Advertisement

Belagavi: ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಘಟಿತ ಪ್ರಯತ್ನ ಅಗತ್ಯ

04:42 PM Nov 03, 2023 | Team Udayavani |

ಬೆಳಗಾವಿ: ಕಳೆದ ದಶಕಕ್ಕೆ ಹೋಲಿಸಿದರೆ ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಶೋಷಣೆ, ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿದ್ದು ಇವುಗಳನ್ನು ತಡೆಗಟ್ಟಲು ಸಂಘಟಿತ ಪ್ರಯತ್ನ ಅಗತ್ಯವಾಗಿದೆ ಎಂದು ಓಯಾಸಿಸ್‌ ಸಂಸ್ಥೆಯ ಡ್ಯಾನಿಯಲ್‌ ಜಾಬರ ಅಭಿಪ್ರಾಯಪಟ್ಟರು.

Advertisement

ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ, ಓಯಾಸಿಸ್‌ ಸಂಸ್ಥೆ ಹಾಗೂ ಜಯಭಾರತ ಫೌಂಡೇಶನ್‌ ಸಹಯೋಗದಲ್ಲಿ ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಹಾಗೂ ಹಿರೇಬಾಗೆವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆಗಾಗಿ ಮುಕ್ತಿ ಬೆ„ಕ್‌ ರ್ಯಾಲಿ ಹಾಗೂ ಬೀದಿನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಷ್ಟೇ ಸಮಾನವಾಗಿ ಕಂಡರೂ ಸಹ ಅವರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಲೈಂಗಿಕ ಶೋಷಣೆ, ಹೆ„ಟೆಕ್‌ ವೇಶ್ಯಾವಾಟಿಕೆ, ಪ್ರವಾಸೋದ್ಯಮ ಹೆಸರಲ್ಲಿ ವೇಶ್ಯಾವಾಟಿಕೆ, ಅಶ್ಲೀಲ ಚಿತ್ರ ನಿರ್ಮಾಣಕ್ಕೆ ಹೆಣ್ಣು ಮಕ್ಕಳ ಸಾಗಾಟ ಮಾಡುತ್ತಿರುವುದು ಸಮಾಜದ ಕರಾಳ ಮುಖವನ್ನು ಎತ್ತಿ ತೋರುತ್ತಿದೆ. ಇದನ್ನು ತಡೆಗಟ್ಟಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆಗಾಗಿ ವಿವಿಧ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೆಂಗಳೂರಿನಿಂದ ಮುಂಬೆ„ವರೆಗೆ ಜಪಾನ್‌
ಹಾಗೂ ಯು ಕೆ ದೇಶದ ಇಬ್ಬರೂ ಮಹಿಳೆಯರನ್ನು ಒಳಗೊಂಡಂತೆ 8 ಜನ ವಿದೇಶಿ ಪ್ರಜೆಗಳೊಂದಿಗೆ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೆ„ಕ್‌ ರ್ಯಾಲಿ ಹಾಗೂ ಬೀದಿನಾಟಕ ಆಯೋಜಿಸಿ ಸಮಾಜದಲ್ಲಿ ಅರಿವು ಮುಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಜ್ವಲಾ ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸುರೇಖಾ ಪಾಟೀಲ, ಓಯಾಸಿಸ ಸಂಸ್ಥೆಯ ವಿಶ್ವಾಸ ಉದಗಿಕರ್‌, ಕೇಶವನ್‌ ಮುನುಸ್ವಾಮಿ ಆರ್ಮುಗಮ್‌, ಸಮುದಾಯ ಅಭಿವೃದ್ಧಿ ಅಧಿಕಾರಿ ಸೆಂಥಿಲಕುಮಾರ, ಮಕ್ಕಳ ರಕ್ಷಣಾ ಸಮಾಜ ಕಾರ್ಯಕರ್ತೆ ಸಂಗೀತಾ, ಶಾರದಾ, ರವದಿ ಫಾರ್ಮ ಹೌಸನ್‌ ಮುಖ್ಯಸ್ಥರಾದ ಗವೀಶ ರವದಿ ಹಾಗೂ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಕೆ ಎ ಬಡಿಗೇರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next