Advertisement

ವಯೋವೃದ್ಧರು ತಂತ್ರಜ್ಞಾನ ಬಳಕೆ ಮಾಡುವುದು ಉತ್ತಮ..! : ಅಧ್ಯಯನ ವರದಿ

09:44 PM May 16, 2021 | ಶ್ರೀರಾಜ್ ವಕ್ವಾಡಿ |

ಕೋವಿಡ್ ಸೋಂಕಿನ ಕಾರಣದಿಂದಾಗಿ ತಂತ್ರಜ್ಞಾನದ ಬೆಳವಣಿಗೆ ವೇಗವನ್ನು ಪಡೆದುಕೊಂಡಿದೆ ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ. ಜಗತ್ತಿನಾದ್ಯಂತ ಕೋವಿಡ್ ಸೋಂಕಿನ ಕಾರಣದಿಂದಾಗಿ ಜಗತ್ತಿಗೆ ಜಗತ್ತೇ ಲಾಕ್ ಡೌನ್ ಗೆ ಮೊರೆ ಹೋಗಿದ್ದಾಗ ಈ ತಂತ್ರಜ್ಞಾನ ಹೆಚ್ಚು ಬಳಕೆಗೆ ಬಂದಿದ್ದು ಸತ್ಯ.

Advertisement

ತಂತ್ರಜ್ಞಾನದ ಬಗ್ಗೆ ಅರಿವೇ ಇಲ್ಲದವರ ಕೂಡ ತಂತ್ರಜ್ಞಾನದ ಬಗ್ಗೆ ಸಾಕ್ಷರತೆಯನ್ನು ಕಂಡುಕೊಳ್ಳಬೇಕಾ ಸ್ಥಿತಿಯನ್ನು ಈ ಕೋವಿಡ್ ನಿಂದ ಉಂಟಾದ ಲಾಕ್ ಡೌನ್ ಮಾಡಿತ್ತು. ಹಿರಿಯರು, ಕಿರಿಯರು ಎಂಬ ವಯಸ್ಸಿನ ಗಡಿ ರೇಖೆಗಳಿಲ್ಲದ ಡಿಜಿಟಲೀಕರಣದತ್ತ ಮುಖ ಮಾಡಲೇ ಬೇಕಾಯಿತು.

ಇದನ್ನೂ ಓದಿ : ಏನಿದು ಬ್ಲ್ಯಾಕ್ ಫಂಗಸ್, ಹೇಗಿರುತ್ತೆ ? ಇದಕ್ಕೂ , ಕೊರೋನಾಗೂ ಏನು ಸಂಬಂಧ ?

ಲಾಕ್ ಡೌನ್ ನ ಕಾರಣದಿಂದಾಗಿ ಸಾಂಪ್ರದಾಯಿಕ ಸಂಪರ್ಕ ಇಲ್ಲದೇ ಹೋದಾಗ ವರ್ಚುವಲ್ ಮೀಟ್ ಗೆ ಒಗ್ಗಿಕೊಳ್ಳಲೇ ಬೇಕಾಯಿತು. ಹರೆಯದವರಿಗೆ ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದರೇ, ಅವರನ್ನು ಮೊಬೈಲ್ ಅಡಿಕ್ ಶಣ‍್ಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತದೆ. ಆದರೇ, ಇಲ್ಲೊಂದ ಅಧ್ಯಯನ ಆನ್ ಲೈನ್ ನಲ್ಲಿ ಹೆಚ್ಚ ಕಾಲ ಕಳೆದರೆ ಮತ್ತು ತಂತ್ರ ಜ್ಞಾನವನ್ನು ಹೆಚ್ಚು ಬಳಸಿದರೇ, ಪ್ರಯೋಜನಕಾರಿ ಎಂದಿದೆ ಅಂದರೇ ಆಶ್ಚರ್ಯ ಎನ್ನಿಸಿದರೂ ಸತ್ಯ.

ಯುಕೆ ಅಧ್ಯಯನವು, ಆನ್‌ ಲೈನ್‌ ನಲ್ಲಿ ಸಮಯ ಕಳೆಯುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಿದೆ. ವಯಸ್ಸಾದವರಿಗೆ, ಅವರ ಸಾಂಪ್ರದಾಯಿಕ ಸಾಮಾಜಿಕ ಸಂವಹನಗಳ ಹೊರತಾಗಿ, ಆನ್‌ ಲೈನ್ ಪ್ಲಾಟ್‌ ಫಾರ್ಮ್‌ ಗಳನ್ನು ಸಹ ಬಳಸುವುದರಿಂದ ಬುದ್ಧಿಮಾಂದ್ಯತೆಯಿಂದ ಪಾರಾಗಲು ಒಂದು ಮಾರ್ಗ ಎಂದು ಉಲ್ಲೇಖಿಸಿದೆ.

Advertisement

ವೆಸ್ಟ್ ಲಂಡನ್ ವಿಶ್ವವಿದ್ಯಾಲಯದ ಗೆಲ್ಲರ್ ಇನ್ಸ್ಟಿಟ್ಯೂಟ್ ಆಫ್ ಏಜಿಂಗ್ ಆ್ಯಂಡ್ ಮೆಮೊರಿ, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಈ ಅಧ್ಯಯನವು ಸಂವಹನಕ್ಕಾಗಿ ತಂತ್ರಜ್ಞಾನವನ್ನು ಆಗಾಗ್ಗೆ ಬಳಸಿಕೊಳ್ಳುವ ವಯಸ್ಸಾದವರಿಗೆ ಅರ್ಥಪೂರ್ಣ ಘಟನೆಗಳನ್ನು ನೆನಪಿಸಿಕೊಳ್ಳುವ ಉತ್ತಮ ಸಾಮರ್ಥ್ಯವನ್ನು ಒದಗಿಸಿಕೊಡುತ್ತದೆ.

ಹೌದು, “ಸೋಶಿಯಲ್ ಕಾಂಟ್ಯಾಕ್ಟ್ ಆ್ಯಂಡ್ 15 ಈಯರ್ ಎಪಿಸೊಡಿಕ್ ಮೆಮೊರಿ ಟ್ರಾಜೆಕ್ಟರೀಸ್ ಇನ್ ಓಲ್ಡರ್ ಅಡಲ್ಟ್ಸ್ ವಿಥ್ ಆ್ಯಂಡ್ ವಿಥೌಟ್ ಹಿಯರಿಂಗ್ ಲಾಸ್” ಎಂಬ ಅಧ್ಯಯನವು ಸುಮಾರು 11,000 ಮಂದಿ 50 ರಿಂದ 90 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಸಂವಹನ ಅಭ್ಯಾಸವನ್ನು ಅಧ್ಯಯನ ಮಾಡಿದೆ.

ಮುಖಾಮುಖಿ ಭೇಟಿ ಮತ್ತು ದೂರವಾಣಿ ಸಂವಹನಗಳಂತಹ ಸಾಂಪ್ರದಾಯಿಕ ಸಂವಹನ ವಿಧಾನಗಳನ್ನು ಮಾತ್ರ ಹೆಚ್ಚು ಬಳಸುತ್ತಿದ್ದವರು,  ಆನ್‌ ಲೈನ್‌ ನನ್ನು ಸಂವಹನ ಸಂಪರ್ಕಕ್ಕೆ ಹೆಚ್ಚಾಗಿ ಬಳಸಿಕೊಳ್ಳುವವರಿಗೆ ಹೋಲಿಸಿ ನೋಡಿದರೆ, ಸಾಂಪ್ರದಾಯಿಕವಾಗಿ ಸಂವಹನ ಸಂಫರ್ಕಗಳನ್ನು ಮಾಡುವವರಲ್ಲೆ ಹೆಚ್ಚು ಸ್ಮರಣೆ ಶಕ್ತಿ ಕುಂಟಿತಗೊಂಡಿದೆ ಎಂದು ಜೆರೊಂಟಾಲಜಿ ಜರ್ನಲ್ಸ್ ನಲ್ಲಿ ಪ್ರಕಟಗೊಂಡ ಈ ಅಧ್ಯಯನ ವರದಿ  ಹೇಳೀದೆ.

ಗೆಲ್ಲರ್ ಇನ್ಸ್ಟಿಟ್ಯೂಟ್ ನ ಅಸೋಸಿಯೇಟ್ ಪ್ರೊಫೇಸರ್ ಆಫ್ ಏಜಿಂಗ್ ಆ್ಯಂಡ್ ಡಿಮೇನ‍್ಶಿಯ ಕೇರ್ ವಿಭಾಗದ ಸ್ನೋರಿ ರಾಫ್ನ್ಸನ್ ಈ ಅಧ್ಯಯನದ ನೇತೃತ್ವವನ್ನು ವಹಿಸಿದ್ದರು.

ಆನ್‌ ಲೈನ್ ಸಾಮಾಜಿಕ ತಂತ್ರಜ್ಞಾನವನ್ನು ಬಳಸಲು ಮತ್ತು ತೊಡಗಿಸಿಕೊಳ್ಳಲು ಕಲಿಯುವುದರಿಂದ ಸ್ಮರಣೆಯನ್ನು  ಸಕ್ರಿಯವಾಗಿಡಲು ನೇರ ಅರಿವಿನ ಪ್ರಚೋದನೆಯನ್ನು ನೀಡುತ್ತದೆ. ಇದಲ್ಲದೆ, ವೈವಿಧ್ಯಮಯ ಮಾಧ್ಯಮಗಳ ಮೂಲಕ ಸಂವಹನ ಮಾಡುವುದರಿಂದ ಸಾಮಾಜಿಕ ಬೆಂಬಲ ವಿನಿಮಯ ಮತ್ತು ಸಂವಹನಗಳಿಗೆ ಅನುಕೂಲವಾಗಬಹುದು, ಇದು ನಮ್ಮ ಮೆದುಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ : ‘ಕಾಯಕಾವ್ಯ’ದೊಳಗಿನ ಪ್ರಸ್ತುತದ ನೈಜ ಧ್ವನಿ

Advertisement

Udayavani is now on Telegram. Click here to join our channel and stay updated with the latest news.

Next