ಬೆಳಗಾವಿ: ರಸ್ತೆ ಸಂಚಾರ ನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು. ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಸಂಚಾರ ನಿಯಮದ ಜೊತೆಗೆ ಕಾನೂನು ಪಾಲನೆ ಬಗ್ಗೆ ಶೈಕ್ಷಣಿಕ ಹಂತದಲ್ಲಿಯೇ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ವಾರಕ್ಕೆ ಒಂದು ಗಂಟೆ ವಿದ್ಯಾರ್ಥಿಗಳಿಗೆ ಸಮಯ ನಿಗದಿ ಮಾಡಬೇಕು. ಈ ಕುರಿತು ಖಾಸಗಿ ಶಾಲೆಗಳಿಗೂ ಸೂಚನೆ ನೀಡಲು ತಿಳಿಸಿದರು.
ವಾಹನ ಚಾಲನೆ ಪರವಾನಗಿ ಪಡೆಯಲು ಇನ್ನಷ್ಟು ಪರೀಕ್ಷೆ ನೀಡಬೇಕು. ಆನ್‌ಲೈನ್ ಪರೀಕ್ಷೆ, ವಾಹನ ಚಾಲನೆ ಪರೀಕ್ಷೆ ಜೊತೆಗೆ ಸಿಗ್ನಲ್ ಅರಿವು ಹೀಗೆ ಪರವಾನಿಗೆ ಪಡೆಯಲು ಸಂಚಾರಿ ನಿಯಮದ ಬಗ್ಗೆ ಹೆಚ್ಚು ತಿಳಿಸಬೇಕು ಎಂದು ಆರ್‌ಟಿಒ ಅ ಧಿಕಾರಿಗಳಿಗೆ
ತಿಳಿಸಿದರು.
ವಾಹನ ಅಪಘಾತಗಳನ್ನು ಕಡಿಮೆ ಮಾಡಲು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಹಾಗೂ ಮಧ್ಯದ ಮರಗಳನ್ನು ವರ್ಷದಲ್ಲಿ 3ರಿಂದ 4 ಬಾರಿ ಕಟಾವು ಮಾಡಬೇಕು. ಬಸ್ ನಿಲ್ದಾಣಗಳಲ್ಲಿ ಎಲ್‌ಇಡಿ ಫಲಕಗಳ ಮೂಲಕ ಅಪಘಾತ ಫೋಟೋ ಮತ್ತು ವಿಡಿಯೋ ಪ್ರದರ್ಶನ ಹಾಗೂ ರಸ್ತೆ ಸಂಚಾರ ನಿಯಮಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿ ಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಹತ್ತಿರದ ಪ್ರದೇಶದಲ್ಲಿ ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಭಾಗಗಳಲ್ಲಿ ಅಂಬುಲೆನ್ಸ್ ಸೌಲಭ್ಯ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿ ಕಾರಿಗಳಿಗೆ ತಿಳಿಸಿದರು. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್.ಕೆ.ಎಚ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಓದಿ :
ಫೆ.18-19ರಂದು ಸರ್ಕಾರಿ ನೌಕರರ ಕ್ರೀಡಾಕೂಟ