Advertisement
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ನವೆಂಬರ್ 21ರಂದು ಅಮಾನವೀಯ ಕೃತ್ಯ ನಡೆದಿದ್ದು ಈ ಕುರಿತು ಮಹಿಳೆ ಠಾಣೆಯಲ್ಲಿ ದೂರು ನೀಡಿದರು ಸ್ಪಂದಿಸದ ಪೊಲೀಸರು ಇದೀಗ ಘಟನೆ ನಡೆದಿರುವ ಕುರಿತು ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಜಮೀನಿಗೆ ಹೊಂದಿಕೊಂಡೇ ಕೆಲ ಆರೋಪಿಗಳು ಪೈಪ್‌ಲೈನ್ ಅಳವಡಿಕೆ ಮಾಡಿದ್ದರು ಇದರಿಂದ ಸಂತ್ರಸ್ತ ಮಹಿಳೆಯ ಜಮೀನಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. ಈ ಕುರಿತು ಮಹಿಳೆ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು ಅದರಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪೈಪ್‌ಲೈನ್ ತೆರವುಗೊಳಿಸಿದ್ದರು.
Related Articles
Advertisement
ಘಟನೆ ಕುರಿತು ಸಂತ್ರಸ್ತ ಮಹಿಳೆ ಠಾಣೆಗೆ ದೂರು ನೀಡಲೆಂದು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಮಹಿಳೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಗ್ರಾಮ ಪಂಚಾಯತ್ ನಲ್ಲಿ ಕೂಡಿ ಹಾಕಿ ಮತ್ತೆ ಬಟ್ಟೆಗಳನ್ನು ಎಳೆದಾಡಿ ಬೆತ್ತಲೆಗೊಳಿಸಿ ಕೈಯಲ್ಲಿದ್ದ ಪರ್ಸ್ ಕಸಿದು ಅದರಲ್ಲಿದ್ದ ಮೊಬೈಲ್ ಹಣ ಕಸಿದು ಬಲವಂತವಾಗಿ ಕಾಗದ ಪತ್ರಕ್ಕೆ ಸಹಿ ಹಾಕಿಸಿ ಸಂಜೆ ವೇಳೆಗೆ ಬಿಟ್ಟಿದ್ದಾರೆ.
ಇದಾದ ಮಾರನೇ ದಿನ ಸಂತ್ರಸ್ತ ಮಹಿಳೆ ಬೈಲಹೊಂಗಲ ಠಾಣೆಗೆ ಹೋಗಿ ದೂರು ನೀಡಿದರೂ ಪೊಲೀಸರು ಸ್ಪಂದಿಸಲಿಲ್ಲ. ಇದರಿಂದ ಬೇಸರಗೊಂಡ ಮಹಿಳೆ ಮಹಿಳಾ ಆಯೋಗದ ಮೊರೆ ಹೋಗಿದ್ದು ಇದೀಗ ಅವರ ಹೇಳಿಕೆಯ ಆಧಾರದ ಮೇಲೆ ಡಿಸೆಂಬರ್ 30ರಂದು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತಿಗಡಿ ಗ್ರಾಮದ ಕಲ್ಲಪ್ಪ ಡೊಂಕನ್ನವರ ಅಡಿವೆಪ್ಪ ದಳವಾಯಿ, ಕಲ್ಪನಾ ಡೊಂಕನ್ನವರ, ಸಾಧಿಕ ಬಾಳೇಶಿ, ಇಸ್ಮಾಯಿಲ್ ಬಾಳೇಶಿ, ಶಿವಬಸಪ್ಪ ಕರಡಿಗುದ್ದಿ ಸೇರಿ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದೀಗ ಈ ಪ್ರಕರಣ ಬೆಳಗಾವಿ ಜಿಲ್ಲಾ ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದು ಇದುವರೆಗೂ ಯಾರ ಬಂಧನ ಆಗಿಲ್ಲ.
ಇದನ್ನೂ ಓದಿ: ಚಿತ್ರಕಲಾ ಪರಿಷತ್‌ನಲ್ಲಿ ಜ.7ರಂದು ಚಿತ್ರಸಂತೆ; 1,500 ಕಲಾವಿದರ ಕಲಾಕೃತಿ ಪ್ರದರ್ಶನ