Advertisement

ಚಿಂತನೆ: ಬೈರೂತ್‌ ಸ್ಫೋಟ: ಜಗತ್ತಿಗೆ ಕಲಿಸುತ್ತಿರುವ ಪಾಠ!

05:51 PM Aug 13, 2020 | mahesh |

ಆಗಸ್ಟ್ 5ರಂದು ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭಯಾನಕ ಸ್ಫೋಟವು 200ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, 7 ಸಾವಿರಕ್ಕೂ ಅಧಿಕ ಜನರನ್ನು ಗಾಯಗೊಳಿಸಿತು. ಈ ಸ್ಫೋಟದಿಂದಾಗಿ ಕನಿಷ್ಠ 10-15 ಶತಕೋಟಿ ಡಾಲರ್‌ಗಳಷ್ಟಾ ದರೂ ಆಸ್ತಿಪಾಸ್ತಿ ನಾಶವಾಗಿದ್ದು, ಇದು ಸರಿಸುಮಾರು 3 ಲಕ್ಷ ಜನರನ್ನು ನಿರ್ವಸತಿಗರನ್ನಾಗಿಸಿದೆ. ಈ ಸ್ಫೋಟದ ತೀವ್ರತೆಯು ಅನೇಕ ದೇಶಗಳಿಗೆ ಎಚ್ಚರಿಕೆಯ ಸಂದೇಶವನ್ನು ಕಳು ಹಿಸಿದೆ.

Advertisement

2013ರಿಂದ ಬೈರೂತ್‌ ಬಂದರಿನಲ್ಲಿ ಶೇಖರಣೆಯಲ್ಲಿದ್ದ 2,750 ಟನ್‌ ಅಮೋನಿಯಂ ನೈಟ್ರೇಟ್‌ನಿಂದಾಗಿ ಬೃಹತ್‌ ಸ್ಫೋಟ ಕಾಣಿಸಿಕೊಂಡಿದೆ. ಅದನ್ನು ಸಾಗಿಸಿದ ಹಡಗು ಕಾಣದಂತಾಯಿತು ಮತ್ತು ಅದರ ಮಾಲೀಕ ಆ ಹಡಗನ್ನು ಬಂದರಿನಲ್ಲೇ ಎಂದೋ ಬಿಟ್ಟುಹೋಗಿದ್ದನಂತೆ. 1947ರಲ್ಲೂ ಇದೇ ರೀತಿ ಅಮೆರಿಕದ ಟೆಕ್ಸಾಸ್‌ನಲ್ಲಿ ಬಂದರು ಪ್ರದೇಶದಲ್ಲಿ ಅಮೋನಿಯಂ ನೈಟ್ರೇಟ್‌ ಸಾಗಿಸುತ್ತಿದ್ದ ಹಡಗನ್ನು ನಿಲ್ಲಿಸಲು ಯತ್ನಿಸಿದಾಗ ಅದು ಬೆಂಕಿಗೆ ಆಹುತಿಯಾಗಿತ್ತು. ಆ ಮಹಾಸ್ಫೋಟವು 1,000 ಕಟ್ಟಡಗಳನ್ನು ನಾಶಪಡಿಸಿತ್ತು ಮತ್ತು 500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು!

ಅಮೋನಿಯಂ ನೈಟ್ರೇಟ್‌ ಮೊದಲಿಂದಲೂ ಒಂದಲ್ಲ ಒಂದು ರೀತಿಯ ಅವಘಡಗಳಿಗೆ ಕಾರಣವಾಗಿವೆ. ಈ ಕಾರಣಕ್ಕಾಗಿಯೇ ಹೆಚ್ಚಿನ ದೇಶಗಳು ಈ ರಾಸಾಯನಿಕವನ್ನು ಶೇಖರಿಸಿಡುವ ವಿಚಾರದಲ್ಲಿ ಕಠಿಣ ನಿಯಮಗಳನ್ನು ಹೊಂದಿವೆ. ಆದರೆ ಬೈರೂತ್‌ನಂಥ ಘಟನೆಯು, ಇಂಥ ನಿಯಮಗಳು ಸರಿಯಾಗಿ ಪಾಲನೆಯಾಗುವುದಿಲ್ಲ ಎನ್ನುವುದನ್ನು ಸಾರುತ್ತಿದೆ. ಮತ್ತೂಂದು ಅಂಶವೆಂದರೆ, ಅಮೋನಿಯಂ ನೈಟ್ರೇಟ್‌ ಎಂದಷ್ಟೇ ಅಲ್ಲ, ಇತರೆ ಅಪಾಯಕಾರಿ ವಸ್ತುಗಳನ್ನು ಈಗಲೂ ಪ್ರಪಂಚದಾದ್ಯಂತ ನಿರ್ವಿಘ್ನವಾಗಿ ರವಾನಿಸಲಾಗುತ್ತಿದೆ ಮತ್ತು ಇದರ ಅಕ್ರಮ ವ್ಯಾಪಾರ ನಡೆದೇ ಇದೆ.

2015ರಿಂದ ತಮಿಳುನಾಡಿನ ಚೆನ್ನೈನಲ್ಲಿ ಸುಮಾರು 700 ಟನ್‌ ಅಮೋನಿಯಂ ನೈಟ್ರೇಟ್‌ ಇರುವುದು ಕಂಡು ಬಂದಿದೆ. ಇದು ಸ್ಫೋಟಕ ದರ್ಜೆಯದ್ದಾಗಿದೆ ಮತ್ತು ರಸಗೊಬ್ಬರ ದರ್ಜೆಯದ್ದಲ್ಲ ಎಂದು ಪತ್ತೆಯಾದ ನಂತರ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕಡಲ ಸುರಕ್ಷತಾ ವ್ಯವಸ್ಥೆ ಗಳು ಹೆಚ್ಚಾಗಿ ತಮ್ಮ ಗಮನವನ್ನು ಕಡಲ್ಗಳ್ಳತನ ಅಥವಾ ಭಯೋತ್ಪಾದನೆಯ ಮೇಲೆಯೇ ಕೇಂದ್ರೀಕರಿಸಿರುವುದರಿಂದಾಗಿ, ಅನ್ಯ ಅಪಾಯಗಳ ತಡೆಗಟ್ಟುವಿಕೆ ಪ್ರಾಮುಖ್ಯತೆ ಪಡೆಯುತ್ತಿಲ್ಲ.

ಇಂಟನ್ಯಾಷನಲ್‌ ಮ್ಯಾರಿಟೈಮ್‌ ಆರ್ಗನೈಸೇಶನ್‌ ಪ್ರಕಾರ, 2017ರಿಂದ ವಿಶ್ವಾದ್ಯಂತ ಬಂದರುಗಳಲ್ಲಿ 97 ಹಡಗುಗಳನ್ನು ತ್ಯಜಿಸಲಾಗಿದೆ. ಆದರೆ ಸತ್ಯವೇನೆಂದರೆ, ಪ್ರಪಂಚದಾದ್ಯಂತ ಬಂದರುಗಳಲ್ಲಿ ಈ ರೀತಿ ಕೈಬಿಡಲಾದ ಹಡಗು, ಕಂಟೇನರ್‌ಗಳ ಸಂಖ್ಯೆ ನಿಖರವಾಗಿ ಎಷ್ಟಿದೆ? ಅಥವಾ ಅವುಗಳು ಎಷ್ಟು ಅಪಾಯಕಾರಿ ವಸ್ತುಗಳಿಂದ ತುಂಬಿವೆ ಎಂಬುದರ ಬಗ್ಗೆ ಯಾವುದೇ ವಿಶ್ವಾಸಾರ್ಹ ಅಂದಾಜು ಇಲ್ಲ. ಕೆಲವು ವರದಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಕಂಟೇನರ್ಗಳು – ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ನಂಥ ತ್ಯಾಜ್ಯ ಗಳನ್ನು ಏಷ್ಯನ್‌ ಬಂದರುಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತವೆ ಎಂದು ಈ ವರದಿಗಳು ತಿಳಿಸಿವೆ.

Advertisement

ಕಳೆದ ವರ್ಷವಷ್ಟೇ ಕೊಲಂಬೊದ ಬಂದರು ಅಧಿಕಾರಿಗಳು ಮಾನವ ಅವಶೇಷ ಗಳನ್ನು ಒಳಗೊಂಡಿರಬಹುದಾದ ಕ್ಲಿನಿಕಲ್‌ ತ್ಯಾಜ್ಯದಿಂದ ತುಂಬಿದ 100ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಪತ್ತೆ ಮಾಡಿದ್ದರು! ಈ ಕಂಟೇನರ್‌ಗಳಿಂದ ಆಗುತ್ತಿದ್ದ ಸೋರಿಕೆಯು ಸಾರ್ವಜನಿಕ ಆರೋಗ್ಯ ಭೀತಿಗೆ ಕೂಡ ಕಾರಣವಾಗಿತ್ತು.

ಬೈರೂತ್‌ ದುರಂತವು, ಕಡಲ ಭದ್ರತೆಯ ನಿಯಮಗಳನ್ನು ಮರುಪರಿಶೀಲಿಸುವುದಕ್ಕೆ ಎಲ್ಲಾ ರಾಷ್ಟ್ರಗಳಿಗೂ ಪಾಠ ಕಲಿಸಬೇಕು. ಮುಖ್ಯವಾಗಿ, ಕಾನೂನುಬಾಹಿರವಾಗಿ ಅಪಾಯಕಾರಿ ವಸ್ತುಗಳ ಸಾಗಣೆ ಮತ್ತು ಸಂಗ್ರಹಣೆಗಳನ್ನು ಮಾಡುವ ಮಾಲೀಕರಿಗೆ ಭಾರೀ ದಂಡ, ಕಠಿಣ ಶಿಕ್ಷೆಗಳನ್ನು ನೀಡಿದಾಗ ಮಾತ್ರ ಭವಿಷ್ಯದಲ್ಲಿ ಇಂಥ ಘಟನೆಗಳು ಸಂಭವಿಸುವುದನ್ನು ತಡೆಯಬಹುದಾಗಿದೆ.

ಸಂದೀಪ್‌ ಶರ್ಮಾ ಎಂ., ಸಿವಿಲ್‌ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next