ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸೇರಿದಂತೆ ಒಟ್ಟು 23 ಜನರು ನಾಮಪತ್ರ ಸಲ್ಲಿಸಿದ್ದಾರೆ. ಅಂತಿಮ ದಿನವಾದ ಮಂಗಳವಾರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಸೇರಿದಂತೆ 15 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಳೆ ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಉಪ ಚುನಾವಣೆಗೆ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಮುಕ್ತಾಯವಾದ ನಂತರ ಒಟ್ಟು 23 ಮಂದಿ 33 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೊನೆಯ ದಿನವಾದ ಮಂಗಳವಾರ ಪಕ್ಷೇತರರಾಗಿ ಬಸವರಾಜ ಹುದ್ದಾರ, ಶ್ರೀಕಾಂತ ಪಡಸಲಗಿ (ಮತ್ತೊಮ್ಮೆ ನಾಮ ಪತ್ರ ), ಭಾರತಿ ಚಿಕ್ಕನರಗುಂದ, ಸಂಗಮೇಶ ಚಿಕ್ಕನರಗುಂದ, ಗೌತಮ ಯಮನಪ್ಪ ಕಾಂಬ್ಳೆ, ಕೃಷ್ಣಾಜಿ ಪಾಟೀಲ, ಅಪ್ಪಾಸಾಹೇಬ ಕುರಣೆ, ಸುರೇಶ ಬಸಪ್ಪ ಮರಲಿಂಗನವರ, ಸುರೇಶ ಬಸವಂತಪ್ಪ ಪರಗನವರ, ಶುಭಂ ಶೆಳಕೆ (ಮತ್ತೊಮ್ಮೆ ನಾಮಪತ್ರ ), ಕಲ್ಲಪ್ಪ ದಶರಥ ಕರಲೇಕರ, ಘೂಳಪ್ಪ ಬಸಲಿಂಗಪ್ಪ ಮೇಟಿ, ಗಂಗಪ್ಪ ನಾಗನೂರ ಮತ್ತು ದಯಾನಂದ ಗುರುಪತ್ರಯ್ಯ ಚಿಕ್ಕಮಠ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ಸ್ವೀಕರಿಸಿದರು.
ಮೊದಲ ದಿನವಾದ ಮಾರ್ಚ್ 23ರಂದು ಇಬ್ಬರು ನಾಮಪತ್ರ ಸಲ್ಲಿಸಿದ್ದರು. 2ನೇ ದಿನ ಯಾರೂ ಸಲ್ಲಿಸಲಿಲ್ಲ. 3 ಹಾಗೂ 4ನೇ ದಿನ ತಲಾ ಒಬ್ಬರು, 5ನೇ ದಿನ 6 ಮಂದಿ ಮತ್ತು 6ನೇ ಹಾಗೂ ಕೊನೆಯ ದಿನವಾದ ಮಂಗಳವಾರ 15 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.