಂಜಯ ಜಾಲಗಾರ, ಚವಾಟ ಗಲ್ಲಿಯ ಪ್ರಫುಲ್‌ ಬಾಳಕೃಷ್ಣ ಪಾಟೀಲ, ಪಾಟೀಲ ಮಾಳನ ವಿನಾಯಕ ಗೋಪಾಲ ಕಾಂಗಲೆ, ಬೆ„ಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ಹಾಲಿ ಶಾಸ್ತ್ರಿ ನಗರದ ವಿಶಾಸಲಸಿಂಗ್‌ ವಿಜಯಸಿಂಗ್‌ ಚವ್ಹಾಣ, ಖಂಜರ ಗಲ್ಲಿಯ ಫೆ„ಯುಮ್‌ ಜೈಲಾನಿ ಅಲಿಯಾಸ್‌ ಜಿಲಾನಿ ಕೋತವಾಲ್‌, ನಾನಾವಡಿಯ ಸಾಗರ(ಶೆ„ಲೇಶ) ಅಲಿಯಾಸ್‌ ಚೋಟ್ಯಾ ಅಶೋಕ ಜಾನಗವಳಿ, ಚಾಂದು ಗಲ್ಲಿಯ ಅತ್ತಾವುಲ್ಲಾ ಮಹ್ಮದರಸೂಲ್‌ ಕಿಲ್ಲೇದಾರ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಎಸಿಪಿ ನಾರಾಯಣ ಭರಮಣಿ ನೇತƒತ್ವದಲ್ಲಿ ಉದ್ಯಮಬಾಗ ಹಾಗೂ ಖಡೇಬಜಾರ್‌ ಇನ್ಸಪೆಕ್ಟರ್‌, ಸಿಬ್ಬಂದಿ ದಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next