Advertisement
ಕೋಟೆಯ ಇತಿಹಾಸ;
Related Articles
Advertisement
ಆಕರ್ಷಣಾ ಕೇಂದ್ರ:
ಬೇಕಲ ಕೋಟೆ ಪ್ರವೇಶ ದ್ವಾರದ ಹೆಬ್ಟಾಗಿಲಿನಲ್ಲಿ ಮುಖ್ಯಪ್ರಾಣ ದೇವರನ್ನು ನಮಸ್ಕರಿಸಿ ಮುಂದೆ ಸಾಗಿದರೆ ಹೆಬ್ಟಾಗಿಲು ಪ್ರವೇಶಿಸುತ್ತಿದ್ದಂತೆ ಬಗೆ ಬಗೆಯ ಹೂವುಗಳು ನಮ್ಮನ್ನು ಸ್ವಾಗತಿಸುತ್ತವೆ. ಸುಮಾರು ನಲವತ್ತು ಎಕರೆಯಷ್ಟು ಪ್ರದೇಶವನ್ನು ಆವರಿಸಿರುವ ಕೋಟೆ, ಕೋಟೆಯ ಸುತ್ತಲು ನಡೆದಾಡಲು ರತ್ನ ಕಂಬಳಿ ಹಾಸಿದಂತೆ ಭಾಸವಾಗುವ ಕೆಂಪು ಕಲ್ಲುಗಳಿಂದ ನಿರ್ಮಾಣ ಮಾಡಿರುವ ವಾಕಿಂಗ್ ಟ್ರಾಕ್, ಇದರಲ್ಲಿ ನಡೆದಾಡಲು ಪ್ರಾರಂಭಿಸಿದರೆ ಇಲ್ಲಿನ ನಾನಾ ಆಕರ್ಷಣೆಯ ಕೇಂದ್ರಗಳು ನಮ್ಮನ್ನು ಆಯಾಸವಿಲ್ಲದೆ ನಡೆದಾಡುವಂತೆ ಮಾಡುತ್ತದೆ.
ಪ್ರಮುಖ ಆಕರ್ಷಣೆ ಎಂದರೆ ಇಲ್ಲಿರುವ ಪರಿವೀಕ್ಷಣಾ ಗೋಪುರ ಈ ಗೋಪುರಕ್ಕೆ ಹತ್ತಿ ಇಳಿಯುವುದೇ ಒಂದು ಆನಂದ ಈ ಗೋಪುರದ ಮೇಲೆ ನಿಂತು ಕಣ್ಣು ಹಾಯಿಸಿದರೆ ವಿಶಾಲವಾದ ಪ್ರಕೃತಿಯ ಸೊಬಗನ್ನು ಮೈಗೂಡಿಸಕೊಳ್ಳಬಹುದು. ಒಂದು ಬದಿಯಲ್ಲಿ ಹಸಿರು ಹಸಿರಾಗಿರುವ ಹೂ ಗಿಡಗಳು ಮತ್ತೊಂದು ಕಡೆ ಕಡು ನೀಲಿ ಬಣ್ಣದಿಂದ ಕಂಗೊಳಿಸುತ್ತಿರುವ ಸಮುದ್ರ. ಕೋಟೆಯ ಸುತ್ತಲೂ ವೀಕ್ಷಣಾ ಗೋಪುರಗಳಿವೆ ಪ್ರತಿಯೊಂದು ಗೋಪುರದಲ್ಲಿಯೂ ಸಣ್ಣ ಸಣ್ಣ ಕಿಂಡಿಗಳು ಇದ್ದು ಇದರಿಂದ ಕೋಟೆಯ ಹೊರಗಿನ ಸೊಬಗನ್ನು ವೀಕ್ಷಿಸಬಹುದಾಗಿದೆ.
ಸಂಜೆಯ ಹೊತ್ತು ಈ ಕೋಟೆಯ ಮೇಲೆ ನಿಂತು ಸೂರ್ಯಾಸ್ತ ನೋಡುವುದೇ ಒಂದು ಅದ್ಬುತ ಎಂದು ಹೇಳುತ್ತಾರೆ ಇಲ್ಲಿಯ ಪ್ರವಾಸಿಗರು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋದ ಅನುಭವವಾಗುತ್ತದೆ. ಕೋಟೆಯಿಂದ ಸಮುದ್ರಕ್ಕೆ ತೆರಳಲು ಸುರಂಗ ಮಾರ್ಗವಿದೆ ಜೊತೆಗೆ ಶಸ್ತ್ರಾಸ್ತ್ರಗಳನ್ನು ಇಡುವ ಕೊಠಡಿಗಳನ್ನು ಇಲ್ಲಿ ಕಾಣಬಹುದಾಗಿದೆ.
ಚಿತ್ರೀಕರಣದ ತಾಣ:
ಬೇಕಲ ಕೋಟೆಯಲ್ಲಿ ಹಲವಾರು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ ಅದರಲ್ಲಿ ನಿರ್ದೇಶಕ ಮಣಿರತ್ನಂ ನಿರ್ದೇಶನದ ಬಾಂಬೆ ಚಿತ್ರದ ಹಾಡಿನ ಚಿತ್ರೀಕಣದಿಂದ ಹೆಚ್ಚು ಜನಪ್ರೀಯತೆ ಪಡೆದುಕೊಂಡಿತು ತದನಂತರದಲ್ಲಿ ಹಲವಾರು ಭಾಷೆಯ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡವು.
ಪ್ರಯಾಣ ಹೇಗೆ? :
ಬಸ್ ಅಥವಾ ರೈಲಿನ ಮೂಲಕ ಕಾಸರಗೋಡಿಗೆ ಬಂದರೆ ಸ್ಥಳೀಯ ಬಸ್ಸಿನ ಮೂಲಕ 20 ನಿಮಿಷದಲ್ಲಿ ಕೋಟೆ ತಲುಪಬಹುದು. ಮಂಗಳೂರಿನ ಪುತ್ತೂರು, ಸುಳ್ಯ ಭಾಗದಿಂದ ಬರುವ ಪ್ರವಾಸಿಗರು ಚೆರ್ಕಳ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೇಕಲ ಕೋಟೆಗೆ ತೆರಳಬಹುದು. ಕಾಸರಗೋಡಿನಿಂದ 9 ಕಿ.ಮೀ.ದೂರದಲ್ಲಿರುವ ಬೇಕಲ ಕೋಟೆ, ಕರ್ನಾಟಕದ ಕೊಡಗು ಜಿಲ್ಲೆಗೂ ಹತ್ತಿರವಾಗಿದೆ. ಮಂಗಳೂರಿನಿಂದ 63 ಕಿ.ಮೀ.ದೂರದಲ್ಲಿದೆ.