Advertisement

ಬೈರೂತ್ ಮಹಾಸ್ಫೋಟ- ಲೆಬನಾನ್ ಜನರಿಗೆ ಆಹಾರ ಕೊರತೆಗೆ ಕಾರಣವಾಗಲಿದೆಯೇ?

05:14 PM Aug 06, 2020 | Nagendra Trasi |

ಬೈರೂತ್‌: ಲೆಬನಾನ್‌ನಲ್ಲಿ  ನಡೆದ ಸ್ಫೋಟಕ್ಕೆ ಇಡೀ ರಾಜಧಾನಿಯೇ ತತ್ತರಿಸಿದೆ. ಇದರ ಭೀಕರತೆ ಎಷ್ಟು ತೀವ್ರವಾಗಿತ್ತು ಎಂದರೆ, 240 ಕಿ.ಮೀ. ದೂರದ ದ್ವೀಪದಲ್ಲೂ ಸ್ಫೋಟದ ಸದ್ದು ಕೇಳಿಸಿದೆ.

Advertisement

ಇಡೀ ಬೈರೂತ್‌ ಪಟ್ಟಣ ಸ್ಫೋಟದಿಂದಾಗಿ ನಲುಗಿ ಹೋಗಿದೆ. ಬಂದರಿನ ಬಳಿಯಿದ್ದ ಕಟ್ಟಡಗಳೆಲ್ಲ ಧ್ವಂಸವಾಗಿವೆ. ಗಾಜಿನ ಚೂರುಗಳ ಬಿರುಗಾಳಿಯೇ ಬೀಸಿದಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸ್ಫೋಟಕ್ಕೆ ಸದ್ಯ 100ಕ್ಕೂ ಅಧಿಕ ಜನರು ಬಲಿಯಾಗಿದ್ದರೆ, 4,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯುತ್ತಲೇ ಇದ್ದಾರೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದ ಗೋಪುರಾಕಾರದ ಕಟ್ಟಡಗಳು ನೆಲಸಮವಾಗಿವೆ. ಇವು ಕೇವಲ ಕಟ್ಟಡಗಳಾಗಿರಲಿಲ್ಲ, ಬದಲಿಗೆ ಗೋಧಿ ಸೇರಿ ವಿವಿಧ ಧಾನ್ಯಗಳ ದಾಸ್ತಾನು ಗೋದಾಮುಗಳಾಗಿದ್ದವು. 1.20 ಲಕ್ಷ ಟನ್‌ ದಾಸ್ತಾನು ಸಾಮರ್ಥ್ಯ ಹೊಂದಿದ್ದವು.

ಆದರೆ, ಸ್ಫೋಟದ ಸಮಯದಲ್ಲಿ ಅಲ್ಲಿ ಹೆಚ್ಚು ದಾಸ್ತಾನಿರಲಿಲ್ಲ ಎಂದು ಹೇಳಲಾಗಿದೆ.

Advertisement

ಸಾಮಾನ್ಯವಾಗಿ 3 ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ಶೇಖರಿಸಿಡಲಾಗುತ್ತಿತ್ತು. ಆದರೆ, ಸದ್ಯ ಲೆಬನಾನ್‌ನಲ್ಲಿ  ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಗಾಗುವಷ್ಟು ಗೋಧಿ ಹಾಗೂ ಇತರ ಧಾನ್ಯವಿದೆ ಎಂದು ಹಣಕಾಸು ಸಚಿವ ರೆವೋಲ್‌ ನೆಹ್ಮೆ ಹೇಳಿದ್ದಾರೆ. ಇದಲ್ಲದೇ, ಬೈರುತ್‌ ಬಂದರು ಇನ್ನಾರು ತಿಂಗಳು ಯಾವುದೇ ಹಡಗಿನಿಂದ ಆಮದನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ.

ಟ್ರಿಪೋಲಿ ಬಂದರಿನಲ್ಲಿ ಹಡಗು ನಿಲ್ಲಬಹುದಾದರೂ ಅಲ್ಲಿ ಆಹಾರ ಧಾನ್ಯ ಸಂಗ್ರಹಕ್ಕೆ ಗೋದಾಮುಗಳಿಲ್ಲ ಎಂದು ಹೇಳಲಾಗಿದೆ. ಹೀಗಾಗಿ 25 ಸಾವಿರ ಗೋದಿ ಹಿಟ್ಟನ್ನು ತುರ್ತಾಗಿ ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಗೋದಾಮುಗಳಿಗೆ ಸಾಗಿಸಲಾಗುತ್ತದೆ. ಇದಲ್ಲದೇ, 28 ಸಾವಿರ ಟನ್‌ ಗೋದಿ ಹೊತ್ತ ನಾಲ್ಕು ಹಡಗುಗಳು ಇನ್ನಷ್ಟೇ ಬಂದರು ತಲುಪಬೇಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next